Site icon Vistara News

Polluted Water : ಕಲುಷಿತ ನೀರು ಕುಡಿದು ಒಂದೇ ಗ್ರಾಮದ ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

Polluted Water

ಚಿಕ್ಕಬಳ್ಳಾಪುರ : ಕಲುಷಿತ ನೀರು (Polluted Water ) ಸೇವಿಸಿದ್ದರಿಂದ ಉಂಟಾದ ಅಸ್ವಸ್ಥೆಯಿಂದ ಒಂದೇ ಗ್ರಾಮದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಲ್ಲಿನ ವೀರಪ್ಪಲ್ಲಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಿಂದ ಈ ನಾಲ್ವರು ಮೃತಪಟ್ಟಿದ್ದಾರೆ. ಅದೇ ರೀತಿ ವೀರಾಪುರ ಗ್ರಾಮದಲ್ಲಿಯೂ ‌ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮದಲ್ಲಿ ಗಂಗಮ್ಮ (70) ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ (75) ಎಂಬುವರು ಮೃತಪಟ್ಟಿದ್ದರು.

ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿರುವ ವರಲಕ್ಷ್ಮೀ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರಿತಿ ವಾಂತಿ, ಭೇದಿಯಿಂದ ಇಬ್ಬರು ಗ್ರಾಮಸ್ಥರು. ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವರಲಕ್ಷ್ಮಿ ಲಕ್ಷ್ಮೀದೇವಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮ ಪಂಚಾಯ್ತಿ ವತಿಯಿಂದ ಪೂರೈಸಿದ್ದ ನೀರು ಕಲುಷಿತ ಗೊಂಡಿದ್ದ ಕಾರಣ ಆರೋಗ್ಯ ಸಮಸ್ಯೆ ಉಂಟಾಗಿದೆ. ನೀರು ಸರಬರಾಜು ಮಾಡಿರುವ ಕೋಟಗಲ್ ಗ್ರಾಮಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ವಾರದಲ್ಲಿ ಗ್ರಾಮದಲ್ಲಿ ನಾಲ್ಕು ಸರಣಿ ಸಾವಾದರೂ ಎಚ್ಚೆತ್ತುಕೊಳ್ಳದ ಪಿಡಿಒ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: HSRP Number Plate : ಎಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆ ಗಡುವು ಜುಲೈ 4 ರವರೆಗೆ ವಿಸ್ತರಣೆ; ವಾಹನ ಮಾಲೀಕರಿಗೆ ನೆಮ್ಮದಿ

ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ವಾಸನೆ ಬರುತ್ತಿವೆ. ಅದನ್ನೆಲ್ಲ ರಿಪೇರಿ ಮಾಡದ ಕಾರಣ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿದೆ. ಅದರಿಂದಾಗಿಯೇ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?

ವಿಟಮಿನ್‌ ಸಿ ಆಹಾರಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಶುಂಠಿ

ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂ

Exit mobile version