ನವ ದೆಹಲಿ: ಮುಂದಿನ ಲೋಕಸಭಾ ಚುನಾವಣೆ ಬಳಿಕ ನಮ್ಮ (Narendra Modi) ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಮುಂದಿನ ಸಲವೂ ತಮ್ಮ ಪಕ್ಷ ಪ್ರಚಂಡ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಲಿದೆ. ಎನ್‌ಡಿಎ 400ಕ್ಕಿಂತ ಹೆಚ್ಚು ಸೀಟು ಗೆಲ್ಲುವುದು ಖಾತರಿ. ಅದರಲ್ಲಿ ಬಿಜೆಪಿ 370ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತದೆ ಎಂದು ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಜನರು ನಮ್ಮನ್ನು ಎರಡನೇ ಅವಧಿಗೆ ಹಿಂದಿಗಿಂತಲೂ ಹೆಚ್ಚು ಸೀಟುಗಳನ್ನು ನೀಡುವ ಮೂಲಕ ಆಯ್ಕೆ ಮಾಡಿದ್ದಾರೆ. ಎರಡನೇ ಭಾರಿ ತೆಗೆದುಕೊಂಡಿರುವ ಸಂಕಲ್ಪ ಹಾಗೂ ವಚನಗಳನ್ನು ಪೂರ್ತಿ ಮಾಡಲಾಗಿದೆ. ಎಲ್ಲ ಕೆಲಸಗಳನ್ನು 2ನೇ ಅವಧಿಯಲ್ಲಿ ಪೂರ್ಣಗೊಳಿಸಿದ್ದೇವೆ. ನಾವೆಲ್ಲ 370ನೇ ವಿಧಿ ರದ್ದಾಗಿದ್ದನ್ನು ನೋಡಿದ್ದೇವೆ. ನಾರಿ ಶಕ್ತಿ ವಂದನಾ ಅಧಿನಿಯಮ ಕಾನೂನು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Speaking in the Lok Sabha. https://t.co/cwxdw7xo8S
— Narendra Modi (@narendramodi) February 5, 2024
ಇದನ್ನೂ ಓದಿ : Narendra Modi: ಭಾರತದ ವೈಭವ ಈಗ ಎದ್ದು ಕಾಣುತ್ತಿದೆ; ಲೋಕಸಭೆಯಲ್ಲಿ ಮೋದಿ ಹೇಳಿಕೆ
ಭಾರತವು ಅಮೃತ್ ಭಾರತ್, ನಮೋ ಭಾರತ್ ಟ್ರೇನ್ ನಿಂದ ಭವಿಷ್ಯದ ಉನ್ನತಿಯ ಕನಸು ಕಾಣುತ್ತಿದೆ. ದೇಶದ ಕೋಟಿಕೋಟಿ ಜನರು ವಿಕಸಿತ ಭಾರತದ ಸಂಕಲ್ಪ ಕಂಡಿದ್ದಾರೆ. ಭಗವಾನ್ ರಾಮ ನಮ್ಮ ಮನೆಗೆ ಮಾತ್ರ ಬಂದಿಲ್ಲ, ಭಾರತದ ಮಹಾನ್ ಸಾಂಸ್ಕೃತಿಕ ಪರಂಪರೆಗೆ ಹೊಸ ಶಕ್ತಿ ನೀಡಿದ್ದಾನೆ. ನಾವು 3ನೇ ಅವಧಿಗೂ ಅಧಿಕಾರ ಹಿಡಿಯುವ ದಿನಗಳು ಬಹಳ ದೂರವಿಲ್ಲ. 100-150 ದಿನ ಮಾತ್ರ ಬಾಕಿ ಇದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಭಾರತ ದೊಡ್ಡ ಆರ್ಥಿಕ ಶಕ್ತಿ: 10 ವರ್ಷಗಳ ನನ್ನ ಆಡಳಿತದ ಅನುಭವದ ಆಧಾರದ ಮೇಲೆ ಹೇಳುವುದಾದರೆ ಮತ್ತು ಭಾರತವು ಇಂದು ವೇಗವಾಗಿ ಪ್ರಗತಿ ಸಾಧಿಸುತ್ತಿರುವುದನ್ನು ನೋಡಿದರೆ ನನ್ನ ಮೂರನೇ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದುವೇ ಮೋದಿ ಗ್ಯಾರಂಟಿ ಎಂದು ನರೇಂದ್ರ ಮೋದಿ ಅವರು ಹೇಳಿದರು.
2014ರಲ್ಲಿ ಭಾರತವು 11ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು, ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೂ ಕಾಂಗ್ರೆಸ್ ಮೌನವಾಗಿದೆ. ಅವರು ಕನಸು ಕಾಣುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.
ಗ್ರಾಮೀಣ ಬಡವರಿಗೆ 4 ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ಗೆ ಈ ಸಾಧನೆ ಮಾಡಲು ಇನ್ನೂ 100 ವರ್ಷ ಬೇಕಾಗಿತ್ತು ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.