ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI Repo rate hike) ನಿರೀಕ್ಷೆಯಂತೆ ತನ್ನ ರೆಪೊ ದರವನ್ನು ೦.೫೦% ಏರಿಸಿದೆ. ಪರಿಷ್ಕೃತ ರೆಪೊ ದರ 5.40%ಕ್ಕೆ ಏರಿಕೆಯಾಗಿದೆ.
ಗವರ್ನರ್ ಶಕ್ತಿಕಾಂತ ದಾಸ್ ಅವರು ಬಡ್ಡಿ ದರ (ರೆಪೊ ದರ) ಪರಿಷ್ಕರಣೆ ಸೇರಿದಂತೆ ಹಣಕಾಸು ಪರಾಮರ್ಶೆ ಸಮಿತಿಯ ವಿವರಗಳನ್ನು ಇದೀಗ ನೀಡುತ್ತಿದ್ದಾರೆ. ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲ ದುಬಾರಿಯಾಗಲಿದೆ. ಇಎಂಐ ಕಂತು ಹೆಚ್ಚಲಿದೆ.
ರೆಪೊ ದರ ಏರಿಕೆ ಏಕೆ?: ಈ ವರ್ಷದ ಆರಂಭದಿಂದಲೂ ಹಣದುಬ್ಬರ ಶೇ.೬ರ ಸುರಕ್ಷಿತ ಮಟ್ಟವನ್ನು ಮೀರಿದೆ. ಹೀಗಾಗಿ ಆರ್‌ಬಿಐ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆದ್ಯತೆ ನೀಡುವುದು ಖಚಿತ. ೦.೫೦%ರ ಮಟ್ಟದಲ್ಲಿ ರೆಪೊ ದರ ಏರಿಸಿರುವುದು ಇದನ್ನು ಬಿಂಬಿಸಿದೆ ಎನ್ನುತ್ತಾರೆ ತಜ್ಞರು.