Site icon Vistara News

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Padma Awards 2024

ಬೆಂಗಳೂರು: ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ತೆಲುಗು ತಾರೆ ಕೊನಿಡೆಲಾ ಚಿರಂಜೀವಿ, ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ ಫಾತಿಮಾ ಬೀವಿ ಮತ್ತು ‘ಬಾಂಬೆ ಸಮಾಚಾರ್’ ಮಾಲೀಕ ಹಾರ್ಮುಸ್ಜಿ ಎನ್ ಕಾಮಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರದಾನ ಮಾಡಿದರು. ಕನ್ನಡಿಗ ಶ್ರೀಧರ್ ಕೃಷ್ಣ ಮೂರ್ತಿ ಅವರಿಗೂ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಜೆಪಿ ನಾಯಕ ಒ.ರಾಜಗೋಪಾಲ್, ಲಡಾಕ್​ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೋಚೆ, ತಮಿಳು ನಟ ದಿವಂಗತ ಕ್ಯಾಪ್ಟನ್ ವಿಜಯಕಾಂತ್ (ಇಬ್ಬರೂ ಮರಣೋತ್ತರ), ಗುಜರಾತಿ ಪತ್ರಿಕೆ ‘ಜನ್ಮಭೂಮಿ’ ಸಮೂಹ ಸಂಪಾದಕ ಮತ್ತು ಸಿಇಒ ಕುಂದನ್ ವ್ಯಾಸ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

90 ವರ್ಷದ ಬಾಲಿ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ, ಬೀವಿ, ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಬೀವಿ, ವಿಜಯಕಾಂತ್ ಮತ್ತು ರಿಂಪೋಚೆ ಅವರ ಕುಟುಂಬ ಸದಸ್ಯರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.

Exit mobile version