Site icon Vistara News

Narendra Modi : ಭಾರತ ತಂಡಕ್ಕೆ ಆತಿಥ್ಯ ನೀಡಿದ ಬಳಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ನರೇಂದ್ರ ಮೋದಿ

Narendra modi

ಬೆಂಗಳೂರು ; ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಕರೆಸಿ ಆತಿಥ್ಯ ನೀಡಿದ್ದಾರೆ. ಭಾರತಕ್ಕೆ ಗುರುವಾರ ಬೆಳಗ್ಗೆ ಮರಳಿದ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಕ್ರಿಕೆಟ್​ ಗಣ್ಯರಿಗೆ ಆತಿಥ್ಯ ನೀಡಿದ ನಂತರ ನರೇಂದ್ರ ಮೋದಿ ತಮ್ಮ ಅಧಿಕೃತ ಹ್ಯಾಂಡಲ್​​ನಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಗಳನ್ನು ಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಜೂನ್ 29 ರಂದು ಬಾರ್ಬಡೋಸ್​​ನಲ್ಲಿ ನಡೆದ ಟಿ 20 ವಿಶ್ವಕಪ್​ನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಮೆನ್ ಇನ್ ಬ್ಲೂ ತಮ್ಮ 11 ವರ್ಷಗಳ ವಿಶ್ವಕಪ್​ ಟ್ರೋಫಿ ಬರ ಕೊನೆಗೊಳಿಸಿತು. ರೋಚಕ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ ಗಳ ಗೆಲುವು ಸಾಧಿಸಿತು. ಇದು ಭಾರತ ತಂಡದ ಎರಡನೇ ಟಿ 20 ವಿಶ್ವಕಪ್ ಟ್ರೋಫಿಯನ್ನು ಗುರುತಿಸಿತು.

ನರೇಂದ್ರ ಮೋದಿ ಬಣ್ಣನೆ

ಭಾರತ ತಂಡವು ಗುರುವಾರ ಸ್ವದೇಶಕ್ಕೆ ಮರಳಿತು ಮತ್ತು ಜುಲೈ 4 ರ ಗುರುವಾರ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸಕ್ಕೆ ಭೇಟಿ ನೀಡಿತು. ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ತಂಡದ ಇತರ ಸದಸ್ಯರೊಂದಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಉಪಾಹಾರ ಮಾಡಿ ಮೋದಿ ಸಂವಾದ ನಡೆಸಿದರು.

ತಂಡಕ್ಕೆ ನರೇಂದ್ರ ಮೋದಿ ಒಂದು ಗಂಟೆ ಕಾಲ ಆತಿಥ್ಯ ನೀಡಿದರು. ನಂತರ, ಮೋದಿ ಫೋಟೋಗಳನ್ನು ಎಕ್ಸ್​ನಲ್ಲಿ ಪೋಟೋಗಳನ್ನು ಹಂಚಿಕೊಂಡರು. ನಮ್ಮ ಚಾಂಪಿಯನ್ ಗಳೊಂದಿಗೆ ಅತ್ಯುತ್ತಮ ಭೇಡಿ. ವಿಶ್ವಕಪ್ ವಿಜೇತ ತಂಡಕ್ಕೆ ಆತಿಥ್ಯ ವಹಿಸಿದ್ದೇನೆ ಮತ್ತು ಪಂದ್ಯಾವಳಿಯಾದ್ಯಂತ ಅವರ ಅನುಭವಗಳ ಬಗ್ಗೆ ಸಂಭಾಷಣೆ ನಡೆಸಿದ್ದೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ZIM vs IND : ಭಾರತ ವಿರುದ್ಧ ಸರಣಿಗೂ ಮುನ್ನ ಜಿಂಬಾಬ್ವೆ ಬೌಲಿಂಗ್ ಕೋಚ್ ಆಗಿ ಚಾರ್ಲ್ ಲ್ಯಾಂಗೆವೆಲ್ಟ್ ನೇಮಕ

ಪ್ರಧಾನಿ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದ ನಂತರ, ಭಾರತೀಯ ಆಟಗಾರರು ಮುಂಬೈಗೆ ತೆರಳಿದರು. ಅಲ್ಲಿ ಬಿಸಿಸಿಐ ಮರೀನ್ ಡ್ರೈವ್​​ನಿಂದ ವಾಂಖೆಡೆ ಕ್ರೀಡಾಂಗಣ ತನಕ ತೆರೆದ ಬಸ್​ನಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ ಭಾರತ ತಂಡ 125 ಕೋಟಿ ರೂ.ಗಳ ಬಹುಮಾನ ಸ್ವೀಕರಿಸಲಿದೆ.

ಹೃತ್ಪೂರ್ವಕ ಕೃತಜ್ಞತೆ: ಬಿಸಿಸಿಐ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆತಿಥ್ಯ ನೀಡಿದ್ದಕ್ಕೆ ಬಿಸಿಸಿಐ ಕೃತಜ್ಞತೆ ಸಲ್ಲಿಸಿದೆ. ಅವರ ಸ್ಪೂರ್ತಿದಾಯಕ ಮಾತುಗಳು ಮತ್ತು ಅಚಲ ಬೆಂಬಲಕ್ಕಾಗಿ ಧನ್ಯವಾದ ಎಂದು ಹೇಳಿದ್ದಾರೆ. ಸಭೆಯ ನಂತರ ಆಟಗಾರರು ಪ್ರಧಾನಿಗೆ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ವಿಜಯಶಾಲಿ ಭಾರತೀಯ ಕ್ರಿಕೆಟ್ ತಂಡವು ಇಂದು ಆಗಮಿಸಿದ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿತು. ಬೆರಿಲ್ ಚಂಡಮಾರುತದಿಂದಾಗಿ ಭಾರತೀಯ ಕ್ರಿಕೆಟ್ ತಂಡವು ಸಹಾಯಕ ಸಿಬ್ಬಂದಿ, ಕುಟುಂಬಗಳು ಮತ್ತು ಮಾಧ್ಯಮ ಸಿಬ್ಬಂದಿಯೊಂದಿಗೆ ಬಾರ್ಬಡೋಸ್​​ನಲ್ಲಿ ಕಠಿಣ ಪರಿಸ್ಥಿತಿ ಎದುರಿಸಿತು. ಚಂಡಮಾರುತದಿಂದಾಗಿ ಬ್ರಿಡ್ಜ್ ಟೌನ್ ನಲ್ಲಿರುವ ಗ್ರಾಂಟ್ಲಿ ಆಡಮ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರು ದಿನಗಳ ಕಾಲ ಮುಚ್ಚಲಾಗಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರು ಬಾರ್ಬಡೋಸ್​​ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿದರು. ತಂಡವು ಐಟಿಸಿ ಮೌರ್ಯ ಹೋಟೆಲ್​ಗೆ ತೆರಳಿತು. ಅಲ್ಲಿ ಅವರು ನರೇಂದ್ರ ಮೋದಿಯವರನ್ನು ಭೇಟಿಯಾಗುವ ಮೊದಲು ತಂಗಿದ್ದರು. ಹೋಟೆಲ್​ನಲ್ಲಿ ಅವರು ಟಿ 20 ವಿಶ್ವಕಪ್ ಟ್ರೋಫಿಯನ್ನು ಒಳಗೊಂಡ ವಿಶೇಷ ಕೇಕ್​ನೊಂದಿಗೆ ತಮ್ಮ ವಿಜಯೋತ್ಸವ ಆಚರಿಸಿದರು.

Exit mobile version