Site icon Vistara News

Fact Check | ಪಾಕಿಸ್ತಾನ ಜಿಂದಾಬಾದ್‌ ಎಂದ ಅಮೂಲ್ಯ ಜತೆ ಫೋಟೊಗೆ ಪೋಸ್‌ ಕೊಟ್ಟರೇ ರಾಹುಲ್‌ ಗಾಂಧಿ?

Rahul

ತಿರುವನಂತಪುರಂ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ (Bharat Jodo Yatra) ಭಾಗವಾಗಿ ಕೇರಳದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಮಾರ್ಗ ಮಧ್ಯೆ ಗ್ರಾಮಸ್ಥರು, ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ರಾಹುಲ್‌ ಗಾಂಧಿ ಯಾತ್ರೆಗೆ ಸಾಥ್‌ ನೀಡುತ್ತಿದ್ದಾರೆ. ಇದರ ಮಧ್ಯೆಯೇ ರಾಹುಲ್‌ ಗಾಂಧಿ ವಿರುದ್ಧ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದ ಕರ್ನಾಟಕದ ಅಮೂಲ್ಯ ಲಿಯೋನಾ ಜತೆ ಫೋಟೊ ತೆಗೆಸಿಕೊಂಡ ಆರೋಪ (Fact Check) ಕೇಳಿಬಂದಿದೆ.

ಅಮೂಲ್ಯ ಲಿಯೋನಾ.

2020ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (CAA) ವಿರೋಧಿಸಿ ನಡೆದ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆಯೇ ಅಮೂಲ್ಯ ಲಿಯೋನಾ ‘ಪಾಕಿಸ್ತಾನ ಜಿಂದಾಬಾದ್’‌ ಎಂದು ಘೋಷಿಸಿದ್ದರು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಅವರಿದ್ದ ವೇದಿಕೆ ಮೇಲೆಯೇ ಹೀಗೆ ಪಾಕ್‌ ಪರ ಘೋಷಣೆ ಕೂಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಮೂಲ್ಯ ಲಿಯೋನಾರನ್ನು ಬಂಧಿಸಲಾಗಿತ್ತು. ಈಗ ರಾಹುಲ್‌ ಗಾಂಧಿ ಅವರು ಅಮೂಲ್ಯ ಜತೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಆರೋಪಿಸಿ ಟೀಕಿಸಲಾಗಿದೆ. ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರೇ ಈ ಕುರಿತು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಫೋಟೊವನ್ನೂ ವೈರಲ್‌ ಮಾಡಲಾಗಿದೆ.

ನಿಜಾಂಶ ಏನು?

ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ ಮಧ್ಯೆ ಯುವತಿಯೊಬ್ಬರ ಜತೆ ಫೋಟೊ ತೆಗೆಸಿಕೊಂಡಿದ್ದು ನಿಜ. ಆದರೆ, ಅದು ಅಮೂಲ್ಯ ಲಿಯೋನಾ ಜತೆ ಅಲ್ಲ ಎಂಬುದು ಸಾಬೀತಾಗಿದೆ. ಕೇರಳ ಕಾಂಗ್ರೆಸ್‌ ವಿದ್ಯಾರ್ಥಿಗಳ ಘಟಕದ ಸದಸ್ಯೆಯಾಗಿರುವ ಮಿವೆ ಜಾಲಿ (Mive Jolly) ಜತೆ ರಾಹುಲ್‌ ಗಾಂಧಿ ಫೋಟೊ ತೆಗೆಸಿಕೊಂಡಿದ್ದಾರೆ. ಆದರೆ, ಜಾಲತಾಣದಲ್ಲಿ ಇದರ ಕುರಿತು ತಪ್ಪಾಗಿ ಮಾಹಿತಿ ಹರಿಬಿಡಲಾಗಿದೆ. ಸುಳ್ಳು ಮಾಹಿತಿ ಹರಡಿಸಿದ ಕಾರಣ ಕಾಂಗ್ರೆಸ್‌, ಪ್ರೀತಿ ಗಾಂಧಿ ವಿರುದ್ಧ ಕೇಸ್‌ ದಾಖಲಿಸಿದೆ.

ಇದನ್ನೂ ಓದಿ | Fact Check | ಮದ್ಯ ಸೇವಿಸುತ್ತ ರಾಹುಲ್‌ ಗಾಂಧಿ ವಿಡಿಯೊ ವೀಕ್ಷಿಸಿದರೇ ಸ್ಮೃತಿ ಇರಾನಿ?

Exit mobile version