ನವದೆಹಲಿ: ಕೇಂದ್ರ ಸರ್ಕಾರವು ರೈಲ್ವೆ ಕ್ಷೇತ್ರವನ್ನೂ ಖಾಸಗೀಕರಣ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ಇದರ ಬೆನ್ನಲ್ಲೇ “ಕೇಂದ್ರ ಸರ್ಕಾರವು ದೇಶದ 150 ರೈಲು ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ರಾಹುಲ್ ಗಾಂಧಿ ಪ್ರಸ್ತಾಪಿಸಿದ ಅಂಶವು ಎಷ್ಟರಮಟ್ಟಿಗೆ ನಿಜ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್‌ಚೆಕ್ ಮಾಡಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಭಾರತ್ ಜೋಡೋ ಯಾತ್ರೆ ಮಧ್ಯೆಯೇ ರಾಹುಲ್ ಗಾಂಧಿ ಅವರು ನವೆಂಬರ್ 12ರಂದು ಟ್ವೀಟ್ ಮಾಡಿದ್ದರು. “ದೇಶದ 150 ರೈಲು ನಿಲ್ದಾಣ, ರೈಲುಗಳು, ರೈಲು ಆಸ್ತಿಗಳನ್ನು ಖಾಸಗೀಕರಣಗೊಳಿಸಲಾಗಿದೆ. ಆದರೆ, ದೇಶದ ರೈಲ್ವೆ ಇಲಾಖೆಯು ನಿತ್ಯ 2.5 ಕೋಟಿ ಜನರ ಸಂಚಾರಕ್ಕೆ ನೆರವಾಗಿದೆ. ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ, ರೈಲ್ವೆಯು ದೇಶದ ಜನರ ಆಸ್ತಿಯಾಗಿದೆ. ದಯವಿಟ್ಟು ಇದನ್ನು ಖಾಸಗೀಕರಣಗೊಳಿಸಬೇಡಿ, ಮಾರಾಟ ಮಾಡಬೇಡಿ” ಎಂದು ಆಗ್ರಹಿಸಿದ್ದರು.
ಫ್ಯಾಕ್ಟ್‌ಚೆಕ್ ವರದಿ ಹೇಳುವುದೇನು?
ಪಿಐಬಿ ಫ್ಯಾಕ್ಟ್‌ಚೆಕ್ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದೆ. “ರೈಲ್ವೆ ಸಚಿವಾಲಯವು ರೈಲ್ವೆ ಇಲಾಖೆಯ ಯಾವುದೇ ಆಸ್ತಿಯನ್ನು ಖಾಸಗೀಕರಣಗೊಳಿಸಿಲ್ಲ. ಹಾಗಾಗಿ, ದೇಶದ 151 ರೈಲು ನಿಲ್ದಾಣ, ರೈಲು ಸೇರಿ ಹಲವು ಆಸ್ತಿಯನ್ನು ಖಾಸಗೀಕರಣ ಮಾಡಲಾಗಿದೆ ಎಂಬ ಆರೋಪವು ನಿರಾಧಾರವಾಗಿದೆ” ಎಂದು ತಿಳಿಸಿದೆ.
ಇದನ್ನೂ ಓದಿ | Fact Check | ಈರುಳ್ಳಿ ತಿನ್ನದ ನಿರ್ಮಲಾ ಸೀತಾರಾಮನ್ ಅವುಗಳನ್ನು ಖರೀದಿಸಿದರೇ? ಕಾಂಗ್ರೆಸ್ ಟ್ವೀಟ್‌ನ ಮರ್ಮವೇನು?