ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಆಯವ್ಯಯವನ್ನು ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಷೇರು ಪೇಟೆಯಲ್ಲಿ ಮೂಲಸೌಕರ್ಯ, ಉತ್ಪಾದನೆ, ಬಂಡವಾಳ ಸರಕು, ರಕ್ಷಣೆ, ರೈಲ್ವೆ, ಪಿಎಸ್‌ಯು ವಲಯದ ಷೇರುಗಳ ದರಗಳಲ್ಲಿ (Budget 2023) ಚೇತರಿಕೆ ಕಂಡು ಬಂದಿದೆ.
ಜನವರಿಯಲ್ಲಿ ಇದುವರೆಗೆ ಬಿಎಸ್‌ಇ ಕ್ಯಾಪಿಟಲ್ ಗೂಡ್ಸ್, ಬಿಎಸ್‌ಇ ಮೆಟಲ್, ನಿಫ್ಟಿ ಪಿಎಸ್‌ಇ ಇಂಡೆಕ್ಸ್‌ಗಳು ಅತಿ ಹೆಚ್ಚು ಗಳಿಕೆ ದಾಖಲಿಸಿವೆ. ಮೋರ್ಗಾನ್ ಸ್ಟಾನ್ಲಿ ಸಂಸ್ಥೆಯ ಆರ್ಥಿಕ ತಜ್ಞ ರಿಧಾಮ್ ದೇಸಾಯಿ ಅವರ ಪ್ರಕಾರ ಕೇಂದ್ರ ಸರ್ಕಾರವು ವಿತ್ತೀಯ ಬಲವರ್ಧನೆಗೆ ಆದ್ಯತೆ ನೀಡಲಿದೆ. ವೆಚ್ಚವನ್ನು ಹೆಚ್ಚಿಸಲು ಆದ್ಯತೆ ನೀಡಿದರೆ, ಕನ್‌ಸ್ಯೂಮರ್ ಗೂಡ್ಸ್ ಮತ್ತು ಕಾರ್ಪೊರೇಟ್ ಕಂಪನಿಗಳ ಷೇರು ದರ ಚೇತರಿಸಲಿದೆ.
ನೊಮುರಾದ ಪ್ರಕಾರ ಬಜೆಟ್‌ನಲ್ಲಿ ಎಂಎಸ್‌ಎಂಇ, ಮೂಲಸೌಕರ್ಯ, ಆಸ್ತಿ ನಗದೀಕರಣ, ಕೃಷಿ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ಸಿಗಲಿದೆ. ಹೀಗಾಗಿ ಈ ವಲಯದ ಕಂಪನಿಗಳ ಷೇರುಗಳು ಲಾಭ ಗಳಿಸಲಿವೆ.
ರೆಲಿಗೇರ್ ಬ್ರೋಕಿಂಗ್ ವರದಿಯ ಪ್ರಕಾರ, ಆಟೊಮೊಬೈಲ್, ಎಫ್‌ಎಂಸಿಜಿ, ಕನ್‌ಸ್ಯೂಮರ್ ಡ್ಯೂರೆಬಲ್ಸ್ ಷೇರುಗಳು ಚೇತರಿಸಲಿವೆ.
ಬಜೆಟ್‌ಗೆ ಮುನ್ನ 2.30%ರಿಂದ 4.26% ತನಕ ಏರಿಕೆ ದಾಖಲಿಸಿರುವ ವಲಯಾವಾರು ಇಂಡೆಕ್ಸ್‌ಗಳ ವಿವರ ಇಂತಿದೆ.
ಬಿಎಸ್‌ಇ ಕ್ಯಾಪಿಟಲ್ ಗೂಡ್ಸ್ ( ೪.೨೬%), ಬಿಎಸ್‌ಇ ಮೆಟಲ್ ( ೩.೯೭%), ನಿಫ್ಟಿಪಿಎಸ್‌ಇ (3.73%), ಬಿಎಸ್‌ಇ ಇಂಡಸ್ಟ್ರೀಸ್ (3.59%), ಬಿಎಸ್‌ಇ ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಇಂಡೆಕ್ಸ್ (3.13%), ನಿಫ್ಟಿ ಆಯಿಲ್ & ಗ್ಯಾಸ್ (2.30%).
ಬಜೆಟ್ ಸಮೀಪಿಸುತ್ತಿರುವಂತೆ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಶಿಫಾರಸು ಮಾಡಿರುವ ಷೇರುಗಳು: ಎಂ&ಎಂ, ಡಾಬರ್ ಇಂಡಿಯಾ, ಫಿನೊಲೆಕ್ಸ್ ಕೇಬಲ್ಸ್, IRCON ಇಂಟರ್ ನ್ಯಾಶನಲ್, ಐಟಿಸಿ, ಎಚ್‌ಎಎಲ್, ಪಿಎಸ್‌ಪಿ ಪ್ರಾಜೆಕ್ಟ್ಸ್, ಪಿಎನ್‌ಸಿ ಇನ್‌ಫ್ರಾಟೆಕ್, ಅಲ್ಟ್ರಾಟೆಕ್ ಸಿಮೆಂಟ್, ಮ್ಯಾಕ್ರೊಟೆಕ್.