Site icon Vistara News

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

Reasi Terror Attack

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Reasi Terror Attack) ಬದುಕುಳಿದವರು ಆ ಭಯಾನಕ ಕ್ಷಣವನ್ನು ವಿವರಿಸಿದ್ದಾರೆ. ಎಲ್ಲರನ್ನೂ ಸಾಯಿಸಬೇಕು ಎಂಬ ಉದ್ದೇಶದಿಂದ ಭಯೋತ್ಪಾದಕರು ಬಸ್​ ಕಮರಿಗೆ ಬಿದ್ದಿದ್ದರೂ ಗುಂಡು ಹಾರಿಸುತ್ತಲೇ ಇದ್ದರು ಎಂದು ಅವರು ಹೇಳಿದ್ದಾರೆ. ನಾವೆಲ್ಲರೂ ಗುಂಡು ಬಿದ್ದು ಸತ್ತಂತೆ ನಟಿಸಿ ಬದುಕಿಕೊಂಡೆವು ಎಂದು ಅವರು ಭಯಭೀತ ಘಟನೆಯನ್ನು ವಿವರಿಸಿದ್ದಾರೆ.

ತಂಡದಲ್ಲಿ 6ರಿಂದ 7 ಭಯೋತ್ಪಾದಕರು ಇದ್ದರು. ಅವರು ಮಾಸ್ಕ್​ನಿಂದ ಮುಖ ಮುಚ್ಚಿದ್ದರು. ಆರಂಭದಲ್ಲಿ, ಅವರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿದರು. ಬಳಿಕ ಗುಂಡು ಹಾರಿಸಲು ಆರಂಭಿಸಿದರು. ಬಸ್ ಕಮರಿಗೆ ಹತ್ತಿರ ಬಂದು ಎಲ್ಲರೂ ಸಾಯುವಂತೆ ಕೂಗುತ್ತಾ ನಿರಂತರ ಗುಂಡು ಹಾರಿಸುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಾವೆಲ್ಲರೂ ಸತ್ತಿದ್ದೇವೆ ಎಂದು ಅವರನ್ನು ನಂಬಿಸಲು ನಾವು ಮೌನವಾಗಿಯೇ ಇದ್ದೆವು. ಸಂಜೆ 6 ಗಂಟೆಗೆ ಶಿವಖೋರ್ಹಿಯಿಂದ (ರಿಯಾಸಿ) ವೈಷ್ಣೋದೇವಿಗೆ ಬಸ್ ಮೂಲಕ ಬರುವಾಗ 30 ನಿಮಿಷಗಳ ದಾರಿಯ ನಡುವೆ ಘಟನೆ ನಡೆದಿದೆ. ನಾವು ಭಯಭೀತರಾಗಿದ್ದೆವು. ಬಸ್ಸಿನಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹ ಇದ್ದರು. ಎಲ್ಲರೂ ಗಾಯಗೊಂಡಿದ್ದಾರೆ. ದಾಳಿ ನಡೆದ 10 ರಿಂದ 15 ನಿಮಿಷಗಳ ನಂತರ ಪೊಲೀಸರು ಮತ್ತು ಸ್ಥಳೀಯರು ನಮ್ಮನ್ನು ರಕ್ಷಿಸಲು ಬಂದರು ಎಂದು ಯಾತ್ರಿಯೊಬ್ಬರು ಹೇಳಿದರು.

20 ನಿಮಿಷ ಗುಂಡು ಹಾರಿಸಿದ್ದರು

ಭಯಾನಕ ದಾಳಿಯನ್ನು ವಿವರಿಸಿದ ಸಂತ್ರಸ್ತರೊಬ್ಬರು “ಭಯೋತ್ಪಾದಕರಲ್ಲಿ ಒಬ್ಬ ಬಸ್ ಮೇಲೆ ಗುಂಡು ಹಾರಿಸುವುದನ್ನು ನಾನು ನೋಡಿದ್ದೇನೆ. ಬಸ್ ಕಮರಿಗೆ ಬಿದ್ದ ನಂತರವೂ ಅವರು 20 ನಿಮಿಷಗಳ ಕಾಲ ಗುಂಡು ಹಾರಿಸುತ್ತಲೇ ಇದ್ದರು. ಬಸ್ ಚಾಲಕನಿಗೆ ಗುಂಡು ತಗುಲಿದ ಕಾರಣ ನಿಯಂತ್ರಣ ಕಳೆದುಕೊಂಡು ವಾಹನವು ಕಮರಿಗೆ ಬಿದ್ದಿದೆ.

ಮಕ್ಕಳೂ ಎಂದೂ ನೋಡದೆ ಕೊಂಡಿದ್ದರು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

ರಿಯಾಸಿ ಬಸ್ ದಾಳಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೌರಿ ಮತ್ತು ಪೂಂಛ್​​ನಲ್ಲಿ ದಾಳಿಗಳನ್ನು ನಡೆಸಿದ ಲಷ್ಕರ್ ಉಗ್ರರ ಗುಂಪು ಟಿಆರ್​ಎಫ್​ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ದಾಳಿಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್ಐಎ) ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Exit mobile version