ಬೆಂಗಳೂರು : ಆರ್ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ ಆರ್ಸಿಬಿ ಆಟಗಾರರು ಹಾಗೂ ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್ಲ್ಲಿದ್ದ ಆರ್ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್ಸಿಬಿಯ ಡ್ರೆಸ್ಸಿಂಗ್ ರೂಮ್ನಲ್ಲಿ ಏಕಾಏಕಿ ಕಾಣಿಸಿಕೊಂಡರು.
ಧೋನಿ ಸಿಎಸ್ಕೆ ತರಬೇತಿ ಕಿಟ್ ಧರಿಸಿ ಡ್ರೆಸ್ಸಿಂಗ್ ರೂಮ್ನಿಂದ ಹೊರನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಫ್ರಾಂಚೈಸಿ ಈ ಪೋಸ್ಟ್ಗೆ “ವೆಲ್ಕಮ್ ಟು ಬೆಂಗಳೂರು ಮಹಿ” ಎಂದು ಶೀರ್ಷಿಕೆ ನೀಡಲಾಗಿದೆ.
ಇದನ್ನೂ ಓದಿ: IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್, ಆರ್ಆರ್ ಬಳಿಕ ಪ್ಲೇಆಫ್ಗೇರಿದ ಎಸ್ಆರ್ಎಚ್
ಕಳೆದ ವರ್ಷ ಸಂದರ್ಶನವೊಂದರಲ್ಲಿ ಎಂಎಸ್ ಧೋನಿ ತಮ್ಮನ್ನು ಅನುಭವಿ ಎಂದು ಕರೆದುಕೊಂಡಿದ್ದರು. ಚಹಾವು ಅದರ ಸರಳತೆಯ ಪ್ರತಿಕೆ ಎಂದರು. ಎಲ್ಲಾದರೂ ಅಭ್ಯಾಸಕ್ಕೆ ಹೋದಾಗ ಮತ್ತು ಯಾರಾದರೂ ಅವರಿಗೆ ಚಹಾ ನೀಡಿದರೆ ಅವರು ಯಾವಾಗಲೂ ಸಂತೋಷ ಪಡುತ್ತೇನೆ ಎಂದು ಹೇಳಿದ್ದರು. ಬೆಂಗಳೂರು ಫ್ರಾಂಚೈಸಿ ವಿರುದ್ಧ 35 ಪಂದ್ಯಗಳಲ್ಲಿ 140.77 ಸ್ಟ್ರೈಕ್ರೇಟ್ನಲ್ಲಿ 839 ರನ್ ಗಳಿಸಿದ್ದಾರೆ.
ಆರ್ಸಿಬಿ-ಸಿಎಸ್ಕೆ ಪಂದ್ಯದ ವೇಳೆ ಮಳೆ ಭೀತಿ?
ಬೆಂಗಳೂರಿನಲ್ಲಿ ಶನಿವಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಭವಿಷ್ಯವಾಣಿಗಳು ಬೆಂಗಳೂರು ಮೂಲದ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯಾಗಿದೆ. ಆದಾಗ್ಯೂ, ಎರಡೂ ತಂಡಗಳು, ವಿಶೇಷವಾಗಿ ಆರ್ಸಿಬಿ ಮುಖಾಮುಖಿಯ ದಿನದಂದು ಮಳೆಗಾಲದ ಹವಾಮಾನ ಊಹಿಸುವುದಿಲ್ಲ.