Site icon Vistara News

Raichur News : ಉಸಿರಾಡುತ್ತಿವೆ ಮುಸ್ಲಿಂ ಧರ್ಮಗುರುಗಳ ಗೋರಿಗಳು, ಪವಾಡ ಎಂದ ಭಕ್ತರು

Raichur News

ರಾಯಚೂರು : ಜಿಲ್ಲೆಯಲ್ಲಿ ವಿಸ್ಮಯಕಾರಿ (Raichur News) ಘಟನೆಯೊಂದು ನಡೆಯುತ್ತಿದ್ದು ಇಸ್ಲಾಂ ಧರ್ಮಗುರುಗಳ ಗೋರಿಗಳು ಉಸಿರಾಡುತ್ತಿವೆ ಎಂಬುದಾಗಿ ಭಕ್ತರು ನಂಬಿದ್ದಾರೆ. ಹೀಗಾಗಿ ಗೋರಿಗಳ ವೀಕ್ಷಣೆಗೆ ಭಕ್ತರು ಸಾಲು ಗಟ್ಟಿ ಬರುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

ಲಿಂಗಸ್ಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಈ ಅಚ್ಚರಿ ಉಂಟಾಗಿದೆ ಎಂಬುದಾಗಿ ಸಾರ್ವಜನಿಕರು ಹೇಳಿದ್ದಾರೆ ಇಲ್ಲಿನ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ದರ್ಗಾದಲ್ಲಿನ ಉರುಸ್ ಬಳಿಕ ಇಂಥದ್ದೊಂದು ಪವಾಡ ಸಂಭವಿಸಿದೆ ಎಂಬುದಾಗಿ ಜನರು ಹೇಳುತ್ತಿದ್ದಾರೆ. ನೂರಾರು ವರ್ಷಗಳ ಹಳೆ ಗೋರಿಗಳು ಉಸಿರಾಟ ನಡೆಸಿದಂತೆ ಅಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರಿಗೆ ಭಾಸವಾಗುತ್ತಿದೆ. ಅದರ ವಿಡಿಯೊಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ.

ಈ ದರ್ಗಾದಲ್ಲಿ ಉರುಸ್‌ ನಡೆದಿದ್ದು ಆ ಬಳಿಕ 40 ದಿನಗಳ ಕಾಲ ಜನರಿಗೆ ಇದೇ ಅನುಭವ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲಿರುವ ಒಟ್ಟು ಮೂರು ಗೋರಿಗಳು ಉಸಿರಾಟ ನಡೆಸಿದಂತೆ ಅನುಭವವಾಗುತ್ತಿದೆ ಎಂದು ಹೇಳಲಾಗಿದೆ. ಗೋರಿಗಳು ಉಸಿರಾಟದಿಂದಾಗಿ ಅದರ ಮೇಲೆ ಹಾಕಿರುವ ಹೂವುಗಳು ಪುಟಿಯುತ್ತಿದೆ ಎಂದು ಭೇಟಿ ನೀಡಿದ ಭಕ್ತರು ಹೇಳಿದ್ದಾರೆ. ಸಂಜೆಯಿಂದ ಬೆಳಗಿನವರೆಗೂ ಮೂರು ಗೋರಿಗಳು ಉಸಿರಾಡಿದಂತೆ ಭಾಸವಾಗುತ್ತಿದೆ ಎಂದು ಭಕ್ತರು ನುಡಿದಿದ್ದಾರೆ. ಕೌತುಕಕಾರಿ ಘಟನೆಯನ್ನು ವೀಕ್ಷಿಸಲ ಸಾವಿರಾರು ಮಂದಿ ದರ್ಗಾಕ್ಕೆ ಬರುತ್ತಿದ್ದಾರೆ.

ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂತೋಷ, ಸಮೃದ್ಧಿ, ನೆಮ್ಮದಿ ಸಿಗುತ್ತವೆ!

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇರಿಸುವುದು ಶುಭ ಸಂಕೇತವೆಂದು (Good sign) ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲೂ (Vastu Tips) ಇದನ್ನು ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ (hindu dharma) ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯಾಕೆಂದರೆ ಇದು ಭಾರತೀಯರ ಅತ್ಯಂತ ಪುರಾತನ ವಿಜ್ಞಾನವೂ ಹೌದು.

ಕೆಲವೊಂದು ವಸ್ತುಗಳು ಮನೆಯಲ್ಲಿ ಇದ್ದರೆ ಅದು ನಮ್ಮ ಜೀವನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ತುಂಬಲು ಬಯಸಿದರೆ ವಾಸ್ತು ಪ್ರಕಾರ ಈ ದಿಕ್ಕುಗಳಲ್ಲಿ ಈ ವಸ್ತುಗಳನ್ನು ಇರಿಸಿ.

ಇದನ್ನೂ ಓದಿ: Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

ಆನೆಯ ಪ್ರತಿಮೆಗಳು: ಮನೆಯಲ್ಲಿ ಎರಡು ಜೋಡಿ ಎತ್ತರಿಸಿದ ಸೊಂಡಿಲು ಇರುವ ಆನೆಯ ಪ್ರತಿಮೆಗಳನ್ನು ಇಟ್ಟುಕೊಳ್ಳುವುದರಿಂದ ಕುಟುಂಬ ಸದಸ್ಯರಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ತರಬಹುದು. ಈ ಮೂರ್ತಿಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಕಾಮಧೇನು ಹಸುವಿನ ಪ್ರತಿಮೆ : ಕಾಮಧೇನು ಹಸುವಿನ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಉತ್ತಮ ಆರೋಗ್ಯ ಮತ್ತು ಸಂಪತ್ತು ಆಶೀರ್ವಾದವನ್ನು ತರುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಈ ಪ್ರತಿಮೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಿ.

ಗೂಬೆ ಪ್ರತಿಮೆ: ಇದು ಕೆಟ್ಟ ಕಣ್ಣು ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಗೂಬೆಯ ಪ್ರತಿಮೆಯನ್ನು ಇರಿಸುವುದು ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಮತ್ತು ಮನೆಯವರ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬೀಳದಂತೆ ಮಾಡಲು ಸಹಾಯ ಮಾಡುತ್ತದೆ.

Exit mobile version