ಬೆಂಗಳೂರು : ಪೆನ್ಡ್ರೈವ್ ಸೆಕ್ಸ್ ಸ್ಕ್ಯಾಂಡಲ್ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನೋಡುವುದಕ್ಕಾಗಿ ಬೆಂಗಳೂರಿನ ಎಸಿಎಮ್ಎಮ್ ಕೋರ್ಟ್ (ACMM) ಬಳಿ ನೂಕು ನುಗ್ಗಲು ಉಂಟಾಗಿತ್ತು. ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊಗಳನ್ನು ಕದ್ದು ಮುಚ್ಚಿ ನೋಡಿ ಚರ್ಚಿಸಿದ್ದ ಮಂದಿಯೆಲ್ಲ ಈ ಬಾರಿ ಕೋರ್ಟ್ ಆವರಣದಲ್ಲಿ ನಿಂತು ಅವರನ್ನು ನೋಡಲು ಮುಗಿ ಬಿದ್ದರು. ವಕೀಲರು ಹಾಗೂ ಜೆಡಿಎಸ್ ಹಾಗೂ ಪ್ರಜ್ವಲ್ ಅವರ ಅಭಿಮಾನಿಗಳೂ ಈ ವೇಳೆ ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗಿದೆ.
ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊಗಳ ಪೆನ್ಡ್ರೈವ್ ಚುನಾವಣೆ ವೇಳೆ ಹಾಸನ, ಮಂಡ್ಯ ಹಾಗೂ ಬೆಂಗಳೂರಿನ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ದೊರಕಿದ್ದವು. ಬಳಿಕ ಅದು ಡಿಜಿಟಲ್ ರೂಪ ಪಡೆದ ಎಲ್ಲೆಡೆ ಮೊಬೈಲ್ ಮೂಲಕ ಪ್ರಸರಣಗೊಂಡಿದ್ದವು. ಅಲ್ಲಿಯ ತನಕ ಕೇವಲ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ದೇಶವೇ ಕಂಡ ಅತ್ಯಂತ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ನ ಆರೋಪಿ ಎನಿಸಿಕೊಂಡರು. ಹೀಗಾಗಿ ಪ್ರಜ್ವಲ್ ಅವರ ಬಗ್ಗೆ ಜನರ ಕೌತುಕ ಹೆಚ್ಚಾಗಿತ್ತು. ಅದು ಕೋರ್ಟ್ ಆವರಣದಲ್ಲಿ ಪ್ರಕಟಗೊಂಡಿತು.
ಪ್ರಜ್ವಲ್ ರೇವಣ್ಣ ಏಪ್ರಿಲ್ 26ರಂದು ಜರ್ಮನಿಗೆ ಹಾರಿದ ಬಳಿಕದಿಂದ 33 ದಿನಗಳ ಕಾಲ ಅಲ್ಲೇ ಉಳಿದುಕೊಂಡಿದ್ದರು. ಅಂತೆಯೇ ಗುರುವಾರ ರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು.
ಇದನ್ನೂ ಓದಿ: Prajwal Revanna : ನನ್ನ ತೇಜೋವಧೆಯಾಗಿದೆ; ಪ್ರತಿ ದೂರು ನೀಡಲು ಪ್ರಜ್ವಲ್ ರೇವಣ್ಣ ಸಿದ್ಧತೆ
ಪ್ರಜ್ವಲ್ ರೇವಣ್ಣ ಕೋರ್ಟ್ಗೆ ಬರುತ್ತಾರೆ ಎಂದು ತಿಳಿದ ತಕ್ಷಣ ಜನರ ಕುತೂಹಲ ಹೆಚ್ಚಾಯಿತು. ತಕ್ಷಣ ಅಭಿಮಾನಿಗಳು, ಕುತೂಹಲಿಗರು ಹಾಗೂ ವಕೀಲರ ದಂಡು ಜಮಾಯಿಸಿತ್ತು. ಗಂಟೆಗಟ್ಟಲೆ ಕಾದ ಅವರೆಲ್ಲರೂ ಪ್ರಜ್ವಲ್ ಅವರನ್ನು ಪೊಲೀಸ್ ಜೀಪ್ನಲ್ಲಿ ಕರೆ ತರುವ ವೇಳೆ ಎದ್ದು ನೋಡಿದರು.
ಜಡ್ಜ್ ಎದುರು ಕೈಕಟ್ಟಿ ನಿಂತ ಪ್ರಜ್ವಲ್ ರೇವಣ್ಣ; ಎಂಥ ಸ್ಥಿತಿ!
ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸುಮಾರು 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ (Prajwal Revanna Case) ಭಾರತಕ್ಕೆ ಬಂದಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನು, ಶುಕ್ರವಾರ (ಮೇ 31) ಮಧ್ಯಾಹ್ನ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರೀ ಅನ್ನ-ಸಾಂಬಾರ್ ಸೇವಿಸಿ ನ್ಯಾಯಾಧೀಶರ ಎದುರು ಕೈಕಟ್ಟಿ ನಿಂತರು.
ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ. ಹೆದರಿಸಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಪ್ರಜ್ವಲ್ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.