Site icon Vistara News

PV Sindhu : ಪಿವಿ ಸಿಂಧು ಹ್ಯಾಟ್ರಿಕ್​ ಒಲಿಂಪಿಕ್ಸ್​ ಪದಕದ ಕನಸು ಭಗ್ನ, 16ನೇ ಸುತ್ತಿನಲ್ಲಿ ಸೋಲು

PV Sindhu

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಗುರುವಾರ (ಆಗಸ್ಟ್​​1ರಂದು) ಭಾರತದ ಬ್ಯಾಡ್ಮಿಂಟನ್ ಗೆ ಕಠಿಣ ದಿನವಾಗಿತ್ತು. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಭಾರತದ ಅತ್ಯಂತ ಯಶಸ್ವಿ ಶಟ್ಲರ್ ಎಚ್.ಎಸ್.ಪ್ರಣಯ್ ನಿರ್ಗಮಿಸಿದ ಬಳಿಕ ಪಿ.ವಿ.ಸಿಂಧು (PV Sindhu) ಕೂಡ ಸೋತಿದ್ದಾರೆ. ಲಾ ಚಾಪೆಲ್ ಅರೆನಾದ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಚೀನಾದ 6ನೇ ಶ್ರೇಯಾಂಕದ ಹಿ ಬಿಂಗ್ ಜಿಯಾವೊ ವಿರುದ್ಧ ಶರಣಾದರು. ಪೇಲವವಾಗಿ ಆಡಿದ ಸಿಂಧು ನೇರ ಗೇಮ್ ಗಳಲ್ಲಿ ಸೋಲನುಭವಿಸಿದರು. ಸಿಂಧು ತಮ್ಮ ವೃತ್ತಿಜೀವನದಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಎರಡು ಒಲಿಂಪಿಕ್ಸ್​ಗಳಲ್ಲಿ ಪದಕ ಗೆದ್ದಿದ್ದರು. ಈ ಬಾರಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಹ್ಯಾಟ್ರಿಕ್ ಕನಸು ನುಚ್ಚು ನೂರಾಯಿತು.

ಇದೇ ಮೈದಾನದಲ್ಲಿ ಸಾತ್ವಿಕ್-ಚಿರಾಗ್ ಜೋಡಿ 19-21, 14-21 ಅಂತರದಲ್ಲಿ ಸೋತಿತ್ತು. ಪ್ಯಾರಿಸ್​ನಲ್ಲಿ ಐತಿಹಾಸಿಕ ಮೂರನೇ ಪದಕದ ನಿರೀಕ್ಷೆಯಲ್ಲಿದ್ದ ಸಿಂಧು ಗುರುವಾರ 6ನೇ ಶ್ರೇಯಾಂಕದ ಆಟಗಾರ್ತಿಗೆ ಬಗ್ಗಿದರು.

ಇದು ಟೋಕಿಯೊ ಒಲಿಂಪಿಕ್ ಪ್ರತಿಸ್ಪರ್ಧಿಗಳ ನಡುವೆ ಬಿಗಿಯಾದ ಹೋರಾಟದ ಆರಂಭಿಕ ಪಂದ್ಯವಾಗಿತ್ತು. ಇಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರು, ಸಿಂಧು ಜಿಯಾವೊ ಮೇಲೆ ಒತ್ತಡ ಹೇರಲು ತನ್ನ ಶಕತಿ ಬಳಸಿದರು. ಆದರೆ ಅವರ ಚೀನಾದ ಎದುರಾಳಿ ತನ್ನ ಚಾಕಚಕ್ಯತೆ ಪ್ರದರ್ಶನಗಳು ಮತ್ತು ಶಕ್ತಿಯುತ ಸ್ಮ್ಯಾಶ್ ಗಳ ಮೂಲಕ ಮುನ್ನಡೆಕಂಡರು. ಸಿಂಧು ಆಟದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ, ತಕ್ಷಣವೇ ಸುಧಾರಿಸಿಕೊಂಡರು. ಆದರೆ ಸಿಂಧು ತಪ್ಪುಗಳನ್ನು ಮಾಡುವ ಮೂಲಕ ಅಂಕಗಳನ್ನು ಕಳೆದುಕೊಂಡರು.

ಸಿಂಧು ಅವರ ಉತ್ಸಾಹಭರಿತ ಹೋರಾಟದ ಹೊರತಾಗಿಯೂ ಮೊದಲ ಗೇಮ್ ಅನ್ನು 19-21 ರಿಂದ ಕಳೆದುಕೊಂಡರು. ಪಂದ್ಯದ ಎರಡನೇ ಗೇಮ್ ನಲ್ಲಿ ಅವರು 2-8 ರಿಂದ ಹಿನ್ನಡೆ ಅನುಭವಿಸಿದರು. ಎರಡನೇ ಗೇಮ್ ನ ಮೊದಲಾರ್ಧದಲ್ಲಿ ಡಿಫೆನ್ಸ್ ವಿಫಲವಾಯಿತು. ಅಲ್ಲಿ ಹಿ ಬಿಂಗ್ ಜಿಯಾವೊ ಸಿಂಧು ಅವರ ಎಲ್ಲಾ ಹೊಡೆತಗಳನ್ನು ಸ್ವೀಕರಿಸಿದರು. ಕೋರ್ಟ್​​ನಲ್ಲಿ ತಮ್ಮ ವೇಗವನ್ನು ನಿರ್ಣಯಿಸಲು ವಿಫಲರಾದರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

ಸಿಂಧು ಅವರ ಸೋಲು ಭಾರತೀಯ ನಿಯೋಗಕ್ಕೆ ನಿರಾಸೆ ತಂದಿತು. ಸ್ವಪ್ನಿ ಕುಸಾಲೆ ಕಂಚಿನ ಪದಕ ಗೆದ್ದ ನಂತರ, ಭಾರತವು ಹಾಕಿಯಲ್ಲಿ ಸೋತಿತು. 50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ ಸಿಫ್ಟ್ ಕೌರ್ ಸಮ್ರಾ ನಿರ್ಗಮಿಸಿದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕಕ್ಕಾಗಿ ಹೋರಾಡಲು ಭಾರತವು ಈಗ ಬ್ಯಾಡ್ಮಿಂಟನ್ ತಂಡದಲ್ಲಿ ಲಕ್ಷ್ಯ ಸೇನ್ ಮಾತ್ರ ಉಳಿದುಕೊಂಡಿದ್ದಾರೆ. ಆಗಸ್ಟ್ 2ರಂದು ನಡೆಯಲಿರುವ ಕ್ವಾರ್ಟರ್ ಫೈನಲ್​​ನಲ್ಲಿ ಲಕ್ಷ್ಯ ಅವರು ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ

Exit mobile version