Site icon Vistara News

Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

Rishabh Pant

ಬೆಂಗಳೂರು: ಭಾರತದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್​​ ರಿಷಭ್ ಪಂತ್ (Rishabh Pant) ಟಿ 20 ವಿಶ್ವಕಪ್ ಇತಿಹಾಸದಲ್ಲಿ ವಿಕೆಟ್ ಕೀಪಿಂಗ್ ವಿಷಯದಲ್ಲಿ ದೊಡ್ಡ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಿ 20 ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಬ್ಯಾಟರ್​ಗಳನ್ನು ಔಟ್ ಮಾಡಿದ ಕೀಪರ್ ಎನಿಸಿಕೊಂಡಿದ್ದಾರೆ. ಈ ಸಾಧನೆಯ ಹಾದಿಯಲ್ಲಿ ಅವರು ಆಸ್ಟ್ರೇಲಿಯಾದ ಆ್ಯಡಮ್​ ಗಿಲ್​ಕ್ರಿಸ್ಟ್​​ ಮತ್ತು ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ. 2024ರ ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್​ 8 ಹಂತದ ಪಂದ್ಯದಲ್ಲಿ ರಿಷಭ್ ಪಂತ್ ಈ ಸಾಧನೆ ಮಾಡಿದ್ದಾರೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ಗುರುವಾರ (ಜೂನ್ 20) ತಂಡಗಳ ನಡುವಿನ ಹಣಾಹಣಿಯ ವೇಳೆ ಅವರು ಈ ಸಾಧನೆ ಮಾಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಮೂರು ಕ್ಯಾಚ್​​ಗಳನ್ನು ಪಡೆದುಕೊಂಡಿದ್ದಾರೆ. ರಹಮಾನುಲ್ಲಾ ಗುರ್ಬಾಜ್, ಗುಲ್ಬಾದಿನ್ ನೈಬ್ ಮತ್ತು ನವೀನ್-ಉಲ್-ಹಕ್ ಅವರನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಅವರ ಪಾತ್ರವಿದೆ. ಅದರೊಂದಿಗೆ ಅವರು ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್​​ನಲ್ಲಿ 10 ಕ್ಯಾಚ್​ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡುವಾಗ ಆಡಮ್ ಗಿಲ್​ಕ್ರಿಸ್ಟ್​ ಮತ್ತು ಕುಮಾರ ಸಂಗಕ್ಕಾರ ಅವರ 9 ಕ್ಯಾಚ್​ಗಳ ದಾಖಲೆಯನ್ನು ಮೀರಿಸಿದ್ದಾರೆ.

2024ರ ಟಿ20 ವಿಶ್ವಕಪ್​​ನಲ್ಲಿ ರಿಷಭ್ ಪಂತ್ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ. ಪಂದ್ಯಾವಳಿಯಲ್ಲಿ ಭಾರತದ ಯಶಸ್ಸಿನ ಪ್ರಮುಖ ಕಾರಣಗಳಲ್ಲಿ ಕೀಪರ್-ಬ್ಯಾಟ್ಸ್ಮನ್ ಪಂತ್​ ಕೂಡ ಒಬ್ಬರು. ಅವರು ಸ್ಟಂಪ್​ಗಳ ಹಿಂದೆ ಉತ್ತಮ ಫಿಟ್ನೆಸ್ ತೋರಿಸಿದ್ದಾರೆ. ಚೆಂಡು ತಮ್ಮನ್ನು ದಾಟಿ ಹೋಗಲು ಅವರು ಬಿಡುತ್ತಿಲ್ಲ.

2024ರ ಟಿ20 ವಿಶ್ವಕಪ್ ರಿಷಭ್ ಪಂತ್ ಪಾಲ್ಗೊಳ್ಳುತ್ತಿರುವ ಮೂರನೇ ವಿಶ್ವಕಪ್ ಆಗಿದೆ. ಕೀಪರ್-ಬ್ಯಾಟ್ಸ್ಮನ್ ಪಂದ್ಯಾವಳಿಯ 2021 ಆವೃತ್ತಿಯಲ್ಲಿ ಉತ್ತಮ ಕೊಡುಗೆಗಳನ್ನು ನೀಡಿದ್ದರು. 2022 ರಲ್ಲಿ, ದಿನೇಶ್ ಕಾರ್ತಿಕ್ ಅವರಿಗಿಂತ ಆದ್ಯತೆ ನೀಡಿದ್ದರಿಂದ ಅವರಿಗೆ ಆಡಲು ಕೇವಲ ಒಂದು ಪಂದ್ಯ ಸಿಕ್ಕಿತು. ಅಲ್ಲಿ ಅವರು ಸೆಮಿಫೈನಲ್ ಪಂದ್ಯ ಮಾತ್ರ ಆಡಿದ್ದರು.

2024ರ ಟಿ20 ವಿಶ್ವಕಪ್​ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್​​ನಲ್ಲಿ ಮಿಂಚುತ್ತಿದ್ದಾರೆ. ಕೀಪರ್-ಬ್ಯಾಟರ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ನಾಲ್ಕು ಇನ್ನಿಂಗ್ಸ್​ಗಳ ಮೂಲಕ 116 ರನ್ ಬಾರಿಸಿದ್ದಾರೆ. ಭಾರತದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. 38.66 ರ ಪ್ರಭಾವಶಾಲಿ ಸರಾಸರಿ ಮತ್ತು 131.81 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇದನ್ನೂ ಓದಿ: Mohammed Shami : ವಿಶ್ವ ಕಪ್​ ಮಧ್ಯದಲ್ಲಿಯೇ ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಸೇರ್ಪಡೆ?

ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ್ದ ರಿಷಭ್ ಪಂತ್, ನಂತರ ಪಾಕಿಸ್ತಾನ ವಿರುದ್ಧ 21 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 20 ರನ್ ಗಳಿಸಿದ್ದರು.

ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲಿಸಿದ ಭಾರತ

2024ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಭರ್ಜರಿ ಚಾಲನೆ ನೀಡಿದೆ. ಅಫ್ಘಾನಿಸ್ತಾನವನ್ನು 47 ರನ್ ಗಳಿಂದ ಸೋಲಿಸಿತು. ಮೊದಲು ಬ್ಯಾಟ್​ ಮಾಡಿದ ಭಾರತ 181 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 53 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಹಾರ್ದಿಕ್ ಪಾಂಡ್ಯ (32) ಮತ್ತು ರಿಷಭ್ ಪಂತ್ ಕೂಡ ಪ್ರಮುಖ ಪಾತ್ರ ವಹಿಸಿದರು.

ಭಾರತ ಬೌಲಿಂಗ್​ನಲ್ಲಿ ಮಿಂಚಿತು. ಅಫ್ಘಾನಿಸ್ತಾನದ ಬ್ಯಾಟರ್​ಗಳು ನಿಯಮಿತವಾಗಿ ವಿಕೆಟ್​​ಗಳನ್ನು ಕಳೆದುಕೊಂಡರು. ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 134 ರನ್​ಗಳಿಗೆ ಕಟ್ಟಿಹಾಕಿದ ಭಾರತ 47 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. ಭಾರತದ ಪರ ಅರ್ಶ್​​ದೀಪ್​ ಸಿಂಗ್​ ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.

Exit mobile version