Site icon Vistara News

Ravindra Jadeja : ರವೀಂದ್ರ ಜಡೇಜಾ ಫುಲ್​ ಫಿಟ್​, ಮೂರನೇ ಪಂದ್ಯಕ್ಕೆ ಲಭ್ಯ?

Ravindra Jadeja

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಫಿಟ್ನೆಸ್ ಅಪ್ಡೇಟ್ ನೀಡಿದ್ದಾರೆ. ಫೆಬ್ರವರಿ 15ರಿಂದ ರಾಜ್​ಕೋಟ್​​ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ರವೀಂದ್ರ ಜಡೇಜಾ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ನಂತರ ಆಲ್​ರೌಂಡರ್​ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ. ನಂತರ ಅವರು ಚೇತರಿಕೆಗಾಗಿ ಎನ್ಸಿಎಗೆ ತೆರಳಿದ್ದರು. ಅಲ್ಲಿಂದ ಅವರು ತಂಡ ಸೇರಿ ಅಭ್ಯಾಸ ಆರಂಭಿಸಿದ್ದಾರೆ.

ರವೀಂದ್ರ ಜಡೇಜಾ ಅವರನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಸೇರಿಸಲಾಯಿತು. ಆದರೆ ಅವರ ಲಭ್ಯತೆಯು ಫಿಟ್ನೆಸ್​ಗೆ ಒಳಪಟ್ಟಿತ್ತು. ರಾಜ್​ಕೋಟ್​​​ನಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕೆ ಮುಂಚಿತವಾಗಿ ಆಲ್ರೌಂಡರ್ ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ/ ಇದು ಅವರ ತವರು ಮೈದಾನವೂ ಆಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ರವೀಂದ್ರ ಜಡೇಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅವರು ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಭಾರತೀಯ ತರಬೇತಿ ಕಿಟ್​ನಲ್ಲಿ ಉತ್ತಮವಾಗಿ ಕಂಡಿದ್ದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪ್ರಾರಂಭವಾಗುವ ಹೊತ್ತಿಗೆ ರವೀಂದ್ರ ಜಡೇಜಾ ಫಿಟ್ ಆಗಿರುತ್ತಾರೆ ಎಂಬುದರ ಸೂಚನೆಯಾಗಿದೆ. ಅವರು ತಂಡಕ್ಕೆ ಮರಳುವುದರ ಬಗ್ಗೆ ಖಚಿತತೆ ನೀಡಿದೆ. ಜತೆಗೆ ಇದು ತಂಡಕ್ಕೆ ಸರಿಯಾದ ಸಮತೋಲನವನ್ನು ನೀಡಲು ಮತ್ತು ಪರಿಪೂರ್ಣ ಸಂಯೋಜನೆಯೊಂದಿಗೆ ಪಂದ್ಯಕ್ಕೆ ಹೋಗಲು ನೆರವು ನೀಡಲಿದೆ.

ಇದನ್ನೂ ಓದಿ : Ranji Trophy : ರಣಜಿ ಟ್ರೋಫಿಯಲ್ಲಿ ಭಾಗವಹಿಸಲು ಎಲ್ಲಾ ಆಟಗಾರರಿಗೆ ಬಿಸಿಸಿಐ ಖಡಕ್ ನೋಟಿಸ್​?

ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ತಂಡಕ್ಕೆ ದೊಡ್ಡ ಪಾತ್ರ ವಹಿಸಿದ್ದರು. ಆದರೆ ಭಾರತವು ನಿರಾಶಾದಾಯಕ ಸೋಲನ್ನು ಅನುಭವಿಸಿದ್ದರಿಂದ ಅವರ ಪ್ರಯತ್ನಗಳು ವ್ಯರ್ಥವಾದವು. ಅವರು ಮೊದಲ ಇನ್ನಿಂಗ್ಸ್​ನಲ್ಲಿ 87 ರನ್​ಗಳೊಂದಿಗೆ ತಂಡದ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. ಚೆಂಡಿನೊಂದಿಗೆ ಅವರು ಮೊದಲ ಇನಿಂಗ್ಸ್​ನಲ್ಲಿ ನಾಲ್ಕು ವಿಕೆಟ್ ಸಾಧನೆ ಸೇರಿದಂತೆ ಪಂದ್ಯದಲ್ಲಿ 6 ವಿಕೆಟ್​ಗಳನ್ನು ಪಡೆದಿದ್ದರು.

ರವೀಂದ್ರ ಜಡೇಜಾ ರಾಜ್​ಕೋಟ್​ನಲ್ಲಿ ತಮ್ಮ ತವರು ಪ್ರೇಕ್ಷಕರ ಮುಂದೆ ಆಡಲು ಸಾಧ್ಯವಾದಷ್ಟು ಬೇಗ ಫಿಟ್ ಆಗಲು ಉತ್ಸುಕರಾಗಿದ್ದಾರೆ. ಚೇತೇಶ್ವರ್ ಪೂಜಾರ ಅವರೊಂದಿಗೆ ಜಡೇಜಾ ಅವರಿಗೂ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸನ್ಮಾನ ಮಾಡಲಿದೆ.

Exit mobile version