Site icon Vistara News

Champions Trophy : ಭಾರತ ಕ್ರಿಕೆಟ್​ ತಂಡಕ್ಕೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಮಾಜಿ ಆಟಗಾರ

Champions Trophy

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ (Champions Trophy) ಟ್ರೋಫಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಭಾರತವು ಐಸಿಸಿಗೆ ತಾರ್ಕಿಕ ಉತ್ತರ ನೀಡಬೇಕಾಗುತ್ತದೆ. ಅಲ್ಲದೆ, ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸದಿರುವ ನಿರ್ಧಾರವು ಭಾರತ ಕ್ರಿಕೆಟ್​ ತಂಡಕ್ಕೆ (Indian Cricket Team) ಹಿನ್ನಡೆಯನ್ನುಂಟು ಮಾಡುತ್ತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ (Rashid Latif) ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸುವುದಿಲ್ಲ ಎಂದು ಮೂಲಗಳು ಹೇಳಿರುವ ಹಿನ್ನೆಲೆಯಲ್ಲಿ ಲತೀಫ್​ ಭಾರತ ತಂಡವನ್ನು ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದೆ.

ಭಾರತ ತಂಡ ಪ್ರಯಾಣ ಮಾಡದ ಹಿನ್ನೆಲೆಯಲ್ಲಿ ಪಂದ್ಯದ ತಾಣ ಬದಲಾಯಿಸುವ ಬಗ್ಗೆ ಅಥವಾ ಹೈಬ್ರಿಡ್ ಮಾದರಿ ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅರ್ಹತಾ ಸುತ್ತಿನ ಪಂದ್ಯಗಳನ್ನು ಪ್ರತ್ಯೇಕವಾಗಿ ಒಂದು ನಗರದಲ್ಲಿ ನಿಗದಿಪಡಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪ್ರಸ್ತಾಪಿಸಿದೆ ಎಂದು ಹೇಳಲಾಗಿದೆ. ಇವೆಲ್ಲದರಿಂದ ದಿಕ್ಕೆಟ್ಟಿರುವ ಪಾಕಿಸ್ತಾನದ ಆಟಗಾರ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

“ನೀವು ದ್ವಿಪಕ್ಷೀಯ ಸರಣಿಯನ್ನು ನಿರಾಕರಿಸಬಹುದು. ಆದರೆ ಐಸಿಸಿ ಟೂರ್ನಿಗಳನ್ನು ನಿರಾಕರಿಸುವುದು ಕಷ್ಟ. ಐಸಿಸಿ ತನ್ನ ಯೋಜನೆಯನ್ನು ರೂಪಿಸಿದಾಗ ತಂಡಗಳಿಗೆ ತಾವು ಎಲ್ಲಿ ಆಡಬೇಕೆಂದು ತಿಳಿದಿರುತ್ತದೆ. ಉದಾಹರಣೆಗೆ ವಿಶ್ವಕಪ್ ಆಡಲು ಭಾರತಕ್ಕೆ ಹೋಗಬೇಕು ಎಂದು ಪಾಕಿಸ್ತಾನಕ್ಕೆ ತಿಳಿದಿತ್ತು ಮತ್ತು ಅದಕ್ಕೆ ಅನುಗುಣವಾಗಿ ಒಪ್ಪಂದಗಳಿಗೆ ಸಹಿ ಹಾಕಿತ್ತು ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

ಐಸಿಸಿ ಟೂರ್ನಿಗಳನ್ನು ನಿರಾಕರಿಸುವುದು ಸ್ವಲ್ಪ ಕಷ್ಟದ ವಿಷಯ. 1996 ರ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಶ್ರೀಲಂಕಾಕ್ಕೆ ಹೋಗಲು ನಿರಾಕರಿಸಿದವು. ಇಡೀ ಗುಂಪು ಹಂತ ಬದಲಾಯಿತು ಮತ್ತು ಶ್ರೀಲಂಕಾ ಚಾಂಪಿಯನ್ ಆಯಿತು. ಇದು ಬಹಳ ದೊಡ್ಡ ತಪ್ಪು. ಭಾರತ ಅಥವಾ ಪಾಕಿಸ್ತಾನ ಜತೆಯಾಗಿ ಹೋಗದಿರುವುದು ತಪ್ಪು. ಸರ್ಕಾರದ ಮಟ್ಟದಲ್ಲಿ ಯಾವುದೇ ಸಂದರ್ಭಗಳು ಸಂಭವಿಸಿದರೆ ಬರದಿರುವುದಕ್ಕೆ ಕಾರಣ ನೀಡಬೇಕಾಗುತ್ತದೆ. ಪಾಕಿಸ್ತಾನದ ಪರಿಸ್ಥಿತಿಗಳು ಸರಿಯಾಗಿಲ್ಲ ಇತ್ಯಾದಿಗಳನ್ನು ಉಲ್ಲೇಖಿಸಿ ನೀವು ದ್ವಿಪಕ್ಷೀಯ ಸರಣಿಯನ್ನು ನಿರಾಕರಿಸಬಹುದು/ ನನ್ನ ಅಭಿಪ್ರಾಯದಲ್ಲಿ, ಐಸಿಸಿ ಪಂದ್ಯಾವಳಿಯನ್ನು ನಿರಾಕರಿಸುವುದು ಹಿನ್ನಡೆಯನ್ನುಂಟು ಮಾಡುತ್ತದೆ,” ಎಂದು ಮಾಜಿ ವಿಕೆಟ್ ಕೀಪರ್ ಬ್ಯಾಟರ್​ ಹೇಳಿದ್ದಾರೆ

ಲಭ್ಯವಿರುವ ಮಾಹಿತಿಯ ಪ್ರಕಾರ, ಪಿಸಿಬಿ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಅನ್ನು ಚಾಂಪಿಯನ್ಸ್​ ಟ್ರೋಫಿಯ ಸ್ಥಳಗಳಾಗಿ ಆಯ್ಕೆ ಮಾಡಿದೆ. ಲಾಹೋರ್ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸುತ್ತದೆ.

Exit mobile version