Site icon Vistara News

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

IPL 2024

ನವದೆಹಲಿ: ಐಪಿಎಲ್​ 2024ರಲ್ಲಿ (IPL 2024) ಜಾರಿಯಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಲ್ರೌಂಡರ್​ಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಇದರ ಪರಿಣಾಮ ಅಭಿಮಾನಿಗಳೇ ಅರಿತುಕೊಳ್ಳಬಹುದು ಎಂದು ಹೇಳಿದ್ದಾರೆ.

ಪಾಂಟಿಂಗ್ ಆರಂಭದಿಂದಲೂ ಇಂಪ್ಯಾಕ್ಟ್ ಪ್ಲೇಯರ್​ ವ್ಯವಸ್ಥೆಯ ಪ್ರತಿಪಾದಕರಾಗಿರಲಿಲ್ಲ. ಇತ್ತೀಚಿನ ಯೂಟ್ಯೂಬ್ ಪಾಡ್​ಕಾಸ್ಟ್​​ನಲ್ಲಿ ರೋಹಿತ್ ಶರ್ಮಾ ಅವರು “ನಿಯಮದ ಅಭಿಮಾನಿಯಲ್ಲ” ಎಂದು ಹೇಳಿದ್ದರು. ಅಲ್ಲಿ.ದ ನಂತರ ಈ ಚರ್ಚೆಯು ವೇಗ ಪಡೆದುಕೊಂಡಿದೆ. ಏಕೆಂದರೆ ಇದು ಭಾರತೀಯ ಆಲ್​ರೌಂಡರ್​ಗಳ ಅಭಿವೃದ್ಧಿಗೆ ಧಕ್ಕೆ ತರುತ್ತದೆ ಎಂದು ಪಾಟಿಂಗ್ ಹೇಳಿದ್ದಾರೆ. . “ನೋಡಿ, ರೋಹಿತ್ ಶರ್ಮಾ ಅವರಿಂದ ಕೆಲವು ನಿಜವಾಗಿಯೂ ಆಸಕ್ತಿದಾಯಕ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಇಂಪ್ಯಾಕ್ಟ್ ಪ್ಲೇಯರ್ ಆಲ್ರೌಂಡರ್​ಗಳನ್ನು ಆಟದಿಂದ ಸ್ವಲ್ಪ ಹೊರಗಿಡುತ್ತಿದೆ” ಎಂದು ಪಾಂಟಿಂಗ್ ಹೇಳಿದ್ದಾರೆ.

ಸ್ಪೆಷಲಿಸ್ಟ್ ಬ್ಯಾಟರ್​ ಅನ್ನು 8 ನೇ ಕ್ರಮಾಂಕದವರೆಗೆ ಆಡಿಸಬಹುದು. ಆದರೆ ತರಬೇತುದಾರ ಮತ್ತು ಆಟಗಾರರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಬಹುಶಃ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಈ ವಿಧಾನವನ್ನು ಜನರನ್ನು ರಂಜಿಸಲು ಮಾಡಲಾಗುತ್ತಿದೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ”ಎಂದು ಪಾಂಟಿಂಗ್ ವಿವರಿಸಿದರು.

ಟಿ20 ಆಟವು ಮನರಂಜನಾ ಪ್ಯಾಕೇಜ್ ಆಗಿದೆ. ಪ್ರಭಾವಶಾಲಿ ಆಟಗಾರನ ಬಗ್ಗೆ ಪ್ರೇಕ್ಷಕರು ಏನು ಯೋಚಿಸುತ್ತಾರೆ ಎಂದು ಕೇಳುವುದು ಉತ್ತಮ. ಏಕೆಂದರೆ ತಂಡಗಳು ಬಹಳಷ್ಟು ಪಂದ್ಯಗಳಲ್ಲಿ 220 ರಿಂದ 250 ರವರೆಗೆ ಗಳಿಸುತ್ತಿವೆ ಎಂಬ ಅಂಶವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಆಟಗಾರರ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದು ಹೇಳಿದರು. ಪ್ರೇಕ್ಷಕರು ಅದನ್ನು ಹೆಚ್ಚು ಇಷ್ಟಪಡದಿದ್ದರೆ. ಹಳೆಯ ಮಾದರಿಗೆ ಹಿಂದಿರುಗಬೇಕ ಎಂದು ಹೇಳಿದ್ದಾರೆ.

ವಾರ್ನರ್ ಶೇ.85ರಿಂದ 90ರಷ್ಟು ಫಿಟ್

ಬೆರಳಿನ ಗಾಯದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಥ್ರೋಡೌನ್​ಗಳನ್ಉ ಎದುರಿಸುವಾಗ ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಪಾಂಟಿಂಗ್ ಅವರು ಸುಮಾರು 85 ರಿಂದ 90% ಫಿಟ್ ಆಗಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

“ಡೇವಿಡ್ ಆಟದ ದಿನದಂದು ಫಿಟ್ನೆಸ್ ಪರೀಕ್ಷೆಯನ್ನು ಮಾಡಿದ್ದಾರೆ. ಒಂದೆರಡು ದಿನಗಳ ಹಿಂದೆ ಅವನಿಗೆ ಬಹುಶಃ 85 ಅಥವಾ 90% ಆಗಿದ್ದಾರೆ. ಇನ್ನೂ ಹೆಚ್ಚಿನ ಸುಧಾರಣೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಂಟಿಂಗ್ ಹೇಳಿದ್ದಾರೆ.

Exit mobile version