Site icon Vistara News

R Ashwin : ಸ್ಪಿನ್​ ಲೆಜೆಂಡ್​ ಮುರಳೀಧರನ್​ ದಾಖಲೆಯನ್ನೂ ಅಳಿಸಿದ ಅಶ್ವಿನ್​ ಕೈಚಳಕ

Ravinchandran Ashwing

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ (Ind vs Eng) ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರ 18 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ರವಿಚಂದ್ರನ್ ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ಯಾವುದೇ ಕ್ರಿಕೆಟಿಗ ಮಾಡಿರುವ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 36ನೇ ಬಾರಿ ಐದನೇ ವಿಕೆಟ್ ಸಾಧನೆ ಮಾಡಿದ್ದಾರೆ. ರೆಡ್-ಬಾಲ್ ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​​ನ ಎರಡನೇ ಇನ್ನಿಂಗ್ಸ್​​ನಲ್ಲಿ ಆಫ್-ಸ್ಪಿನ್ನರ್ 77 ರನ್​ಗಳಿಗೆ ಐದು ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಅಶ್ವಿನ್ ಮೂರನೇ ದಿನ ಜಾಕ್ ಕ್ರಾವ್ಲಿ, ಬೆನ್ ಸ್ಟೋಕ್ಸ್, ಒಲಿ ಪೋಪ್ ಮತ್ತು ಬೆನ್ ಫೋಕ್ಸ್ ಅವರನ್ನು ಔಟ್ ಮಾಡಿದರು. ಈ ಸಾಧನೆಯು ಅವರನ್ನು ಮುರಳೀಧರನ್, ವಾರ್ನ್ ಮತ್ತು ಕುಂಬ್ಳೆ ಅವರ ಎಲೈಟ್​ ಪಟ್ಟಿಗೆ ಸೇರ್ಪಡೆ ಮಾಡಿತು. ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ 100 ನೇ ಪಂದ್ಯದಲ್ಲಿ ಐದು ವಿಕೆಟ್​ಗಳನ್ನು ಮಾಡಿದ ಸಾಧನೆಯನ್ನೂ ಮಾಡಿದರು.

ಮುತ್ತಯ್ಯ ಮುರಳೀಧರನ್ ದಾಖಲೆ ಏನು?


ರವಿಚಂದ್ರನ್ ಅಶ್ವಿನ್ ತಮ್ಮ 100 ನೇ ಟೆಸ್ಟ್​​ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಮುತ್ತಯ್ಯ ಮುರಳೀಧರನ್ ಅವರ ದಾಖಲೆ ಮುರಿದರು. ಮೊದಲ ಇನ್ನಿಂಗ್ಸ್​ನಲ್ಲಿ 51 ರನ್​ ನೀಡಿ 4 ವಿಕೆಟ್ ಪಡೆದರೆ ಎರಡನೇ ಇನ್ನಿಂಗ್ಸ್​​ನಲ್ಲಿ 77 ರನ್​​​ಗೆ 5 ವಿಕೆಟ್ ಪಡೆದರು.

ಇದನ್ನೂ ಓದಿ : Ind vs Eng : ಬೌಲ್ಡ್​​ ಆದ ಬಳಿಕ ಡಿಆರ್​ಎಸ್​​ಗೆ ಮನವಿ ಮಾಡಿದ ಬಶೀರ್​; ಬಿದ್ದು ಬಿದ್ದು ನಕ್ಕ ರೂಟ್​!

2006ರಲ್ಲಿ ಚಟ್ಟೋಗ್ರಾಮದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯ ಮುರಳೀಧರನ್ ಅವರಿಗೆ ​ 100ನೇ ಟೆಸ್ಟ್ ಪಂದ್ಯವಾಗಿತ್ತು. ಅಲ್ಲಿ ಅವರು 141 ರನ್​​ಗೆ 9 ವಿಕೆಟ್ ಪಡೆದು ಮಿಂಚಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದ ಅವರು, ಎರಡನೇ ಇನ್ನಿಂಗ್ಸ್ ನಲ್ಲಿ 54 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

ವೈಯಕ್ತಿಕ 100ನೇ ಟೆಸ್ಟ್​​ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು

ಅಶ್ವಿನ್ ತಮ್ಮ ಚೊಚ್ಚಲ ಮತ್ತು 100 ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬೇರೆ ಯಾವುದೇ ಆಟಗಾರ ಈ ಎರಡು ಮೈಲಿಗಲ್ಲನ್ನು ಸಾಧಿಸಿಲ್ಲ. ನವೆಂಬರ್ 2011 ರಲ್ಲಿ ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಒಂಬತ್ತು ವಿಕೆಟ್​​ಗಳನ್ನು ಪಡೆದಿದ್ದರು.

ಕಪಿಲ್‌ದೇವ್ ದಾಖಲೆಯನ್ನೂ ಮುರಿದ ಭಾರತದ ಸ್ಪಿನ್‌ ಮಾಂತ್ರಿಕ!

ಬೆಂಗಳೂರು : ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಭಾರತಕ್ಕಾಗಿ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ (Ind vs Eng) ಮಾಡಿದ ಸಾಧನೆ ಅಸಮಾನ್ಯ. ಮೊದಲ ಇನ್ನಿಂಗ್ಸ್​​ನಲ್ಲಿ 4 ವಿಕೆಟ್ ಪಡೆದ ಅವರು ಮೂರನೇ ಇನಿಂಗ್ಸ್​​ನಲ್ಲಿ 5 ವಿಕೆಟ್ ಸೇರಿದಂತೆ 9 ವಿಕೆಟ್​ ಕಬಳಿಸಿದ್ದಾರೆ. ಇದು ಅವರ ಪಾಲಿಗೆ ಸ್ಮರಣೀಯ. ಅಂತೆಯೇ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ನಿರ್ದಿಷ್ಟ ಬ್ಯಾಟರ್​ ಅನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು ಆಂಗ್ಲರ ನಾಯಕ ಬೆನ್​ಸ್ಟೋಕ್ಸ್ ಅವರನ್ನು 13 ಬಾರಿ ಔಟ್ ಮಾಡಿದ ಕೀರ್ತಿ ತಮ್ಮದಾಗಿಸಿಕೊಂಡರು. ಜತೆಗೆ ಕಪಿಲ್ ದೇವ್​ ರೆಕಾರ್ಡ್​ ಬ್ರೇಕ್ ಮಾಡಿದರು.

ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೊದಲು, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಪಾಕಿಸ್ತಾನದ ಮುದಾಸರ್ ನಜರ್ ಅವರ ವಿಕೆಟ್ ಅನ್ನು 12 ಬಾರಿ ಪಡೆದಿದ್ದರು. ಆದರೆ 5 ನೇ ಟೆಸ್ಟ್ನ 3 ನೇ ದಿನದಂದು, ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯ 13 ನೇ ಬಾರಿಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಅಗ್ರಸ್ಥಾನಕ್ಕೇರಿದರು.

Exit mobile version