ನವದೆಹಲಿ: 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು (2000 Railway Projects) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಮೋದಿ ಅವರು, ಈ ಮೊದಲು ರೈಲ್ವೆ ಇಲಾಖೆ (Railway Department) ಎಂದರೆ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೇ ರೈಲ್ವೆ ಪರಿವರ್ತನೆಯ ಬಹುದೊಡ್ಡ ಶಕ್ತಿಯಾಗಿ ಬದಲಾಗಿದೆ ಎಂದು ಹೇಳಿದರು.
ವರ್ಚುಯಲ್ ಆಗಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು 27 ರಾಜ್ಯಗಳಲ್ಲಿ 300 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಅಡಿಪಾಯ ಹಾಕಲಾಗಿದೆ. ಉತ್ತರ ಪ್ರದೇಶದ ಗೋಮತಿ ನಗರ ರೈಲು ನಿಲ್ದಾಣವನ್ನೂ ಉದ್ಘಾಟಿಸಿದ್ದೇನೆ. ಇಂದು, ಭಾರತೀಯ ರೈಲ್ವೆಯ ಮೇಲೆ 1500 ರೋಡ್ ಓವರ್ ಬ್ರಿಡ್ಜ್‌ಗಳು/ರೋಡ್ ಅಂಡರ್ ಬ್ರಿಡ್ಜ್‌ಗಳನ್ನು ನಿರ್ಮಿಸಲು ಅಡಿಪಾಯ ಹಾಕಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಮೂರನೇ ಅವಧಿಯು ಜೂನ್ ತಿಂಗಳಿನಿಂದ ಆರಂಭವಾಗಲಿದೆ. ನಾವು ತೋರುತ್ತಿರುವ ವೇಗವು ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಭಾರತವು ಈಗ ಅಭಿವೃದ್ಧಿಯತ್ತ ದಾಪುಗಾಲು ಹಾಗುತ್ತಿದೆ. ಭಾರತದ ಈ ಓಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕಳೆದ 10 ವರ್ಷಗಳಲ್ಲಿ ನವ ಭಾರತ ನಿರ್ಮಾಣವಾಗುತ್ತಿರುವುದನ್ನು ನಾವು ನೋಡಿದ್ದೇವೆ. ನಾನು ಯುವಕರಿಗೆ ಹೇಳಲು ಬಯಸುತ್ತೇನೆ, ಅವರ ಕನಸುಗಳು ನನ್ನ ಸಂಕಲ್ಪ. ನಿಮ್ಮ ಕನಸುಗಳು, ಕಠಿಣ ಪರಿಶ್ರಮ ಮತ್ತು ನನ್ನ ಸಂಕಲ್ಪ ಮತ್ತು ‘ವಿಕ್ಷಿತ್ ಭಾರತ್’ ನಾನು ನೀಡುವ ಭರವಸೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ 553 ನಿಲ್ದಾಣಗಳನ್ನು ಮರುಅಭಿವೃದ್ಧಿಗೊಳಿಸಲಾಗುವುದು. ಈ ನಿಲ್ದಾಣಗಳಿಗೆ ಶಂಕುಸ್ಥಾಪನೆಯನ್ನೂ ಮಾಡಲಾಯಿತು. ಭಾರತದಾದ್ಯಂತ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು ಸಹ ಉದ್ಘಾಟಿಸಲಾಯಿತು.
ಈ ಸುದ್ದಿಯನ್ನೂ ಓದಿ: Sudarshan Setu: ಕೃಷ್ಣ ನಗರಿಯಲ್ಲಿ ಪ್ರಧಾನಿ ಮೋದಿ; ದೇಶದ ಅತಿ ಉದ್ದದ ಕೇಬಲ್ ಸೇತುವೆ ಉದ್ಘಾಟನೆ