ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ವಿಶೇಷ ಕಾರ್ಯಕ್ರಮವನ್ನು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು. ಆರ್ಸಿಬಿ ಅನ್ಬಾಕ್ಸ್ ಎಂಬ ಈ ಕಾರ್ಯಕ್ರಮದಲ್ಲಿ ಎರಡು ದಿನದ ಹಿಂದೆ ಡಬ್ಲ್ಯುಪಿಎಲ್ ಚಾಂಪಿಯನ್ (WPL 2024) ಪಟ್ಟ ಅಲಂಕರಿಸಿದ ಮಹಿಳೆಯರ ತಂಡವೂ ಆಗಮಿಸಿತ್ತು. ಅಂತೆಯೇ ತಂಡ ಸ್ಟೇಡಿಯಮ್ಗೆ ಆಗಮಿಸುತ್ತಿದ್ದಂತೆ ಪುರುಷರ ತಂಡದ ಆಟಗಾರರು ವಿಶೇಷ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಆರ್ಸಿಬಿ ಪುರುಷರ ತಂಡವು ಮಹಿಳಾ ತಂಡಕ್ಕೆ ಗಾರ್ಡ್ ಆಫ್ ಹಾನರ್ ನೀಡಿತು. ಸ್ಮೃತಿ ಮಂದಾನ ನೇತೃತ್ವದ ತಂಡ ಚಿನ್ನಸ್ವಾಮಿಗೆ ಪ್ರವೇಶ ಪಡೆದ ತಕ್ಷಣ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಈ ವೇಳೆ ಪುರುಷರ ತಂಡ ವಿಶೇಷ ಗೌರವ ನೀಡಿತು.
RCB men's team gave guard of honour to the victorious women's team.
— Mufaddal Vohra (@mufaddal_vohra) March 19, 2024
– What a wonderful gesture! ❤️🏆pic.twitter.com/lYXABGGrCg
ಆರ್ಸಿಬಿ ಅನ್ಬಾಕ್ಸ್ ಈವೆಂಟ್ ಟೂರ್ನಿ ಆರಂಭಕ್ಕೆ ಮೊದಲು ಅಭಿಮಾನಿಗಳೊಂದಿಗಿನ ಸಂಪರ್ಕವಾಗಿದೆ. ಬೆಂಗಳೂರಿನಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಂಗೀತ ಉದ್ಯಮದ ಹಲವಾರು ವ್ಯಕ್ತಿಗಳು ವೇದಿಕೆಯನ್ನು ಅಲಂಕರಿಸಿದ್ದರು.
ನಾರ್ವೇಜಿಯನ್ ಡಿಜೆ ಮತ್ತು ಸಂಗೀತಗಾರ ಅಲನ್ ವಾಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನೊಂದಿಗೆ ಕೈಜೋಡಿಸಿ 2024ರ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗೆ ಮುಂಚಿತವಾಗಿ ವಿಶೇಷ ಗೀತೆಯನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ : Wanindu Hasaranga : ಲಂಕಾದ ಸ್ಪಿನ್ ಬೌಲರ್ಗೆ ನಿಷೇಧ ಹೇರಿದ ಐಸಿಸಿ
‘ಟೀಮ್ ಸೈಡ್ ಎಫ್ಟಿ ಆರ್ಸಿಬಿ’ ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ನಾರ್ವೇಜಿಯನ್ ಪಾಪ್ ಕಲಾವಿದ ಸೋಫಿಲೌಡ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಅದ್ಭುತ ಅನುಭವವನ್ನು ನೀಡುವ ಭರವಸೆ ನೀಡಿದ್ದಾರೆ. ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಎಲೆಕ್ಟ್ರೋ-ಹೌಸ್ ಬೀಟ್ಸ್ ಮತ್ತು ಬಹುಭಾಷಾ ಸಾಹಿತ್ಯದ ಸಮ್ಮಿಳನದೊಂದಿಗೆ ಈ ಹಾಡು ಭಾರತದಾದ್ಯಂತ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಮನ ಸೆಳೆಯುವ ನಿರೀಕ್ಷೆ ಇದೆ.
ಹೊಸ ಜೆರ್ಸಿ ಬಿಡುಗಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಐಪಿಎಲ್ 2024 ಕ್ಕೆ ಮುಂಚಿತವಾಗಿ ತಮ್ಮ ಹೊಸ ಜರ್ಸಿಯನ್ನು ಅನಾವರಣಗೊಳಿಸಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಸ್ಮೃತಿ ಮಂದಾನ ಅವರು ಆರ್ಸಿಬಿಯ ಹೊಸ ಮ್ಯಾಚ್ ಕಿಟ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ ಪ್ರಸಿದ್ಧ ಡಿಜೆ ಮತ್ತು ಸಂಗೀತ ನಿರ್ಮಾಪಕ ಅಲನ್ ವಾಕರ್ ಕೂಡ ಸಮಾರಂಭದಲ್ಲಿ ಹಾಜರಿದ್ದರು.
ಹಿಂದಿನ ಋತುವಿಗೆ ಹೋಲಿಸಿದರೆ, ಜರ್ಸಿಯ ಮೇಲಿನ ಅರ್ಧವನ್ನು ಕಪ್ಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಯಿಸಲಾಗಿದೆ., ಆರ್ಸಿಬಿಯ ಬಣ್ಣಗಳಿಗೆ ಹೊಸ ವಿನ್ಯಾಸವನ್ನು ಸೇರಿಸಲಾಗಿದೆ. ವಿಶೇಷವೆಂದರೆ, ರಘು ದೀಕ್ಷಿತ್, ನೀತಿ ಮೋಹನ್, ಅಲನ್ ವಾಕರ್ ಮತ್ತು ಇತರ ಹಲವಾರು ಕಲಾವಿದರ ಪ್ರದರ್ಶನಗಳೊಂದಿಗೆ ಫ್ರ್ಯಾಂಚೈಸ್ ಅಭಿಮಾನಿಗಳಿಗಾಗಿ ಸಮಾರಂಭವೊಂದನ್ನು ಆಯೋಜಿಸಿತ್ತು.
ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2024 ರ ಉದ್ಘಾಟನಾ ಪಂದ್ಯದೊಂದಿಗೆ ಆರ್ಸಿಬಿ ತನ್ನ ಋತುವನ್ನು ಪ್ರಾರಂಭಿಸಲಿದೆ. ಗಮನಿಸಬೇಕಾದ ಅಂಶವೆಂದರೆ ಫ್ರಾಂಚೈಸಿ ಎಂದಿಗೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.