Site icon Vistara News

Ind vs Eng : ಮೂರನೇ ಪಂದ್ಯಕ್ಕೂ ಜಡೇಜಾ ಅಲಭ್ಯ; ರಾಹುಲ್ ಕತೆ ಏನು?

Ravindra Jadeja

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫೆಬ್ರವರಿ 15ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹೊರಗುಳಿಯುವ ಸಾಧ್ಯತೆಯಿದೆ. ವಿಶೇಷವೆಂದರೆ, ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನ 4ನೇ ದಿನದಂದು ಸ್ನಾಯು ಸೆಳೆತಕ್ಕೆ ಒಳಗಾದ ಕಾರಣ ಫೆಬ್ರವರಿ 02ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗಬೇಕಿದ್ದ ಸರಣಿಯ ಎರಡನೇ ಟೆಸ್ಟ್​​ನಿಂದ ಜಡೇಜಾ ಹೊರಗುಳಿದಿದ್ದಾರೆ.

ಜನವರಿ 30 ರ ಮಂಗಳವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಾರಂಭಿಸಿದ್ದಾರೆ. ಅವರ ಚೇತರಿಕೆ ಪ್ರಕ್ರಿಯೆಯ ಬಗ್ಗೆ ಅಭಿಮಾನಿಗಳೊಂದಿಗೆ ನಿರಂತರವಾಗಿ ಅಪ್​ಡೇಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅವರು ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಕ್ರಿಕ್​ಬಜ್​ ವರದಿಯ ಪ್ರಕಾರ ಜಡೇಜಾ ಗುಣಮುಖರಾಗಲು ನಾಲ್ಕರಿಂದ ಎಂಟು ವಾರಗಳು ಬೇಕಾಗಬಹುದು ಮತ್ತು ಫೆಬ್ರವರಿ 23 ರಿಂದ 27 ರವರೆಗೆ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್​ಗೆ ಅವರು ಫಿಟ್ ಆಗಲು ಯಶಸ್ವಿಯಾಗಲಿದ್ದಾರೆ. ವೇಗದ ಬೌಲರ್ ಶಮಿ ಪ್ರಸ್ತುತ ಲಂಡನ್​ನಲ್ಲಿರುವ ಕಾರಣ ಅವರಿಗೆ ಸಂಬಂಧಿಸಿದ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಇದನ್ನೂ ಓದಿ : Ind vs Eng : ದೌರ್ಬಲ್ಯ ಮೀರಿ ಆಡಿದರಷ್ಟೇ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ವೇಗದ ಬೌಲರ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯ ಉಳಿದ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಇವರಿಬ್ಬರನ್ನು ಹೊರತುಪಡಿಸಿ, ವಿರಾಟ್ ಕೊಹ್ಲಿ ಅಲಭ್ಯತೆಯ ಬಗ್ಗೆ ಯಾವುದೇ ವಿವರಗಳಿಲ್ಲ, ಆದಾಗ್ಯೂ, ಕ್ರಿಕ್​ಬಜ್​​ ವರದಿಯು ಭಾರತದ ಮಾಜಿ ನಾಯಕ ಪ್ರಸ್ತುತ ದೇಶದಿಂದ ಹೊರಗಿದ್ದಾರೆ ಎಂದು ಹೇಳುತ್ತದೆ.

ರಾಹುಲ್​ಗೆ ವಿಶ್ರಾಂತಿ

ಗಾಯದ ಸಮಸ್ಯೆಯ ಮಧ್ಯೆ, ಬ್ಯಾಟರ್​ ಕೆಎಲ್ ರಾಹುಲ್ ಮೂರನೇ ಟೆಸ್ಟ್​​ಗೆ ಫಿಟ್ ಆಗುವ ಸಾಧ್ಯತೆ ಇದೆ. 31 ವರ್ಷದ ಆಟಗಾರ ಮೊದಲ ಪಂದ್ಯದ ವೇಳೆ ಬಲ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲಿದ್ದರು. ನಂತರ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದರು. ರಾಹುಲ್ ತಂಡದ ಪ್ರಮುಖ ಬ್ಯಾಟರ್​ ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಎರಡನೇ ಮತ್ತು ಮೂರನೇ ಟೆಸ್ಟ್ ನಡುವಿನ ದೀರ್ಘ ಅಂತರವನ್ನು ಗಮನದಲ್ಲಿಟ್ಟುಕೊಂಡು ಅವರು ಮೂರನೇ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆಯಿದೆ.

ಎರಡನೇ ಟೆಸ್ಟ್​ಗೆ ಒಂದು ದಿನ ಮುಂಚಿತವಾಗಿ ಇಂಗ್ಲೆಂಡ್ ಮತ್ತೊಮ್ಮೆ ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಹೆಸರಿಸಿದೆ, ಮೊಣಕಾಲು ಗಾಯದಿಂದಾಗಿ ಹೊರಗುಳಿಯಲಿರುವ ಜ್ಯಾಕ್ ಲೀಚ್ ಬದಲಿಗೆ ಆಫ್-ಸ್ಪಿನ್ನರ್ ಶೋಯೆಬ್ ಬಶೀರ್ ಪದಾರ್ಪಣೆ ಮಾಡಲಿದ್ದಾರೆ. ಮಾರ್ಕ್ ವುಡ್ ಬದಲಿಗೆ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಕೂಡ ಇಲೆವೆನ್​​ಗೆ ಸೇರ್ಪಡೆಯಾಗಲಿದ್ದಾರೆ. ಗಾಯಗಳ ಸಂಖ್ಯೆಯನ್ನು ಗಮನಿಸಿದರೆ, ಎರಡನೇ ಟೆಸ್ಟ್ಗೆ ತಮ್ಮ ಆಟದ ಸಂಯೋಜನೆಯನ್ನು ಅಂತಿಮಗೊಳಿಸುವ ಕಠಿಣ ಕೆಲಸವನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ಎದುರಿಸುತ್ತಿದೆ.

Exit mobile version