ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಯಾವುದೇ ದೇವಾಲಯಕ್ಕೆ ತೆರಳಲಿ, ಸಾಂಪ್ರದಾಯಿಕ ದಿರಸಿನಲ್ಲಿ ಭೇಟಿ ನೀಡುತ್ತಾರೆ. ಇದೇ ರೀತಿ, ಸಾಂಪ್ರದಾಯಿಕ ಉಡುಪಿನಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ (Kashi Vishwanath Temple) ಶನಿವಾರ (ಮಾರ್ಚ್ 9) ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲ, ಶಿವನ ಆಯುಧವಾದ ತ್ರಿಶೂಲವನ್ನು (Trishul) ಹಿಡಿದ ಮೋದಿ ಅದನ್ನು ಭಕ್ತರೆಡೆಗೆ ತೋರಿಸಿದರು. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಲು ಮೋದಿ ಅವರು ತೀರ್ಮಾನಿಸಿದ್ದು, ಟಿಕೆಟ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು. ಇದೇ ವೇಳೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನರೇಂದ್ರ ಮೋದಿ ಅವರಿಗೆ ತ್ರಿಶೂಲ ಕೊಟ್ಟರು. ಆಗ ಮೋದಿ ಅದನ್ನು ಭಕ್ತರಿಗೆ ತೋರಿಸಿದರು. ಆಗ ಅಲ್ಲಿದ್ದ ಜನ ಜೈಕಾರ ಕೂಗಿದರು.
Literally gave goosebumps 🔥
— Mr Sinha (Modi's family) (@MrSinha_) March 9, 2024
The message is clear: Next is Kashi 🚩 pic.twitter.com/ENB16EmXAy
ಪ್ರಧಾನಿ ಮೋದಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ವಾರಣಾಸಿಗೆ ತಲುಪಿದರು. ಪ್ರಧಾನಿ ಮೋದಿ 28 ಕಿ.ಮೀ ಉದ್ದದ ರೋಡ್ ಶೋ ನಡೆಸಿದರು. ವಿಮಾನ ನಿಲ್ದಾಣದ ಹೊರಗಿನಿಂದ ಅವರು ಸಾಗಿದ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಸಾಲುಗಟ್ಟಿ ನಿಂತು ಸ್ವಾಗತ ಕೋರಿದರು.
ರೋಡ್ ಶೋ ನಡೆಯುವ ಮಾರ್ಗದಲ್ಲಿ ಪ್ರಧಾನಿ ಮೋದಿ ಗಿಲಾತ್ ಬಜಾರ್ ಮತ್ತು ಕಬೀರ್ ಚೌರಾದಲ್ಲಿರುವ ಅತುಲಾನಂದ್ ಶಾಲೆಗೆ ಭೇಟಿ ನೀಡಿದರು ಎಂದು ಬಿಜೆಪಿ ಪ್ರಾದೇಶಿಕ ಮುಖ್ಯಸ್ಥ ದಿಲೀಪ್ ಪಟೇಲ್ ತಿಳಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅವರು ವಾರಣಾಸಿಗೆ ಭೇಟಿ ನೀಡಿದ್ದಾರೆ. 2024 ರ ಚುನಾವಣೆಯಲ್ಲಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲು ಪ್ರಧಾನಿ ಸಜ್ಜಾಗಿದ್ದಾರೆ.
ಪ್ರಧಾನಿ ಮೋದಿ 2014ರಿಂದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲಿದ್ದಾರೆ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಈ ಕ್ಷೇತ್ರದಿಂದ ಭರ್ಜರಿ ವಿಜಯಗಳನ್ನು ಗಳಿಸಿದ್ದರು. ಅದಕ್ಕಿಂತ ಹಿಂದಿನ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರ ಗೆಲುವಿನ ಅಂತರವನ್ನು ಮೀರಿಸಿದ್ದರು.
ಇದನ್ನೂ ಓದಿ: Lok Sabha Election : 400ರ ಸಮೀಪ ಎನ್ ಡಿ ಎ; ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಎಂದಿದೆ ಹೊಸ ಸರ್ವೆ
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಲ್ಲಿ ಶೇ.56.37ರಷ್ಟು ಮತಗಳನ್ನು ಪಡೆದಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು 45.2 ಪ್ರತಿಶತದಷ್ಟು ಅಂತರದಿಂದ ಗೆದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ