ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case ) ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಲು ಪ್ರಮುಖ ವೈದ್ಯಕೀಯ ವಿಧಾನವಾಗಿರುವ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ.
ಸಾವಿರಾರು ಹೆಣ್ಣು ಮಕ್ಕಳನ್ನು ವಯಸ್ಸಿನ ಭೇದವಿಲ್ಲದೇ ಅತ್ಯಾಚಾರ ಮಾಡಿರುವುದಲ್ಲದೇ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಮೇ 31ರಂದು ರಾತ್ರಿ ಬಂಧಿಸಿದ್ದರು. ಆದರೆ ಚುನಾವಣಾ ಫಲಿತಾಂಶ ಬರುವ ತನಕ ಕಾದಿದ್ದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ.
ಪೊಲೀಸರ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ತಾನು ಸಂಸದ ಎಂಬ ಅಹಂನಲ್ಲಿ ತನಿಖೆಗೆ ಅಸಹಾಕಾರ ನೀಡುತ್ತಿದ್ದ. ಹೀಗಾಗಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ನಡೆಯುತ್ತಿರಲಿಲ್ಲ. ಮಂಗಳವಾರ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಪ್ರಜ್ವಲ್ಗೆ ಹಾಸನದ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಅದೇ ರೀತಿ ಪ್ರಜ್ವಲ್ ಅವರ ಎಸ್ಐಟಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅಧಿಕಾರಿಗಳು ಪರಿಕ್ಷೆ ನಡೆಸಿದ್ದಾರೆ. ಇದೇ ವೇಳೆ ಹಾಸನ ಹಾಗು ಬಸವನಗುಡಿಯ ಮನೆಗೆ ಕರೆದೊಯ್ದು ಸ್ಪಾಟ್ ಮಹಜರ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ
ಹಾಗಿದ್ರೆ ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?
ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.
1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.
2) ನಂತರ ವೀರ್ಯ ವಿಶ್ಲೇಷಣೆ (A Semen Analysis) ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.
3) ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound) ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಟೆಸ್ಟ್. ವಯಾಗ್ರಾದಂಥ ಮೆಡಿಸಿನ್ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.
4) Nocturnal Penile Tumescence (NPT) Test. ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಈ ಟೆಸ್ಟ್‌ನ ರಿಪೋರ್ಟ್‌ಗಳು ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ.