Site icon Vistara News

Rishab Shetty : ಭಾರತವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಿಷಭ್‌ ಶೆಟ್ಟಿ

Rishab Shetty

ಬೆಂಗಳೂರು : ಬ್ಲಾಕ್‌ಬಸ್ಟರ್‌ ಸಿನಿಮಾ ‘ಕಾಂತಾರಾ’ದ ಮೂಲಕ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದ ನಟ ರಿಷಬ್ ಶೆಟ್ಟಿ (Rishab Shetty) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾಂತಾರಾ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ನಂತರ ಅವರೀಗ ಪ್ರಮೋದ್ ಶೆಟ್ಟಿ ಅಭಿನಯದ ‘ಲಾಫಿಂಗ್ ಬುದ್ಧ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ ಅವರು ‘ಮೆಟ್ರೋಸಾಗಾ’ ಯೂಟ್ಯೂಬ್ ಚಾನೆಲ್ ಜತೆ ಮಾತನಾಡುವ ವೇಳೆ ಭಾರತ ವಿರೋಧಿ ಕತೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಮಂದಿಯನ್ನು ಟೀಕಿಸಿದ್ದಾರೆ. ವಿಶೇಷವಾಗಿ ಅವರು ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯನ್ನು ಗುರಿಯಾಗಿಸಿದ್ದಾರೆ.

ರಿಷಬ್ ಶೆಟ್ಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತ ಸಮಸ್ಯೆಗಳನ್ನು ದೃಶ್ಯೀಕರಿಸುವುದಕ್ಕೆ ಬಾಲಿವುಡ್ ಅನ್ನು ಟೀಕಿಸಿದರು. ಬಾಲಿವುಡ್ ಸಿನಿಮಾ ಮಂದಿ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ನಕಾರಾತ್ಮಕವಾಗಿ ಚಿತ್ರಿಸುತ್ತಾರೆ ಎಂದು ತಮ್ಮ ಹತಾಶೆ ವ್ಯಕ್ತಪಡಿಸಿದರು. “ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸುತ್ತವೆ. ಅಂಥ ಚಲನಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು ಅವುಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗುತ್ತದೆ. ನಮ್ಮ ದೇಶ, ನಮ್ಮ ಭಾಷೆ ನಮ್ಮ ಹೆಮ್ಮೆಯಾಗಿರುತ್ತದೆ. ಇದನ್ನು ಜಾಗತಿಕವಾಗಿ ಸಕಾರಾತ್ಮಕ ತೋರಿಸಬೇಕು. ನಾಣು ಅದನ್ನೇ ನಾನು ಮಾಡಲು ಪ್ರಯತ್ನಿಸುತ್ತೇನೆ. ಎಂದು ರಿಷಭ್ ವಿಡಿಯೊದಲ್ಲಿ ಹೇಳುತ್ತಾರೆ.

ರಿಷಬ್ ಶೆಟ್ಟಿ ಈಗ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾದ ಕಾಂತಾರ- 2ರಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಅಧಿಕೃತವಾಗಿ ಕಾಂತಾರಾ: ಚಾಪ್ಟರ್ 1 ಎಂದು ಹೆಸರಿಸಲಾಗಿದೆ. ಬಹು ನಿರೀಕ್ಷಿತ ಚಿತ್ರವು 2025 ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ. ಚಿತ್ರದ ನಾಲ್ಕನೇ ಹಂತದ ಶೂಟಿಂಗ್ ವೇಳಾಪಟ್ಟಿ ಆಗಸ್ಟ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದೆ.

ಕಾಂತಾರಾ: ಚಾಪ್ಟರ್‌ 1 ಮೂಲ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಚುರ್ಲಿ ದೇವತೆಯ ಕಥೆಯನ್ನು ಇದು ಹೊಂದದೆ. ರಿಷಭ್ ಶೆಟ್ಟಿ ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಇಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಕರಾಗಿ ಮುಂದುವರಿದಿದ್ದಾರೆ.

ಇದನ್ನೂ ಓದಿ:Kannada New Movie: ಅವಿನಾಶ್ ವಿಜಯಕುಮಾರ್ ನಿರ್ದೇಶನದ “ಮೈ ಹೀರೋ” ಚಿತ್ರ ಆ.30ಕ್ಕೆ ರಿಲೀಸ್‌

ರಾಷ್ಟ್ರ ಪ್ರಶಸ್ತಿ ವಿಜೇತ ರಿಷಭ್‌ ಇತ್ತೀಚೆಗೆ, ಒಟಿಟಿ ವೇದಿಕಗಳಲ್ಲಿ ಕನ್ನಡ ಸಿನಿಮಾಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ಕನ್ನಡ ಚಲನಚಿತ್ರಗಳು ಸೂಕ್ತ ಮಾನ್ಯತೆ ಪಡೆಯಲು ಹೆಣಗಾಡುತ್ತವೆ. ನೇರವಾಗಿ ಯೂಟ್ಯೂಬ್ ಅಥವಾ ಚಲನಚಿತ್ರೋತ್ಸವಗಳ ಮೂಲಕ ಬಿಡುಗಡೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್‌ದರು. ಸವಾಲುಗಳ ನಡುವೆಯೂ ಕನ್ನಡ ಚಿತ್ರರಂಗವನ್ನು ರಾಷ್ಟ್ರದ ಗಮನ ಸೆಳೆದ ಕಾಂತಾರ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದಕ್ಕೆ ಅವರು ಸಂಭ್ರಮ ವ್ಯಕ್ತಪಡಿಸಿದ್ದರು.

Exit mobile version