Site icon Vistara News

PM Narendra Modi: ದಕ್ಷಿಣ ಭಾರತದ ನಾಯಕರೊಂದಿಗೆ ಚರ್ಚೆ, ಬಳಿಕ ಬಾಳೆಲೆ ಊಟ ಸವಿದ ಮೋದಿ! ಏನೇನಿತ್ತು ಮೆನು?

PM Meeting With South India NDA MPs

ನವದೆಹಲಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ (Lok Sabha Election 2024) ಭರ್ಜರಿ ತಯಾರಿ ನಡೆಸಿರುವ ಬಿಜೆಪಿ (BJP) ಬುಧವಾರ ದಕ್ಷಿಣ ಭಾರತದ ತನ್ನ ಎನ್‌ಡಿಎ ಮೈತ್ರಿ ಕೂಟದ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಿತು. ಉತ್ತರ ಭಾರತದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದರೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ಲಾಭ ಇನ್ನೂ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ನಡೆದ ಸಭೆಯಲ್ಲಿ ದಕ್ಷಿಣ ಭಾರತದ ಎನ್‌ಡಿಎ ಕೂಟದ ವಿವಿಧ ಪಕ್ಷಗಳ ಸಂಸದರು (MPs form South India) ಭಾಗವಹಿಸಿದ್ದರು. ಈ ವೇಳೆ, ಅವರಿಗೆ ಬಾಳೆಲೆ ಊಟದ (banana leaf meals) ಆತಿಥ್ಯವನ್ನು ನೀಡಲಾಯಿತು. ಬಾಳೆಲೆಯಲ್ಲಿ ಪಣಿಯಾರಂ, ಅಪ್ಪಂ, ತರಕಾರಿ ಕೊರ್ಮ, ಪುಳಿಹೊರ, ಪಪ್ಪು ಚಾರು, ಅಡೈ ಅವಿಯಲ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಖಾದ್ಯಗಳಿದ್ದವು.

ಈ ವೇಳೆ, ಕೇಂದ್ರದ ವಿರುದ್ಧ ಪ್ರತಿಪಕ್ಷಗಳನ್ನು ಎದುರಿಸಲು ಮತ್ತು ಅಗತ್ಯವಿದ್ದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ನಿರೂಪಣೆಯನ್ನು ನಡೆಸಲು ವೃತ್ತಿಪರ ಏಜೆನ್ಸಿಗಳನ್ನು ನೇಮಿಸಿಕೊಳ್ಳಲು ಪ್ರಧಾನಿ ಮೋದಿ ನಾಯಕರಿಗೆ ತಿಳಿಸಿದರು. ಸಭೆಯ ನಂತರ ಸಂಸದರೊಂದಿಗೆ ಮೋದಿ ಸಹ ಭೋಜನ ಮಾಡಿದರು. ಪಣಿಯಾರಂ, ಅಪ್ಪಂ, ತರಕಾರಿ ಕೊರ್ಮ, ಪುಳಿಹೊರ, ಪಪ್ಪು ಸಾರು, ಅಡೈ ಅವಿಯಲ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಖಾದ್ಯಗಳನ್ನು ಈ ವೇಳೆ ಬಡಿಸಲಾಯಿತು.

ಕಳೆದ ಸಂಜೆ, ನಾನು ದಕ್ಷಿಣ ಭಾರತದ ಎನ್‌ಡಿಎ ಸಂಸದರೊಂದಿಗೆ ಅದ್ಭುತವಾದ ಸಭೆಯನ್ನು ನಡೆಸಿದ್ದೇನೆ, ಅದರ ನಂತರ ಪನಿಯಾರಮ್, ಅಪ್ಪಂ, ತರಕಾರಿ ಕೊರ್ಮಾ, ಪುಳಿಹೊರ, ಪಪ್ಪು ಸಾರು, ಅಡೈ ಅವಿಯಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ದಕ್ಷಿಣ ಭಾರತದ ವಿವಿಧ ಖಾದ್ಯಗಳನ್ನು ಸವಿಯಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಕೂಡ ಮಾಡಿದ್ದಾರೆ.

ಮಹಿಳೆಯರು, ಯುವಕರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣದ ಗುರಿಯನ್ನು ಒಳಗೊಂಡಂತೆ ಸರ್ಕಾರದ ಯೋಜನೆಗಳ ವಿತರಣೆಯತ್ತ ಗಮನ ಹರಿಸುವಂತೆ ಪ್ರಧಾನಿಯ ಜನಪ್ರತಿನಿಧಿಗಳಿಗೆ ಕೇಳಿಕೊಂಡರು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳ ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಬಿಜೆಪಿ ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Mango Gift: ಕಹಿ ಮರೆತು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಮಾವಿನ ಹಣ್ಣು ಕಳುಹಿಸಿದ ‘ಮಮತಾ’ಮಯಿ ದೀದಿ!

ಪ್ರಧಾನಿ ಮೋದಿ ದಕ್ಷಿಣ ಭಾರತದ ಆಹಾರವನ್ನು ಸವಿಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರಧಾನಿಯವರು ಮೈಸೂರಿನ ಹಿಂದಿನ ರಾಜಮನೆತನದವರೊಂದಿಗೆ ಉಪಹಾರ ಸೇವಿಸಿದ್ದರು. ಪ್ರಸಿದ್ಧವಾದ ‘ಮೈಸೂರು ಪಾಕ್’ ಮತ್ತು ‘ಮೈಸೂರು ಮಸಾಲೆ ದೋಸೆ’ ಮುಂತಾದ ಖಾದ್ಯಗಳು ಮೆನುವಿನ ಭಾಗವಾಗಿದ್ದವು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version