Site icon Vistara News

Ravindra Jadeja : ಕಪಿಲ್ ದೇವ್​, ಆರ್​ ಅಶ್ವಿನ್​​ ಇರುವ ಎಲೈಟ್​ ಕ್ಲಬ್​ ಸೇರಿದ ರವೀಂದ್ರ ಜಡೇಜಾ

Ravindra jadeja

ರಾಜ್​ಕೋಟ್​: ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಅಜೇಯ ಶತಕ ಬಾರಿಸಿದ ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಅವರು ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಸೇರಿಕೊಂಡರು. ಅವರ ಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 86 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ.

ರವೀಂದ್ರ ಜಡೇಜಾ (110*) ತಮ್ಮ ನಾಲ್ಕನೇ ಟೆಸ್ಟ್ ಶತಕ ಗಳಿಸಿದರೆ, ರೋಹಿತ್ ಶರ್ಮಾ (131) ತಮ್ಮ 11 ನೇ ಟೆಸ್ಟ್ ಶತಕವನ್ನು ಗಳಿಸಿದರು, ಇವರಿಬ್ಬರು ನಾಲ್ಕನೇ ವಿಕೆಟ್​ಗೆ 204 ರನ್​ಗಳ ಜೊತೆಯಾಟವನ್ನು ಸೇರಿಸಿಕೊಂಡರು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಳಿಕ ಈ ಸ್ಕೋರ್​​ ಮೂಡಿ ಬಂತು.

ಜಡೇಜಾ ಶತಕ ಬಾರಿಸುವ ಜತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ 3000 ರನ್ ಹಾಗೂ 250 ವಿಕೆಟ್ ಪಡೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು. ಭಾರತದ ಮಾಜಿ ನಾಯಕ ಕಪಿಲ್ ದೇವ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 424 ಟೆಸ್ಟ್ ವಿಕೆಟ್ ಮತ್ತು 5248 ರನ್ ಗಳಿಸಿದ್ದಾರೆ. ಅಶ್ವಿನ್ 499 ವಿಕೆಟ್ ಮತ್ತು 3271 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 3000 ರನ್ ಪೂರೈಸಿದ ಜಡೇಜಾ, 280 ವಿಕೆಟ್ ಕಬಳಿಸುವ ಮೂಲಕ ಈ ಕ್ಲಬ್​ಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಮೂವರು ಆಟಗಾರರಿರುವ ಎಲೈಟ್​ ಪಟ್ಟಿ

4ನೇ ಶತಕ ಸಿಡಿಸಿದ ರವೀಂದ್ರ ಜಡೇಜಾ

‘ಭಾರತ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಾಡಿರುವ ನಾಲ್ಕು ಬದಲಾವಣೆಗಳಲ್ಲಿ ಜಡೇಜಾ ಕೂಡ ಒಬ್ಬರು. ಸ್ನಾಯುಸೆಳೆತದ ಗಾಯದಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಆಲ್ರೌಂಡರ್ ತಂಡಕ್ಕೆ ಮರಳಿದ್ದಾರೆ. ಇತರ ಅವಕಾಶಗಳಲ್ಲಿ ಇಬ್ಬರು ಹೊಸ ಚೊಚ್ಚಲ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಇಲೆವೆನ್ ಗೆ ಆಯ್ಕೆ ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಬದಲಿಗೆ ಸರ್ಫರಾಜ್ ಸ್ಥಾನ ಪಡೆದರೆ, ಕೆಎಸ್ ಭರತ್ ಬದಲಿಗೆ ಜುರೆಲ್ ಸ್ಥಾನ ಪಡೆದಿದ್ದಾರೆ. ಮುಕೇಶ್ ಕುಮಾರ್ ಬದಲಿಗೆ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದು, ಜಸ್ಪ್ರೀತ್ ಬುಮ್ರಾ ಮತ್ತೊಬ್ಬ ವೇಗಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : Sarfaraz Khan : ಹಾರ್ದಿಕ್​ ಪಾಂಡ್ಯ ದಾಖಲೆ ಸರಿಗಟ್ಟಿದ ಸರ್ಫರಾಜ್ ಖಾನ್​

ಶೋಯೆಬ್ ಬಶೀರ್ ಬದಲಿಗೆ ಮಾರ್ಕ್ ವುಡ್ ಇಂಗ್ಲೆಂಡ್​​ ಇಲೆವೆನ್​ನಲ್ಲಿ ಅವಕಾಶ ಪಡೆದರು. ರೋಹಿತ್ ಶರ್ಮಾ ಅವರ ವಿಕೆಟ್ ಸೇರಿದಂತೆ ದಿನದಾಟದ ಐದು ವಿಕೆಟ್​ಗಳಲ್ಲಿ 3 ವಿಕೆಟ್ಗಳನ್ನು ಅವರು ಪಡೆದಿದ್ದರಿಂದ ಈ ಕ್ರಮವು ಸರಿ ಎನಿಸಿತು. 695 ಟೆಸ್ಟ್ ವಿಕೆಟ್ ಪಡೆದಿರುವ ಜೇಮ್ಸ್ ಆಂಡರ್ಸನ್ 19 ಓವರ್​ಗಳಲ್ಲಿ 51 ರನ್ ನೀಡಿ ವಿಕೆಟ್ ಪಡೆಯದೆ ಉಳಿದರು.

ಇಂಗ್ಲೆಂಡ್​ನ ಮಧ್ಯಂತರ ಮುಖ್ಯ ಕೋಚ್ ಪಾಲ್ ಕಾಲಿಂಗ್​ವುಡ್ಮಾ ಮಾತನಾಡಿ, ಇಂಗ್ಲೆಂಡ್ ಆರಂಭಿಕ ವಿಕೆಟ್​ಗಳನ್ನು ಪಡೆದ ನಂತರ ಭಾರತೀಯ ತಂಡವು ಹೋರಾಡಿದ ರೀತಿ ಉತ್ತಮವಾಗಿದೆ. ಸೆಷನ್​ನ ಕೊನೆಯಲ್ಲಿ ಸರ್ಫರಾಜ್ ಖಾನ್ ರನೌಟ್ ಆಗಿದ್ದರಿಂದ ಆ ದಿನದ ಸಂಭ್ರಮವನ್ನು ಉಭಯ ತಂಡಗಳು ಸ್ವಲ್ಪ ಮಟ್ಟಿಗೆ ಹಂಚಿಕೊಂಡವು.

Exit mobile version