Site icon Vistara News

Narendra Modi : ಸಂದೇಶ್​ಖಾಲಿ ಸಂತ್ರಸ್ತೆಯನ್ನು ‘ಶಕ್ತಿ ಸ್ವರೂಪ’ ಎಂದು ಕರೆದ ಪ್ರಧಾನಿ ಮೋದಿ

Rekha Patra

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಸಿರ್ಹತ್​ ​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶ್​ಖಾಲಿ ಘಟನೆಯ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ (Rekha Patra) ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ (Narendra Modi) ರೇಖಾ ಅವರನ್ನು ‘ಶಕ್ತಿ ಸ್ವರೂಪ’ (Shakti Swaroopa) ಎಂದು ಕರೆದರು. ಪಾತ್ರಾ ಅವರು ಚುನಾವಣೆಗೆ ಸ್ಪರ್ಧಿಸಿರುವುದು ಸಂದೇಶ್​ಖಾಲಿ ಮತ್ತು ಪಶ್ಚಿಮ ಬಂಗಾಳದ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಎಂಬುದಾಗಿ ಬಿಜೆಪಿ ಸಮರ್ಥಿಸಿಕೊಂಡಿದೆ.

ಶಕ್ತಿ ಎಂಬುದು ದುರ್ಗಾ ಮತ್ತು ಕಾಳಿಯಂತಹ ದೇವತೆಗಳಿಗೆ ಸಂಬಂಧಿಸಿದ ಹಿಂದೂ ಧರ್ಮ ಪದವಾಗಿದೆ.

ಮಾತುಕತೆಯ ವೇಳೆ ಪ್ರಧಾನಿ ಮೋದಿ ರೇಖಾ ಅವರ ಪ್ರಚಾರ ಸಿದ್ಧತೆಗಳು, ಬಿಜೆಪಿಗೆ ದೊರಕಿರುವ ವಿಶ್ವಾಸ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿದರು. ಏತನ್ಮಧ್ಯೆ, ರೇಖಾ ಪಾತ್ರಾ ಸಂದೇಶ್​ಖಾಲಿಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Delhi Excise Policy : ಕೆ ಕವಿತಾಗೆ ಇನ್ನೂ 14 ದಿನ ಜೈಲು

ರೇಖಾ ಪಾತ್ರಾ 2024 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಸಿಹರ್ತ್​​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರು ಅದಕ್ಕಿಂತ ಹಿಂದೆ ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಬಲ ಮುಖಂಡ ಶಹಜಹಾನ್ ಶೇಖ್ ಮತ್ತು ಅವರ ಸಹಚರರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು. ಸಂದೇಶ್​ಖಾಲಿ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಉಪವಿಭಾಗದ ಒಂದು ಹಳ್ಳಿಯಾಗಿದೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಬಸಿರ್ಹತ್ ನಲ್ಲಿ ಪ್ರಸ್ತುತ ಟಿಎಂಸಿ ಪ್ರತಿನಿಧಿ ಇದ್ದಾರೆ.

ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಮತ್ತು ಅವರ ಕೆಲವು ಸಹಚರರನ್ನು ಬಂಧಿಸಲಾಗಿದ್ದು, ಅವರು ಕೇಂದ್ರ ತನಿಖಾ ದಳ (ಸಿಬಿಐ) ವಶದಲ್ಲಿದ್ದಾರೆ. ಶೇಖ್ ಅವರ ವಿರುದ್ಧದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಟಿಎಂಸಿ ಅವರನ್ನು ಅಮಾನತುಗೊಳಿಸಿದೆ.

ಸಂದೇಶ್​ಖಾಲಿಯ ಮಹಿಳೆಯರಿಗಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ರೇಖಾ ಹೇಳಿದ್ದಾರೆ. “ನನಗೆ ಟಿಕೆಟ್ ನೀಡಿದ ನರೇಂದ್ರ ಮೋದಿ ಮತ್ತು ಬಿಜೆಪಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಯಾವಾಗಲೂ ಸಂದೇಶ್​​ಖಾಲಿಯ ಮಹಿಳೆಯರೊಂದಿಗೆ ನಿಲ್ಲುತ್ತೇನೆ ಮತ್ತು ಅವರಿಗಾಗಿ ಪ್ರತಿಭಟಿಸುತ್ತೇನೆ. ನಾನು ಅವರ ಧ್ವನಿಯಾಗುತ್ತೇನೆ” ಎಂದು ಅವರು ಹೇಳಿದ್ದಾರೆ.

Exit mobile version