Site icon Vistara News

PR Sreejesh : ಕುಟುಂಬ ಸಮೇತ ಪ್ರಧಾನಿ ಮೋದಿಯನ್ನು ಭೇಟಿಯಾದ ಒಲಿಂಪಿಯನ್​ ಪಿ.ಆರ್ ಶ್ರೀಜೇಶ್​​

PR Sreejesh

ಹೊಸದಿಲ್ಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದ ಬಳಿಕ ನಿವೃತ್ತಿ ಘೋಷಿಸಿರುವ ಭಾರತ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ (PR Sreejesh) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾದರು. ವಿಶೇಷವೆಂದರೆ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಿಎಂ ಮೋದಿ ಅವರು ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಂಡ ಅಥ್ಲೀಟ್​ಗಳಿಗಾಗಿ ವಿಶೇಷ ಸಭೆ ಆಯೋಜಿಸಿದ್ದರು. ಅದು ಮುಗಿದ ಬಳಿಕ ಶ್ರೀಜೇಶ್​ ಕುಟುಂಬ ಸಮೇತ ಪ್ರಧಾನಿಯವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪ್ಯಾರಿಸ್​​ನಲ್ಲಿ ಭಾರತದ ಕಂಚಿನ ಪದಕ ವಿಜೇತರಾದ ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಳೆ ,ಕುಸ್ತಿಪಟು ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡವು ಇತರ ಕ್ರೀಡಾಪಟುಗಳು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ಖುಷಿಯನ್ನು ಹಂಚಿಕೊಂಡ ಶ್ರೀಜೇಶ್, ಪ್ರಧಾನಿಯೊಂದಿಗೆ ತಮ್ಮ ಕುಟುಂಬದ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಮೋದಿ ಅವರು, ಶ್ರೀಜೇಶ್​ ಮಗ ಮತ್ತು ಮಗಳ ತಲೆ ಕೈ ಇಟ್ಟು ಆಶೀರ್ವದಿಸುವುದು ಕಂಡು ಬಂದಿದೆ.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಹಾಕಿ ತಂಡದ ಅದ್ಭುತ ಅಭಿಯಾನದಲ್ಲಿ ಶ್ರೀಜೇಶ್ ಮತ್ತೊಮ್ಮೆ ಪ್ರಮುಖ ಪಾತ್ರ ವಹಿಸಿದ್ದರು. ಸ್ಪೇನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ ಸತತ ಎರಡನೇ ಬಾರಿ ಒಲಿಂಪಿಕ್ಸ್​​ ಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಆಟಗಾರರ ಸಾಮೂಹಿಕ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತೀಯ ಹಾಕಿ ತಂಡವು 52 ವರ್ಷಗಳ ನಂತರ ಒಲಿಂಪಿಕ್ಸ್​​ನಲ್ಲಿ ಸತತ ಪದಕಗಳನ್ನು ಗೆದ್ದಿದೆ. ಒಟ್ಟಾರೆ ಒಲಿಂಪಿಕ್ಸ್ ಪಟ್ಟಿಯಲ್ಲಿ 13 ನೇ ಪದಕ ತನ್ನದಾಗಿಸಿಕೊಂಡಿತು.

ಗಮನ ಸೆಳೆದ ಪಿ.ಆರ್. ಶ್ರೀಜೇಶ್

ಕಂಚು ಗೆದ್ದ ನಂತರ, ಗೋಲ್ ಕೀಪರ್ ಶ್ರೀಜೇಶ್​ ಗೌರವದಿಂದ ತಮ್ಮ ಗೋಲ್ ಕೀಪಿಂಗ್​​ ಗ್ಲವ್ಸ್​ ಸಮೇತ ಗೋಲ್​​ ಪೋಸ್ಟ್​​ಗೆ ನಮಸ್ಕರಿಸುವಾಗ ಅತ್ಯಂತ ಭಾವುಕರಾಗಿ ಕಾಣಿಸಿಕೊಂಡರು. ಟೋಕಿಯೊ ಒಲಿಂಪಿಕ್ಸ್​​ನಲ್ಲಿ ತಮ್ಮ ಪ್ರಸಿದ್ಧ ಸಂಭ್ರಮಾಚರಣೆಯ ಭಂಗಿಯನ್ನು ಅವರು ಪ್ಯಾರಿಸ್​ನಲ್ಲೂ ಮರುಸೃಷ್ಟಿಸಿದರು. ಇಡೀ ತಂಡ ಅವರ ಸಂಭ್ರಮದಲ್ಲಿ ಭಾಗಿಯಾಯಿತು.

18 ವರ್ಷಗಳ ವೃತ್ತಿಜೀವನದಲ್ಲಿ 278 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಶ್ರೀಜೇಶ್​ ವಿದಾಯ ಹೇಳಿರುವುದು ಭಾರತೀಯ ಹಾಕಿ ಅಭಿಮಾನಿಗಳ ಪಾಲಿಗೆ ಬೇಸರದ ವಿಷಯ. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಅವರೊಂದಿಗೆ ಕೇರಳ ಮೂಲದ ಆಟಗಾರನಿಗೆ ಭಾರತದ ಧ್ವಜಧಾರಿಯಾಗಿದ್ದರು. ಈ ಮೂಲಕ ಅವರಿಗೆ ವಿಶೇಷ ಗೌರವ ನೀಡಲಾಗಿದೆ.

ಇದನ್ನೂ ಓದಿ: Virat Kohli : ವಿರಾಟ್​​ ಮಾಲೀಕತ್ವದ ರೆಸ್ಟೋರೆಂಟ್​ಗೆ ಹೋದ ಡೂಪ್ಲಿಕೇಟ್​ ಕೊಹ್ಲಿ; ಗ್ರಾಹಕರು ಫುಲ್ ಕನ್​​ಫ್ಯೂಸ್​! ಇಲ್ಲಿದೆ ವಿಡಿಯೊ

ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಮತ್ತು ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರು ಪ್ರಧಾನಿಯೊಂದಿಗಿನ ಸಭೆಯಲ್ಲಿ ಹಾಜರಿರಲಿಲ್ಲ. ನೀರಜ್ ಅವರು ದೀರ್ಘಕಾಲದ ಸೊಂಟದ ಗಾಯಕ್ಕೆ ವೈದ್ಯಕೀಯ ಸಲಹೆಗಾಗಿ ಜರ್ಮನಿಗೆ ಹಾರಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಕ್ರೀಡಾಪಟುಗಳ ನಡೆಸಿರುವ ಮಾತುಕತೆಯ ಸಂಪೂರ್ಣ ವಿವರ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.

Exit mobile version