ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಗೆಲ್ಲಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ 29 ರಂದು ಬಾರ್ಬಡೋಸ್ನ ಬ್ರಿಜ್ಟೌನ್ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯವನ್ನು ಭಾರತ ಗೆದ್ದು 13 ವರ್ಷಗಳ ಬಳಿಕ ಟ್ರೋಫಿ ಗೆಲ್ಲಲಿದೆ ಎಂಬುದಾಗಿ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೆನ್ ಇನ್ ಬ್ಲೂ ಈ ವಿಶ್ವ ಕಪ್ನ ಇದುವರೆಗಿನ ಪಂದ್ಯಗಳಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಫಾರ್ಮ್ ನಲ್ಲಿತ್ತು. ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತಹ ದೊಡ್ಡ ತಂಡಗಳನ್ನು ಸೋಲಿಸಿದೆ. ಹೀಗಾಗಿ ಫೈನಲ್ ಗೆ ಮುಂಚಿತವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಕೂಡ ಹಿಂದೆ ಬಿದ್ದಿಲ್ಲ. ದಕ್ಷಿಣ ಆಫ್ರಿಕಾ ಅದ್ಭುತ ಸ್ಥಿರತೆ ತೋರಿಸಿದೆ. ಇಲ್ಲಿಯವರೆಗೆ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿದೆ. ಅವರು ಈ ಪಂದ್ಯಾವಳಿಯಲ್ಲಿ ಒಂಬತ್ತನೇ ಗೆಲುವಿನ ಗುರಿ ಹೊಂದಿದ್ದಾರೆ. ಇದು ಐಸಿಸಿ ಟ್ರೋಫಿಗಾಗಿ ಅವರ ಬರವನ್ನು ಕೊನೆಗೊಳಿಸಬಹುದು.
2024ರ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ ಅವರು ಕ್ರಿಕೆಟಿಗರಾಗಿ ಮತ್ತು ತರಬೇತುದಾರರಾಗಿ ಭಾರತೀಯ ಕ್ರಿಕೆಟ್ಗೆ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ದುರದೃಷ್ಟವಶಾತ್, ಅವರಿಗೆ ಖುಷಿ ಪಡಲು ಯಾವುದೇ ಐಸಿಸಿ ಟ್ರೋಫಿಗಳು ಇಲ್ಲ. ಕಳೆದ ವರ್ಷ ಭಾರತವು ಏಕದಿನ ವಿಶ್ವಕಪ್ 2023 ಫೈನಲ್ ತಲುಪಿದಾಗ ಅವರು ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲುವ ಆಸೆ ಹುಟ್ಟಿತ್ತು. ಆದರೆ ಮೆನ್ ಇನ್ ಬ್ಲೂ ಫೈನಲ್ ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ದ್ರಾವಿಡ್ ಮತ್ತೆ ನಿರಾಶೆಗೊಂಡಿದ್ದರು.
ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಕೊನೆಯ ಟೂರ್ನಿಯಾಗಿದೆ. ಹೀಗಾಗಿ #DoItForDravid ಎಂಬ ಅಭಿಯಾನ ನಡೆಯುತ್ತಿದೆ. ಟೂರ್ನಿಯ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಅದನ್ನು ಮಾಡಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಈ ಅಭಿಯಾನದ ಮೂಲಕ ಅಭಿಮಾನಿಗಳು ಭಾರತೀಯ ದಂತಕಥೆಗೆ ಐಸಿಸಿ ಟ್ರೋಫಿ ತಂದುಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಅಭಿಯಾನದ ಬಗ್ಗೆ ದ್ರಾವಿಡ್ ಬೇಸರಗೊಂಡಿದ್ದಾರೆ. ತಕ್ಷಣ ಅದನ್ನು ನಿಲ್ಲಿಸುವಂತೆ ಕೋರಿದ್ದಾರೆ. ಇಂಥ ಅಭಿಯಾನಗಳು ನನ್ನ ನಂಬಿಕೆಗೆ ವಿರುದ್ಧ ಎಂಬುದಾಗಿಯೂ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಅದನ್ನು ಮಾಡಲು ಬಯಸುತ್ತೇನೆ. ಏಕೆಂದರೆ ವಿಶ್ವ ಕಪ್ ನಡೆದೇ ನಡೆಯುತ್ತದೆ ಎಂದು ಹೇಳಿದ್ದಾರೆ.
ಇನ್ನೊಬ್ಬರಿಗಾಗಿ ಗೆಲ್ಲುವುದನ್ನು ನಾನು ನಿಜವಾಗಿಯೂ ನಂಬುವುದಿಲ್ಲ. ‘ನೀವು ಮೌಂಟ್ ಎವರೆಸ್ಟ್ ಅನ್ನು ಏಕೆ ಏರಲು ಬಯಸುತ್ತೀರಿ?’ ಎಂಬು ಅನಾಮಿಕರೊಬ್ಬರ ಪ್ರಶ್ನೆಗೆ ನೀಡುವ ಉತ್ತರ ಇಲ್ಲಿಗೂ ಹೊಂದಿಕೆಯಾಗುತ್ತದೆ. ‘ನಾನು ಮೌಂಟ್ ಎವರೆಸ್ಟ್ ಅನ್ನು ಏರಲು ಬಯಸುತ್ತೇನೆ ಏಕೆಂದರೆ ಅದು ಅಲ್ಲಿಯೇ ಇದೆ’. ಅಂತೆಯೇ ವಿಶ್ವ ಕಪ್ ನಡೆಯುತ್ತದೆ. ಹೀಗಾಗಿ ಟ್ರೋಫಿ ಗೆಲ್ಲಬೇಕು. ಇನ್ಯಾರಿಗಾಗಿಯೋ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Team India : ಟೆಸ್ಟ್ ಕ್ರಿಕೆಟ್ನ ಒಂದೇ ದಿನದಲ್ಲಿ ಗರಿಷ್ಠ ರನ್; ದಾಖಲೆ ಬರೆದ ಭಾರತ ತಂಡ
“ನಾನು ಈ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ ಏಕೆಂದರೆ ಅದು ನಡೆಯುತ್ತದೆ. ಇದು ಯಾರಿಗಾಗಿಯೂ ಅಲ್ಲ. ಗೆಲ್ಲುವ ಅವಕಾಶ ಮಾತ್ರ ಇದೆ. ನಾನು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ. ಯಾರಿಗಾದರೂ ಅದನ್ನು ಮಾಡುವುದು ಅಲ್ಲ. ಒಬ್ಬ ವ್ಯಕ್ತಿಯಾಗಿ ನಾನು ನಂಬುಚುದಕ್ಕೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ. ನಾನು ಅದರ ಬಗ್ಗೆ ಮಾತನಾಡಲು ಮತ್ತು ಚರ್ಚಿಸಲು ಬಯಸುವುದಿಲ್ಲ “ಎಂದು ಭಾರತದ ಮುಖ್ಯ ಕೋಚ್ ಹೇಳಿದರು.
ಭಾರತಕ್ಕೆ 3ನೇ ಟಿ20 ವಿಶ್ವಕಪ್ ಫೈನಲ್
ಭಾರತವು ಟಿ 20 ವಿಶ್ವಕಪ್ ಪ್ರಶಸ್ತಿಯ ಉದ್ಘಾಟನಾ ಚಾಂಪಿಯನ್. ಅಂದಿನಿಂದ ಟ್ರೋಫಿಯನ್ನು ಎತ್ತಲು ಸಾಧ್ಯವಾಗಿಲ್ಲ. ಇದು ಟಿ 20 ವಿಶ್ವಕಪ್ ಫೈನಲ್ನಲ್ಲಿ ಅವರ ಮೂರನೇ ಪ್ರವೇಶ. ಎರಡು ಪ್ರದರ್ಶನಗಳಲ್ಲಿ, ಮೆನ್ ಇನ್ ಬ್ಲೂ 2007 ರಲ್ಲಿ ವಿಜೇತರಾಗಿ ಮತ್ತು 2014 ರಲ್ಲಿ ರನ್ನರ್ ಅಪ್ ಆಗಿ ಕೊನೆಗೊಂಡಿತು. 2013 ರಿಂದ ಐಸಿಸಿ ಟ್ರೋಫಿಯ ಬರವನ್ನು ಅವರು ಕೊನೆಗೊಳಿಸಿದ್ದಾರೆ.
ಇದು ಪಂದ್ಯಾವಳಿಯ ಎರಡು ಅತ್ಯುತ್ತಮ ತಂಡಗಳ ನಡುವಿನ ರೋಮಾಂಚಕ ಫೈನಲ್ ಎಂದು ನಿರೀಕ್ಷಿಸಲಾಗಿದೆ. ಎರಡೂ ತಂಡಗಳು ಬಲವಾಗಿದೆ. ಫೈನಲ್ ನ ಒತ್ತಡವನ್ನು ನಿಭಾಯಿಸಬಲ್ಲ ತಂಡವು ಅಗ್ರಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ.