ನವ ದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ (Independence Day) ಪ್ರಧಾನಿ ನರೇಂದ್ರ ಮೋದಿಯವರ ವೇಷಭೂಷಣಗಳು ಆಕರ್ಷಣೀಯವಾಗಿತ್ತು. ತ್ರಿವರ್ಣ ಮುದ್ರಿತ ಶ್ವೇತ ವರ್ಣದ ಪೇಟಾ ಸೂಜಿಗಲ್ಲಿನಂತೆ ಎಲ್ಲರ ಗಮನ ಸೆಳೆಯಿತು.
ಮೋದಿಯವರು ಧರಿಸಿದ್ದ ಶ್ವೇತ ವರ್ಣದ ಪೇಟಾದಲ್ಲಿ ಮುದ್ರಿತ ತ್ರಿವರ್ಣ ಇತ್ತು. ಹೀಗಾಗಿ ಸ್ವಾತಂತ್ರ್ಯೋತ್ಸವ ಸಮಾರಂಭದ ಮಹತ್ವವನ್ನು ಸಾರುವಂತಿತ್ತು. ಸಾಂಪ್ರದಾಯಿಕ ಕುರ್ತಾ, ಪೈಜಾಮ, ನೀಲಿ ಕೋಟ್‌ನಲ್ಲಿ ಪ್ರಧಾನಿ ಮೋದಿ ಕಂಗೊಳಿಸಿದರು. ಪೇಟಾದಲ್ಲಿ ” ಹರ್ ಘರ್ ತಿರಂಗಾʼ ಎಂಬ ಸಾಲನ್ನೂ ಮುದ್ರಿಸಲಾಗಿತ್ತು.
೨೦೨೧ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪ್ರಧಾನಿ ಮೋದಿವರು ಕೇಸರಿ ಮತ್ತು ಬೂದು ಬಣ್ಣದ ಪೇಟಾ ಧರಿಸಿದ್ದರು. 2019ರಲ್ಲಿ ಬಹು ವರ್ಣರಂಜಿತ ಪೇಟಾವನ್ನು ತೊಟ್ಟಿದ್ದರು. ಆ ವರ್ಷ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿಗೆ ಪ್ರಧಾನಿಯಾಗಿದ್ದರು. ೨೦೧೮ರಲ್ಲಿ ಕೇಸರಿ ಬಣ್ಣದ ಪೇಟಾ ಧರಿಸಿದ್ದರು. ೨೦೧೭ರಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಪೇಟಾ ತೊಟ್ಟಿದ್ದರು. ೨೦೧೫ರಲ್ಲಿ ಹಳದಿ ಬಣ್ಣದ ಪೇಟಾ ಹಾಗೂ ೨೦೧೪ರಲ್ಲಿ ಕೆಂಪು ಬಣ್ಣದ ಜೋಧ್‌ಪುರಿ ಪೇಟಾ ಧರಿಸಿದ್ದರು.