Site icon Vistara News

IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

IPL 2024

ಕೋಲ್ಕೊತಾ: ಮತ್ತೊಂದು ಬಾರಿ ಎಲ್ಲ ಹಂತದಲ್ಲೂ ಕಳಪೆ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 17ನೇ ಆವೃತ್ತಿಯ 36ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ವೀರೋಚಿತ 1 ರನ್​ ಸೋಲಿಗೆ ಒಳಗಾಗಿದೆ. ಒಂದು ಹಂತದಲ್ಲಿ ಗೆಲುವಿನ ಕಡೆಗೆ ಮುನ್ನುಗ್ಗುತ್ತಿದ್ದ ಆರ್​ಸಿಬಿ ತಂಡ ತನ್ನ ಬ್ಯಾಟರ್​ಗಳ ಉಡಾಳತನದಿಂದಾಗಿ ಕೆಕೆಆರ್​ ತಂಡಕ್ಕೆ ತಲೆ ಬಾಗಿತು. ಇದು ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತಂಡಕ್ಕೆ ಏಳನೇ ಸೋಲಾಗಿದೆ. ತನ್ನ ಕಳಪೆ ಪ್ರದರ್ಶನವನ್ನು ಮತ್ತೊಂದು ಬಾರಿ ಮುಂದುವರಿಸಿ ಅಪಾರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು.

ಇಲ್ಲಿನ ಐತಿಹಾಸಿ ಈಡನ್​ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆರ್​ಸಿಬಿ ಬಗಳ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 222 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ತಂಡ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 221 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಕೆಕೆಆರ್ ತಂಡ ಗೆಲುವಿನ ಹಳಿಗೆ ಮರಳಿತು.

ಮತ್ತೆ ಬ್ಯಾಟಿಂಗ್ ವೈಫಲ್ಯ

ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ವಿರಾಟ್​ ಕೊಹ್ಲಿ 18 ರನ್ ಬಾರಿಸಿ ವಿವಾದಾತ್ಮಕವಾಗಿ ಔಟಾದರೆ, ಫಾಫ್ ಡು ಪ್ಲೆಸಿಸ್​ 7 ಎಸೆತಕ್ಕೆ 7 ರನ್ ಮಾಡಿ ಸುಲಭ ಕ್ಯಾಚ್ ನೀಡಿ ಔಟಾದರು. ಆ ಬಳಿಕ ವಿಲ್ ಜ್ಯಾಕ್ಸ್​ 32 ಎಸೆತಕ್ಕೆ 55 ರನ್ ಬಾರಿಸಿದರೆ ರಜತ್ ಪಾಟೀದಾರ್​ 23 ಎಸೆತಕ್ಕೆ 52 ರನ್​ ತಂದುಕೊಟ್ಟರು. ಈ ಜೋಡಿ ಮೂರನೇ ವಿಕೆಟ್​ಗೆ 103 ರನ್​ಗಳ ಜತೆಯಾಟವಾಡುವ ಮೂಲಕ ಆರ್​​ಸಿಬಿಗೆ ಚೈತನ್ಯ ದೊರಕಿತು. ಜಾಕ್ಸ್ ಔಟಾದ ಬಳಿಕ ಆರ್​ಸಿಬಿಯ ಪೇಚಾಟ ಶುರುವಾಯಿತು.

ಇದನ್ನೂ ಓದಿ: Virat Kohli : ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್​ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್​?

12ನೇ ಓವರ್​ ಎಸೆದ ಆ್ಯಂಡ್ರೆ ರಸೆಲ್ ಹಾಗೂ 13ನೇ ಓವರ್ ಎಸೆದ ಸುನೀಲ್​ ನರೈನ್​ಗೆ ವಿಲ್ ಜಾಕ್ಸ್​, ರಜತ್ ಪಾಟೀದಾರ್​, ಮಹಿಪಾಲ್ ಲಾಮ್ರೋರ್ (4) ಹಾಗೂ ಕ್ಯಾಮೆರಾನ್ ಗ್ರೀನ್​ (6) ವಿಕೆಟ್​ ಒಪ್ಪಿಸಿದರು. ಎರಡು ಓವರ್​ಗಳ ಒಳಗೆ ನಾಲ್ಕು ವಿಕೆಟ್​ ಬಿದ್ದದ್ದು ಆರ್​ಸಿಬಿಗೆ ಹೊರೆಯಾಯಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಬಂದ ಸುಯಾಶ್ ಪ್ರಭ್​ದೇಸಾಯಿ ಕಷ್ಟಪಟ್ಟು 24 ರನ್ ಬಾರಿಸಿದರು. ಈ ವೇಳೆ ದಿನೇಶ್​ ಕಾರ್ತಿಕ್ ಆಡಲು ಇಳಿದು ಫಿನಿಶರ್ ಆಗುವ ಪ್ರಯತ್ನ ಮಾಡಿದರು. ವಿಕೆಟ್​ಗಳ ಪತನದ ಹಿನ್ನೆಲೆಯಲ್ಲಿ ಒತ್ತಡ ತಂದುಕೊಂಡ ಆರ್​​ಸಿಬಿ 25 ರನ್​ಗಳಿಗೆ ಔಟಾದರು.

ರೋಚಕ ಕೊನೇ ಓವರ್​

ಕೊನೇ ಓವರ್​ನಲ್ಲಿ ಆರ್​​ಸಿಬಿಗೆ ಹೀಗಾಗಿ ಆರ್​ಸಿಬಿ ಸೋಲು ಖಚಿತವಾಗಿತ್ತು. ಆದರೆ ಎಡಗೈ ಬ್ಯಾಟರ್​​ ಕರಣ್​ ಶರ್ಮಾ ಸ್ಟಾರ್ಕ್​ ಓವರ್​ನ 1, 3 ಮತ್ತು 4ನೇ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಈ ವೇಲೆ 3 ಎಸೆತಕ್ಕೆ 3 ರನ್​ಗಳು ಗೆಲುವಿಗೆ ಬೇಕಾಯಿತು. ಇದರಿಂದಾಗಿ ಆರ್​ಸಿಬಿ ಗೆಲ್ಲುವುದೆಂದರೆ ಅಭಿಮಾನಿಗಳು ನಿರೀಕ್ಷಿಸಿದರು. ಆದರೆ ಐದನೇ ಎಸೆತದಲ್ಲಿ ಕರಣ್​ ರಿಟರ್ನ್​ ಕ್ಯಾಚ್ ನೀಡಿ ಔಟಾದರು. ಅಲ್ಲದೇ ಆರನೇ ಎಸೆತದಲ್ಲಿ ಒಂದೇ ಒಂದು ರನ್ ಬಾರಿಸಲು ಮಾತ್ರ ಫರ್ಗ್ಯೂಸನ್​ಗೆ ಸಾಧ್ಯವಾಯಿತು. ಹೀಗಾಗಿ ಆರ್​ಸಿಬಿ ಒಂದು ರನ್​ ನಿಂದ ಸೋತಿತು.

ಕೆಕೆಆರ್​ ಉತ್ತಮ ಮೊತ್ತ

ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ಮತ್ತೊಂದು ಬಾರಿ ಆರ್​ಸಿಬಿ ಬೌಲರ್​ಗಳನ್ನು ದಂಡಿಸಿದರು. ಆರಂಭಿಕ ಬ್ಯಾಟರ್​ ಫಿಲ್​​ ಸಾಲ್ಟ್​​ 18 ಎಸೆತಕ್ಕೆ 48 ರನ್ ಬಾರಿಸಿದರೆ ಸುನೀಲ್ ನರೈನ್ 10 ರನ್​ಗೆ ಔಟಾದರು. ಅಂಗ್ ಕ್ರಿಶ್​ ರಘುವಂಶಿ 3 ರನ್​ಗೆ ಸೀಮಿತಗೊಂಡರೆ ವೆಂಕಟೇಶ್ ಅಯ್ಯರ್ 16 ರನ್ ಬಾರಿಸಿದರು. ಆದರೆ ಶ್ರೇಯಸ್​ ಅಯ್ಯರ್​ ಅರ್ಧ ಶತಕ ಬಾರಿಸಿ ತಂಡವನ್ನು ಮೇಲಕ್ಕೆತ್ತಿದರು. ರಿಂಕು ಸಿಂಗ್​ 24 ರನ್​, ರಸೆಲ್​ 27 ರನ್​ ಹಾಗೂ ಕೊನೆಯಲ್ಲಿ ರಮಣ್​ದೀಪ್​ ಸಿಂಗ್​ 9 ಎಸೆತಕ್ಕೆ 24 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

Exit mobile version