Site icon Vistara News

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

Pune Police 60 Hours Operation; Drugs worth more than Rs 1300 crore seized

ನವದೆಹಲಿ: ಪುಣೆ ಪೊಲೀಸರು (Pune Police) ಕೇವಲ 60 ಗಂಟೆಯಲ್ಲಿ (60 Hours Operation) ಅತಿದೊಡ್ಡ ಮಾದಕ ವಸ್ತು ಕಳ್ಳ ಸಾಗಣೆ ಜಾಲವನ್ನು ಭೇದಿಸಿದ್ದಾರೆ(drug trafficking networks). ತೀವ್ರ ಕಾರ್ಯಾಚರಣೆ ನಡೆಸಿ, 1300 ಕೋಟಿ ರೂ.ಗೂ ಅಧಿಕ ಮೊತ್ತದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ(Drugs seized). ಪುಣೆ ಭಾಗದಲ್ಲಿ ಮಾದಕವಸ್ತುಗಳ ಉಪಟಳ ಹೆಚ್ಚಾದ ಬೆನ್ನಲ್ಲೇ ಪೊಲೀಸರು ಅಧಿಕಾರಿಗಳು ನಿಖರವಾದ ಯೋಜನೆ ಮತ್ತು ತ್ವರಿತ ಕ್ರಮ ಕೈಗೊಂಡ ಪರಿಣಾಮ ಭಾರಿ ದೊಡ್ಡ ಯಶಸ್ಸು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಮ ಪರಿಸ್ಥಿತಿಯನ್ನು ನಿವಾರಿಸಲೇಬೇಕಾಗದ ಅನಿವಾರ್ಯತೆ ಇತ್ತು. ಅದಕ್ಕಾಗಿ ಪುಣೆ ಪೊಲೀಸರು ತಮ್ಮ ಸಂಪನ್ಮೂಲಗಳನ್ನು ಸಜ್ಜುಗೊಳಿಸಿ, ಕಾರ್ಯಾಚರಣೆಗಿಳಿದರು. ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕವಸ್ತುಗಳ ಮಾರಾಟಕ್ಕೆ ಕಾರಣವಾದ ಅಪರಾಧ ಜಾಲವನ್ನು ಬೇಧಿಸಲು ಹಾಗೂ ಅಪರಾಧ ಜಾಲವನ್ನು ಬುಡಸಮೇತ ಕಿತ್ತುಹಾಕಲು ಕಾರ್ಯಾಚರಣೆ ನಡೆಸಲಾಯಿತು. ಕೇವಲ 60 ಗಂಟೆಯಲ್ಲಿ ಮಾದಕವಸ್ತು ಜಾಲವನ್ನು ಭೇದಿಸಲಾಯಿತು ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಕಾನ್ಸ್‌ಟೇಬಲ್ ವಿಠಲ್ ಸಾಳುಂಕೆ ಅವರಿಗೆ ಫೆಬ್ರವರಿ 19ರಂದು ಸೋಮವಾರ್ ಪೇಠೆಯಲ್ಲಿ ಅಕ್ರಮ ಮಾದಕವಸ್ತುಗಳ ಮಾರಾಟದ ಮಾಹಿತಿಯನ್ನು ಪಡೆದುಕೊಂಡರು. ಸಾಳುಂಕೆ ಅವರು ಕಾರನ್ನು ಅಡ್ಡಗಟ್ಟಿ ಶಂಕಿತ ವೈಭವ್ ಮಾನೆಯನ್ನು ಬಂಧಿಸಿದ್ದಾರೆ. ಮಾನೆ ಅವರು ತೃಪ್ತಿಕರ ಉತ್ತರಗಳನ್ನು ನೀಡಿಲ್ಲ. ಹೀಗಾಗಿ ಆತನ ಕಾರನ್ನು ತಪಾಸಣೆ ಮಾಡಿದಾಗ ಸುಮಾರು 1 ಕೋಟಿ ರೂ. ಮೌಲ್ಯದ 500 ಗ್ರಾಮ್ ಎಂಡಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾನೆ ಮತ್ತು ಕಾರ್ ಚಾಲಕ ಅಜಯ್ ಕರೋಸಿಯಾ ಅವರನ್ನು ವಿಚಾರಣೆ ನಡೆಸಿದಾಗ ಅವರ ಅಕ್ರಮ ಡ್ರಗ್ಸ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ ನಂತರ, ಕಾರಿನ ವಿವರಗಳನ್ನು ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಹೆಸರನ್ನು ಗುರುತಿಸಿದ್ದಾರೆ. ಫೆಬ್ರವರಿ 19 ರ ಸಂಜೆಯವರೆಗೆ ಪೊಲೀಸರು ವಿಶ್ರಾಂತವಾಡಿಯ ಗೋದಾಮಿನ ಮೇಲೆ ದಾಳಿ ನಡೆಸಿ 55 ಕೆಜಿ ಎಂಡಿ ವಶಪಡಿಸಿಕೊಂಡರು ಮತ್ತು ಹೈದರ್ ಶೇಖ್‌ನನ್ನು ಬಂಧಿಸಿದರು.

ಶೇಖ್ ಅವರ ಮೊಬೈಲ್ ಫೋನ್‌ನ ತಾಂತ್ರಿಕ ವಿಶ್ಲೇಷಣೆಯ ಸಮಯದಲ್ಲಿ, ಎಂಡಿ ತಯಾರಿಸಿದ ಕಾರ್ಖಾನೆಯ ಘಟಕಗಳ ಕೆಲವು ಛಾಯಾಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡರು. ಮರುದಿನ ಅಂದರೆ, ಫೆಬ್ರವರಿ 20ರಂದು ಪೊಲೀಸರು ಎಂಐಡಿಸಿ ಕುರ್ಕುಂಭ್‌ನಲ್ಲಿರುವ ಕಾರ್ಖಾನೆ ಘಟಕದ ಮೇಲೆ ದಾಳಿ ನಡೆಸಿದರು ಮತ್ತು 1,327 ಕೋಟಿ ರೂ. ಮೌಲ್ಯದ 664 ಕೆಜಿ ಎಂಡಿಯನ್ನು ಜಪ್ತಿ ಮಾಡಿಕೊಂಡರು.

ದಾಳಿಯ ಸಮಯದಲ್ಲಿ ಪೊಲೀಸರು ಕಾರ್ಖಾನೆಯ ಮಾಲೀಕರಾದ ಭೀಮಾಜಿ ಸಾಬಳೆಯನ್ನು ಬಂಧಿಸಿದರು. ಈ ವೇಳೆ, ಕಾರ್ಖಾನೆ ನಡೆಸಲು ಎಲ್ಲಾ ತಾಂತ್ರಿಕ ಬೆಂಬಲ ನೀಡಿದ ಯುವರಾಜ್ ಭುಜಬಲ್ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ಅದರ ನಂತರ ಪೊಲೀಸರು ಅದೇ ದಿನ ಮುಂಬೈನಿಂದ ಆತನನ್ನು ಪತ್ತೆಹಚ್ಚಿ ಬಂಧಿಸಿದರು.

ಭುಜಬಲ್ ಮತ್ತು ಸಾಬಳೆ ಅವರ ವಿವರವಾದ ವಿಚಾರಣೆಯ ಸಮಯದಲ್ಲಿ, ಈ ಕಂಪನಿಯಲ್ಲಿ ತಯಾರಿಸಿದ ಹೆಚ್ಚಿನ ಪ್ರಮಾಣದ ಮಾದಕ ವಸ್ತುಗಳನ್ನು ಇತರ ದೇಶಗಳಿಗೆ ಮತ್ತಷ್ಟು ಕಳ್ಳಸಾಗಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಅದೇ ದಿನ ದೆಹಲಿಗೆ ಬಂದಿಳಿದ ಪೊಲೀಸರ ತಂಡ ದಕ್ಷಿಣ ಪ್ರದೇಶದಲ್ಲಿ ಅಕ್ಕಪಕ್ಕದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ ಮೂವರು ಶಂಕಿತರನ್ನು ಬಂಧಿಸಿ 970 ಕೆಜಿ ಎಂಡಿ ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Sunil Kamble: ಪೊಲೀಸ್‌ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕ; ದರ್ಪದ ವಿಡಿಯೊ ಇದೆ

Exit mobile version