Site icon Vistara News

Ranji Trophy : ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ದಾಖಲೆ ಬರೆದ ರೈಲ್ವೇಸ್

Ranji Trohpy Cricket

ಬೆಂಗಳೂರು: ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ತಂಡ ಅತಿ ಹೆಚ್ಚು ರನ್ ಚೇಸ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಐದು ವಿಕೆಟ್ ಗಳ ಸುಲಭ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ತಂಡವು ರಣಜಿ ಟ್ರೋಫಿಯ ಇತಿಹಾಸ ಪುಸ್ತಕ ಸೇರಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ತ್ರಿಪುರಾ 149 ರನ್​ಗಳಿಗೆ ಆಲೌಟ್ ಆಯಿತು. ಆದಾಗ್ಯೂ, ಅವರ ಬೌಲರ್​ಗಳು ಅದ್ಭುತ ಕೆಲಸ ಮಾಡಿದರು, ತಂಡವು 44 ರನ್​ಗಳ ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಎರಡನೇ ಇನ್ನಿಂಗ್ಸ್ ನಲ್ಲಿ ತ್ರಿಪುರಾ 333 ರನ್ ಗಳಿಸಿ 378 ರನ್ ಗಳ ಗುರಿ ನೀಡಿತ್ತು. ನಂತರ ನಡೆದದ್ದು ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ರಶನ. ರೈಲ್ವೇಸ್ ತ್ರಿಪುರಾವನ್ನು ದಿಗ್ಭ್ರಮೆಗೊಳಿಸಿ ಗೆಲುವು ಸಾಧಿಸಿತು.

ರೈಲ್ವೇಸ್​​ ಚೇಸಿಂಗ್ ಆರಂಭವು ಪ್ರಬಲವಾಗಿರಲಿಲ್ಲ. ಸಂದರ್ಶಕರು 3 ವಿಕೆಟ್​ಗೆ 31ರನ್​ ಗಳಿಸಿ ತೀವ್ರ ತೊಂದರೆಗೆ ಬಿತ್ತು. ಆದಾಗ್ಯೂ, ಆರಂಭಿಕ ಆಟಗಾರ ಪ್ರಥಮ್ ಸಿಂಗ್ 169* ರನ್ ಗಳಿಸುವ ಮೂಲಕ ಪರಿಸ್ಥಿತಿ ಬದಲಾಯಿಸಿದರು. ಮೊಹಮ್ಮದ್ ಸೈಫ್ 106 ರನ್ ಗಳಿಸುವ ಮೂಲಕ ಅವರಿಗೆ ಉತ್ತಮ ಬೆಂಬಲ ನೀಡಿದರು. ಅವರು ಔಟಾದ ನಂತರ ಅರಿಂದಮ್ ಘೋಷ್ 40 ರನ್ ಗಳಿಸಿದರು. ಇವರೆಲ್ಲರ ಪ್ರಯತ್ನದ ನೆರವಿನಿಂದ ರೈಲ್ವೇಸ್ 378 ರನ್​ಗಳನ್ನು ಬೆನ್ನಟ್ಟಿತು ಹಾಗೂ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿತು.

ತ್ರಿಪುರಾಗೆ ನಿರಾಸೆ

ರೈಲ್ವೇಸ್​ನ ಮೂವರು ಬ್ಯಾಟರ್​ಗಳ ಪ್ರಯತ್ನದಿಂದ ತ್ರಿಪುರಾ ನಿರಾಶೆಗೊಂಡಿತು. 31ಗಳಿಗೆ ಮೊದಲ 3 ವಿಕೆಟ್ ಪಡೆದಿದ್ದ ತ್ರಿಪುರಾ ತಂಡಕ್ಕೆ ಗೆಲುವಿನ ಭಾಗ್ಯ ದೊರೆಯಲಿಲ್ಲ.

ಇದನ್ನೂ ಓದಿ : Dhruv Jurel: ಟೆಸ್ಟ್​ಗೆ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್‌ ಕ್ರಿಕೆಟ್​ ಜರ್ನಿಯೇ ಬಲು ರೋಚಕ

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಸೌರಾಷ್ಟ್ರ ಈ ಹಿಂದೆ ಹೊಂದಿತ್ತು. 2019-20ರ ಋತುವಿನಲ್ಲಿ ಅವರು ಉತ್ತರ ಪ್ರದೇಶದ ವಿರುದ್ಧ 372 ರನ್​ಗಳನ್ನು ಬೆನ್ನಟ್ಟಿ ಅಸ್ಸಾಂ ಈ ಹಿಂದೆ ಹೊಂದಿದ್ದ ದಾಖಲೆಯನ್ನು ಅಳಿಸಿತ್ತು. ಐತಿಹಾಸಿಕ ಗೆಲುವಿನ ಹೊರತಾಗಿಯೂ, ರೈಲ್ವೇಸ್ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ 2024 ರ ನಾಕೌಟ್​​ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಏಳು ಪಂದ್ಯಗಳ ನಂತರ ಆ ತಂಡ 24 ಅಂಕಗಳನ್ನು ಹೊಂದಿದೆ. ರಣಜಿ ಟ್ರೋಫಿ ಎಲೈಟ್ ಪಾಯಿಂಟ್ಸ್ ಟೇಬಲ್​ನಲ್ಲಿ ತಮಿಳುನಾಡು ಪ್ರಸ್ತುತ ಅಗ್ರಸ್ಥಾನದಲ್ಲಿದ್ದರೆ, ಗುಜರಾತ್ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.

ಅತಿ ಹೆಚ್ಚು ರನ್​ ಗಳಿಸಿದ ದಾಖಲೆಗಳು

378/5 ರೈಲ್ವೇಶ್ ತಂಡ, ವಿರುದ್ಧ: ತ್ರಿಪುರಾ, 2024

372/4 ಸೌರಾಷ್ಟ್ರ. ವಿರುದ್ಧ: ಉತ್ತರ ಪ್ರದೇಶ, 2019-20

371/4 ಅಸ್ಸಾಂ ವಿರುದ್ದ: ಸರ್ವಿಸಸ್​​ 2008-09

360/4 ರಾಜಸ್ಥಾನ್ ವಿದರ್ಭ 1989-90

359/4 ಉತ್ತರ ಪ್ರದೇಶ ವಿರುದ್ಧ: ಮಹಾರಾಷ್ಟ್ರ 2021-22

Exit mobile version