Site icon Vistara News

Rajasthan Royals : ರಾಜಸ್ಥಾನ್ ತಂಡಕ್ಕೆ ಹಿನ್ನಡೆ, ಆಸೀಸ್ ಬೌಲರ್​ ಟೂರ್ನಿಯಿಂದ ಔಟ್​

Adam Zampa

ನವದೆಹಲಿ: ಆಸ್ಟ್ರೇಲಿಯಾದ ವೇಗದ ಬೌಲರ್ ಆ್ಯಡಮ್ ಜಂಪಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇಎಸ್​ಪಿಎನ್​ ಕ್ರಿಕ್ಇನ್ಫೋ ವರದಿಯ ಪ್ರಕಾರ, ಜಂಪಾ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2024 ರಿಂದ (IPL 2024) ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಇದು ರಾಜಸ್ಥಾನ್​ ರಾಯಲ್ಸ್ (Rajasthan Royals) ತಂಡಕ್ಕೆ ಹಿನ್ನಡೆ ಉಂಟುಮಾಡಲಿದೆ. ಕಳೆದ ಋತುವಿನಲ್ಲಿ ಕೇವಲ ಆರು ಪಂದ್ಯಗಳನ್ನು ಆಡಿದರೂ ಫ್ರಾಂಚೈಸಿ ಜಂಪಾ (Adam Zampa) ಅವರನ್ನು ಉಳಿಸಿಕೊಂಡಿತ್ತು. ಆದರೆ ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್​ನ 17 ನೇ ಆವೃತ್ತಿಯಲ್ಲಿ ಸ್ಪಿನ್ನರ್ ಆಡುವುದಿಲ್ಲ ಎಂದು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.

ಐಸಿಸಿ ವಿಶ್ವಕಪ್ 2023 ರಲ್ಲಿ ವಿಜೇತ ಆಸ್ಟ್ರೇಲಿಯಾ ಪರ ಜಂಪಾ ಕೇವಲ 11 ಇನ್ನಿಂಗ್ಸ್​ನಲ್ಲಿ 23 ವಿಕೆಟ್​ಗಳನ್ನು ಪಡೆದಿದ್ದರು. ಅವರು ಈ ವರ್ಷ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಬಿಬಿಎಲ್ 2024 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಿದ್ದಾರೆ.

ಇದನ್ನೂ ಓದಿ : IPL Match Preview : ಮೊದಲ ಹಣಾಹಣಿ ಗೆದ್ದು ಟ್ರೋಫಿಯೆಡೆಗೆ ದಾಪುಗಾಲು ಇಡುವುದೇ ಆರ್​ಸಿಬಿ?

ಐಪಿಎಲ್ 2023 ರಲ್ಲಿ ಒಟ್ಟು 35 ವಿಕೆಟ್​ಗಳನ್ನು ಆರ್​ಆರ್​ ಸ್ಪಿನ್ನರ್​ಗಳು ಪಡೆದಿದ್ದರು. ಅವರಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಸೇರಿಕೊಂಡಿದ್ದಾರೆ. ಹೀಗೆ ರಾಜಸ್ಥಾನ್ ರಾಯಲ್ಸ್ ಗುಣಮಟ್ಟದ ಸ್ಪಿನ್ ದಾಳಿಯನ್ನು ಹೊಂದಿದೆ. ಆದಾಗ್ಯೂ ಸಂಜು ಸ್ಯಾಮ್ಸನ್ ನೇತೃತ್ವದ ಫ್ರಾಂಚೈಸಿಗೆ ಬ್ಯಾಕಪ್ ಆಯ್ಕೆಗಳಿಲ್ಲ. ಈಗ ಜಂಪಾ ಹೊರಗುಳಿದಿರುವುದರಿಂದ ಅವರು ಬದಲಿ ಆಟಗಾರರನ್ನು ಹುಡುಕಬೇಕಾಗುತ್ತದೆ.

ಪ್ರಸಿದ್ಧ್​ಗೂ ಸಿಕ್ಕಿಲ್ಲ ಬದಲಿ

ಗಾಯದಿಂದಾಗಿ ಪ್ರಸಿದ್ಧ್ ಕೃಷ್ಣ ಈಗಾಗಲೇ ಇಡೀ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ. ಫ್ರಾಂಚೈಸಿ ಇನ್ನೂ ಬದಲಿ ಆಟಗಾರನನ್ನು ಘೋಷಿಸಿಲ್ಲ. ಆಟಗಾರರ ಹರಾಜಿನಲ್ಲಿ ತಮ್ಮ ವೇಗದ ದಾಳಿಯ ಸಾಮರ್ಥ್ಯ ಹೆಚ್ಚಿಸಲು ರಾಜಸ್ಥಾನ್ ತಂಡವು ರೋವ್ಮನ್ ಪೊವೆಲ್ ಮತ್ತು ನಾಂಡ್ರೆ ಬರ್ಗರ್ ಅವರನ್ನು ಒಪ್ಪಂದ ಮಾಡಿಕೊಂಡಿತು.

2008ರ ವಿಜೇತರು ಹರಾಜಿಗೆ ಮೊದಲು ಲಕ್ನೋ ಸೂಪರ್ ಜೈಂಟ್ಸ್​ ಭಾರತೀಯ ವೇಗಿ ಅವೇಶ್ ಖಾನ್ ಅವರನ್ನು ಟ್ರೇಡ್​ ಮೂಲಕ ಕರೆತಂದಿದ್ದರು. ಅವರು ಐಪಿಎಲ್ 2024 ರಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಕುಲದೀಪ್ ಸೇನ್ ಅವರೊಂದಿಗೆ ವೇಗದ ದಾಳಿ ನಡೆಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ:

ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೇರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಸಂದೀಪ್ ಶರ್ಮಾ, ಯಜುವೇಂದ್ರ ಚಾಹಲ್, ರಿಯಾನ್ ಪರಾಗ್, ನವದೀಪ್ ಸೈನಿ, ಧ್ರುವ್ ಜುರೆಲ್, ಟ್ರೆಂಟ್ ಬೌಲ್ಟ್, ಡೊನೊವನ್ ಫೆರೇರಾ, ಕುಲದೀಪ್ ಸೇನ್, ಕುನಾಲ್ ರಾಥೋಡ್, ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಅಬಿದ್ ಮುಷ್ತಾಕ್, ನಾಂಡ್ರೆ ಬರ್ಗರ್.

ತಂಡದಿಂದ ಹೊರಗುಳಿದವರು: ಪ್ರಸಿದ್ಧ್ ಕೃಷ್ಣ (ಗಾಯ) ಮತ್ತು ಆಡಮ್ ಜಂಪಾ (ವೈಯಕ್ತಿಕ ಕಾರಣಗಳು).

Exit mobile version