Site icon Vistara News

BJP’s national convention: ಮುಂದಿನ 1,000 ವರ್ಷ ರಾಮರಾಜ್ಯ ಸ್ಥಾಪನೆಗೆ ರಾಮ ಮಂದಿರ ನಾಂದಿ; ಬಿಜೆಪಿ ನಿರ್ಣಯದಲ್ಲಿ ಪ್ರಶಂಸೆ

BJP national Convention

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಭಾನುವಾರ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶ ಮಹತ್ವದ ನಿರ್ಣಯವನ್ನು (BJP’s national convention) ಅಂಗೀಕರಿಸಲಾಗಿದ್ದು , ಮಂದಿರವು ಮುಂದಿನ 1,000 ವರ್ಷಗಳವರೆಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ನಾಂದಿ ಹಾಡಲಿದೆ ಎಂದು ಪ್ರತಿಪಾದಿಸಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನಡೆದ ದೇವಾಲಯವು ರಾಷ್ಟ್ರೀಯ ಪ್ರಜ್ಞೆಯ ಪ್ರತೀಕವಾಗಿದೆ. “ವಿಕಸಿತ್​​ ಭಾರತ್” ನ ಅಗತ್ಯಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಮತ್ತು ದೈವಿಕ ದೇವಾಲಯ ನಿರ್ಮಿಸುವುದು ಐತಿಹಾಸಿಕ ಮತ್ತು ಅದ್ಭುತ ಸಾಧನೆಯಾಗಿದೆ. ಇದು ಮುಂದಿನ 1,000 ವರ್ಷಗಳ ಕಾಲ ಭಾರತದಲ್ಲಿ ‘ರಾಮರಾಜ್ಯ’ ಸ್ಥಾಪನೆಗೆ ಪೂರಕವಾಗಲಿದೆ. ಹೊಸ ಶಕೆಯ ಆರಂಭವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ರಾಮನ ಪ್ರತಿಷ್ಠಾಪನೆಯನ್ನು ಯಶಸ್ವಿ ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ನಿರ್ಣಯದಲ್ಲಿ ಅಭಿನಂದಿಸಲಾಗಿದೆ.

ರಾಮ ಮಂದಿರವು ಭಾರತದ ದೃಷ್ಟಿಕೋನ, ತತ್ವಶಾಸ್ತ್ರ ಮತ್ತು ಸನ್ಮಾರ್ಗದ ಸಂಕೇತವಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. “ಶ್ರೀ ರಾಮ್ ದೇವಾಲಯವು ನಿಜವಾಗಿಯೂ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ” ಎಂದು ಅದು ಹೇಳಿದೆ. ಭಗವಾನ್ ಶ್ರೀ ರಾಮನ ದೈವಿಕ ಪ್ರತಿಷ್ಠಾಪನೆಯನ್ನು ನೋಡಿ ಪ್ರತಿಯೊಬ್ಬ ಭಾರತೀಯ ಸಂತೋಷ ಪಟ್ಟಿದ್ದಾನೆ ಎಂದು ಉಲ್ಲೇಖದಲ್ಲಿ ತಿಳಿಸಲಾಗಿದೆ. ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಪ್ರತಿಯೊಂದು ಅಂಶದಲ್ಲೂ ಭಗವಾನ್ ರಾಮ, ಸೀತೆ ಮತ್ತು ರಾಮಾಯಣವಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮೂಲಭೂತ ಹಕ್ಕುಗಳಿಗೆ ಸ್ಫೂರ್ತಿ

ಭಾರತದ ಸಂವಿಧಾನದ ಮೂಲ ಪ್ರತಿಯಲ್ಲಿ, ಮೂಲಭೂತ ಹಕ್ಕುಗಳ ವಿಭಾಗದಲ್ಲಿ, ವಿಜಯದ ನಂತರ ಅಯೋಧ್ಯೆಗೆ ಮರಳಿದ ನಂತರ ಭಗವಾನ್ ಶ್ರೀ ರಾಮ, ತಾಯಿ ಸೀತಾ ಮತ್ತು ಲಕ್ಷ್ಮಣ ಜಿ ಅವರ ಚಿತ್ರವಿದೆ. ಭಗವಾನ್ ಶ್ರೀ ರಾಮ ಮೂಲಭೂತ ಹಕ್ಕುಗಳಿಗೆ ಸ್ಫೂರ್ತಿ ಎಂಬುದಕ್ಕೆ ಅದುವೇ ಪುರಾವೆ ಎಂದು ಅದು ಹೇಳಿದೆ. ಅದೇ ರೀತಿ ರಾಮರಾಜ್ಯದ ಕಲ್ಪನೆಯು ಮಹಾತ್ಮ ಗಾಂಧಿಯವರ ಹೃದಯದಲ್ಲಿಯೂ ಇತ್ತು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ರಾಮರಾಜ್ಯದ ಕಲ್ಪನೆಯೇ ನಿಜವಾದ ಪ್ರಜಾಪ್ರಭುತ್ವದ ಕಲ್ಪನೆ ಎಂದು ಗಾಂಧೀಜಿ ಹೇಳುತ್ತಿದ್ದರು. ಭಗವಾನ್ ಶ್ರೀ ರಾಮನ ಆದರ್ಶಗಳನ್ನು ಅನುಸರಿಸಿ, ಪ್ರಧಾನಿ ದೇಶದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸುವ ಮೂಲಕ ನಿಜವಾದ ಅರ್ಥದಲ್ಲಿ ರಾಮರಾಜ್ಯ’ದ ಸ್ಫೂರ್ತಿಯನ್ನು ಜಾರಿಗೆ ತಂದಿದ್ದಾರೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಲೋಕಸಭೆ ಚುನಾವಣೆ ಗೆಲುವಿಗಾಗಿ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್‌ ಕೊಟ್ಟ ಮೋದಿ!

ಭಗವಾನ್ ರಾಮನು ತನ್ನ ಮಾತುಗಳಲ್ಲಿ ಮತ್ತು ಆಲೋಚನೆಗಳಲ್ಲಿ ತುಂಬಿದ ಮೌಲ್ಯಗಳನ್ನು ಅನುಸರಿಸಲಾಗುತ್ತಿದೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮತ್ತು ‘ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್​ ಅದಕ್ಕೆ ಸ್ಫೂರ್ತಿ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮೋದಿಯವರ ನಾಯಕತ್ವದಲ್ಲಿ, ಭಾರತದ ಏಕತೆ ಮತ್ತು ಒಗ್ಗಟ್ಟು ಸಾರ್ವಜನಿಕರ ಭಾಗವಹಿಸುವಿಕೆಯು ಹೆಚ್ಚಿದೆ. ಅವರು ತಮ್ಮ ನೀತಿಗಳು ರಾಷ್ಟ್ರದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ.. ಕಳೆದ 10 ವರ್ಷಗಳಲ್ಲಿ ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಹೆಮ್ಮೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಅದು ಹೇಳಿದೆ.

Exit mobile version