Site icon Vistara News

Ponniyin Selvan : ಪೊನ್ನಿಯಿನ್‌ ಸೆಲ್ವನ್‌ ಚಿತ್ರ ನಿರ್ಮಾಪಕರ ಕಚೇರಿಗೆ ಇ.ಡಿ ದಾಳಿ, ಕಾರಣವೇನು?

Ponniyin Selvan E.D attack on Ponniyin Selvan film producer's office what is the reason

#image_title

ಚೆನ್ನೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಚೆನ್ನೈನಲ್ಲಿ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದ ನಿರ್ಮಾಪಕರ ಕಚೇರಿಗೆ ದಾಳಿ ನಡೆಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿರುವ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದ ನಿರ್ಮಾಪಕರು ಅಕ್ರಮ ಹಣ ವರ್ಗಾವಣೆ (money laundering case) ಪ್ರಕರಣವನ್ನು ಎದುರಿಸುತ್ತಿದ್ದಾರೆ. ಚೆನ್ನೈನಲ್ಲಿ ಎಂಟು ಕಡೆಗಳಲ್ಲಿ ಎಲ್‌ವೈಸಿಎ ಪ್ರೊಡಕ್ಷನ್ಸ್‌ (lyca productions) ಕಚೇರಿ ಮೇಲೆ ದಾಳಿ ನಡೆದಿದೆ.

ಮಣಿರತ್ನಂ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸುಭಾಷ್‌ಕರಣ್‌ ಅಲ್ಲಿರಾಜ್‌ ಸ್ಥಾಪಿಸಿರುವ ಎಲ್‌ವೈಸಿಎ ಪ್ರೊಡಕ್ಷನ್ಸ್‌ ಕಾಲಿವುಡ್‌ನಲ್ಲಿ ಮುಂಚೂಣಿಯಲ್ಲಿರುವ ಪ್ರೊಡಕ್ಷನ್‌ ಹೌಸ್‌ ಆಗಿದೆ. ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದೆ. ಲಿಕಾಮೊಬೈಲ್‌ ಕಂಪನಿಯ ಸ್ಥಾಪಕರಾಗಿರುವ ಸುಭಾಷ್‌ಕರಣ್‌ ತಮಿಳು ಸಿನಿಮಾಗಳನ್ನು ತಯಾರಿಸುತ್ತಿದ್ದಾರೆ.

ಪೊನ್ನಿಯಿನ್‌ ಸೆಲ್ವನ್‌ ಸಿನಿಮಾವನ್ನೂ ಸುಭಾಷ್‌ಕರಣ್‌ ಹಾಗೂ ಮಣಿರತ್ನಂ ಸೇರಿ ನಿರ್ಮಿಸಿದ್ದರು. ವಿಕ್ರಮ್‌, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ ಬಚ್ಚನ್‌, ತ್ರಿಷಾ, ಪ್ರಕಾಶ್‌ ರೈ ಮೊದಲಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ED ಎಂದರೆ ಜಾರಿ ನಿರ್ದೇಶನಾಲಯ ಅಲ್ಲ; ಹೊಸ ಹೆಸರು ನೀಡಿದ ಕಾಂಗ್ರೆಸ್‌ ನಾಯಕ ಸುರ್ಜೆವಾಲ

ಹತ್ತನೇ ಶತಮಾನದಲ್ಲಿ ಚೋಳ ವಂಶದ ಆಡಳಿತದ ಕಾಲಘಟ್ಟದ ಚಾರಿತ್ರಿಕ ಘಟನಾವಳಿಗಳನ್ನು ಆಧರಿಸಿ ಈ ಸಿನಿಮಾವನ್ನು ತಯಾರಿಸಲಾಗಿದೆ. 2022ರ ಸೆಪ್ಟೆಂಬರ್‌ 30ರಂದು ಸಿನಿಮಾ ಬಿಡುಗಡೆಯಾಗಿತ್ತು.

Exit mobile version