Site icon Vistara News

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

Rinku Singh

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟರ್​ ರಿಂಕು ಸಿಂಗ್ ಮತ್ತೊಂದು ವೈಫಲ್ಯವನ್ನು ಅನುಭವಿಸಿದರು. ಕೆಕೆಆರ್ ವಿರುದ್ಧ ಅಗತ್ಯ ಸಂದರ್ಭದಲ್ಲಿ ಅವರು ವೈಫಲ್ಯ ಕಂಡರು. ಕ್ರಿಕೆಟ್​ ಅಭಿಮಾನಿಗಳು ಅವರ ಆಟಕ್ಕೆ ಬೇಸರ ವ್ಯಕ್ತಪಡಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರು ವಿರಾಟ್​ ಕೊಹ್ಲಿಯಿಂದ ಬ್ಯಾಟ್ ಗಿಫ್ಟ್ ಪಡೆದುಕೊಂಡ ನಂತರ ಚೆನ್ನಾಗಿ ಆಡುತ್ತಿಲ್ಲ ಎಂದ ಹೇಳಿದ್ದಾರೆ.

2024ರ ಟಿ20 ವಿಶ್ವಕಪ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದ ರಿಂಕು ಸಿಂಗ್ 2024ರ ಐಪಿಎಲ್​​ನಲ್ಲಿ ಇನ್ನೂ ಉತ್ತಮ ಪ್ರದರ್ಶ ನೀಡಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ದಾಳಿಗೆ ಸಿಕ್ಕಿ ಅವರು ಮತ್ತೊಮ್ಮೆ ಕಡಿಮೆ ಸ್ಕೋರ್​ಗೆ ಪೆವಿಲಿಯನ್​ಗೆ ಮರಳಿದರು.

ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ನಾಲ್ಕು ವಿಕೆಟ್​​ಗಳನ್ನು ಕಳೆದುಕೊಂಡ ನಂತರ, ರಿಂಕು ಸಿಂಗ್ ಆಡಲು ಬಂದರು. ವಿಶ್ವ ಕಪ್​ನಲ್ಲಿ ಚಾನ್ಸ್ ಸಿಗದ ಕೋಪಕ್ಕೆ ಚಚ್ಚುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅವರು ಆರಂಭದಲ್ಲಿ ಉತ್ತಮವಾಗಿಯೇ ಇದ್ದರು.

ರಿಂಕು ಸಿಂಗ್ ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿ ಎರಡು ಬೌಂಡರಿಗಳನ್ನು ಗಳಿಸಿದರು. ಇನಿಂಗ್ಸ್​​ನ 7ನೇ ಓವರ್ ನ ಮೊದಲ ಎಸೆತದಲ್ಲಿ ಪಿಯೂಷ್ ಚಾವ್ಲಾ ಮ್ಯಾಜಿಕ್ ಮಾಡಿದರು. ರಿಂಕು ಸಿಂಗ್ ಮಿಡ್​ ವಿಕೆಟ್ ಕಡೆ ಬಾರಿಸಲು ಮುಂದಾಗಿ ಕ್ಯಾಚ್ ನೀಡಿದರು.

ಇದನ್ನೂ ಓದಿ: T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

ರಿಂಕು ಸಿಂಗ್ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಅವರು 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟಿಂಗ್ ಮಾಡಿದರು ಮತ್ತು ಅವರ ವಿಕೆಟ್​ನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ 57/5 ಕ್ಕೆ ಕುಸಿಯಿತು. ಈ ಋತುವಿನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 18ರ ಸರಾಸರಿಯಲ್ಲಿ ಕೇವಲ 132 ರನ್ ಗಳಿಸಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್​ ರಿಂಕು ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮತ್ತೊಂದು ವೈಫಲ್ಯ ಅನುಭವಿಸುತ್ತಿದ್ದಂತೆ, ಎಕ್ಸ್​ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

Exit mobile version