Site icon Vistara News

Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

Riyan Parag

ಬೆಂಗಳೂರು: ಜಿಂಬಾಬ್ವೆ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ರಿಯಾನ್ ಪರಾಗ್ (Riyan Parag) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಐಪಿಎಲ್ 2024 ರಲ್ಲಿ ಬ್ಯಾಟ್​​ನೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದ ನಂತರ ಪರಾಗ್ ಅವರ ಚೊಚ್ಚಲ ಪಂದ್ಯವು ಹೆಚ್ಚು ನಿರೀಕ್ಷೆಯಲ್ಲಿತ್ತು. ಯಾಕೆಂದರೆ ಪರಾಗ್ ಐಪಿಎಲ್​ ​ ಟೂರ್ನಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. ಆದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 112 ರನ್ ಗಳ ಸಾಧಾರಣ ರನ್ ಚೇಸ್ ನಲ್ಲಿ ಪರಾಗ್ ಕೇವಲ 2 ರನ್ ಗಳಿಗೆ ಔಟಾದರು. ಆದರೆ ಕಳಪೆ ಪ್ರದರ್ಶನದ ಹೊರತಾಗಿಯೂ ಅವರು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ತಮ್ಮ ರಾಜ್ಯ ಅಸ್ಸಾಂನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶನಿವಾರ (ಜುಲೈ 6) ರಿಯಾನ್ ಪರಾಗ್ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಸ್ಸಾಂ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ ಆಡುವುದಷ್ಟೇ ಅಲ್ಲ, ಪರಾಗ್ ಅವರು ಭಾರತೀಯ ತಂಡದಲ್ಲಿ ಸ್ಥಾನ ಪಡೆದ ಅಸ್ಸಾಂನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ರಿಯಾನ್ ಪರಾಗ್ ಅವರಿಗಿಂತ ಮೊದಲು ಅಸ್ಸಾಂನ ಮಹಿಳಾ ಕ್ರಿಕೆಟರ್ ಉಮಾ ಚೆಟ್ರಿ ಕಳೆದ ವರ್ಷ ಎಸಿಸಿ ಅಂಡರ್ -23 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಚೆಟ್ರಿ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ 20 ಐ ಸರಣಿಗಾಗಿ ಭಾರತದ ಮಹಿಳಾ ತಂಡದಲ್ಲಿದ್ದಾರೆ.

ಇದನ್ನೂ ಓದಿ: Ravi Bishnoi : ಭಾರತ ಪರ ಸ್ಪಿನ್​ ಬೌಲಿಂಗ್​​ನಲ್ಲಿ ವಿಶೇಷ ಸಾಧನೆ ಮಾಡಿದ ರವಿ ಬಿಷ್ಣೋಯ್​​

ರಿಯಾನ್ ಪರಾಗ್ ಜಿಂಬಾಬ್ವೆಯ ವೇಗದ ಬೌಲರ್ ತೆಂಡೈ ಚಟಾರಾ ಎಸೆತಕ್ಕೆ ಡ್ರೈವ್ ಮಾಡಲು ಪ್ರಯತ್ನಿಸಿದ್ದರು. ಆದರೆ ಅವರು ಕ್ಯಾಚ್​ ಆಗಿ ಔಟಾದರು. ಇದೇ ಮೈದಾನದಲ್ಲಿ ಭಾನುವಾರ (ಜುಲೈ 7) ನಡೆಯಲಿರುವ ಎರಡನೇ ಟಿ 20 ಪಂದ್ಯದಲ್ಲಿ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಅಭಿನಂದನೆ

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಕೂಡ ರಿಯಾನ್ ಪದಾರ್ಪಣೆ ಸಂದರ್ಭದ ಬಗ್ಗೆ ಗಮನ ಸೆಳೆದಿದ್ದಾರೆ. ಇದು ರಾಜ್ಯಕ್ಕೆ ಐತಿಹಾಸಿಕ ದಿನ ಎಂದು ಬಣ್ಣಿಸಿದರು. “ಅಸ್ಸಾಂಗೆ ಐತಿಹಾಸಿಕ ದಿನ! ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಮೊದಲ ಟಿ 20 ಪಂದ್ಯವನ್ನು ಆಡುವ ಮೂಲಕ ನಮ್ಮ ರಿಯಾನ್ ಪರಾಗ್​ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಭಾರತದ ಪರ ಆಡಿದ ಮೊದಲ ಅಸ್ಸಾಮಿ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ” ಎಂದು ಸೋನೊವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕೂಡ ಐತಿಹಾಸಿಕ ಸಾಧನೆಗಾಗಿ ರಿಯಾನ್ ಪರಾಗ್ ಅವರನ್ನು ಅಭಿನಂದಿಸಿದೆ.

ರಿಯಾನ್ ಪರಾಗ್ ಜೊತೆಗೆ ಅಭಿಷೇಕ್ ಶರ್ಮಾ ಕೂಡ ಇದೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಭಾರತದ ಇನ್ನಿಂಗ್ಸ್​​ನ ಮೊದಲ ಓವರ್​​ನಲ್ಲಿ ಎಡಗೈ ಬ್ಯಾಟ್ಸ್ಮನ್ ಶೂನ್ಯಕ್ಕೆ ಔಟಾದರು. ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಇಬ್ಬರೂ ಈ ವರ್ಷದ ಐಪಿಎಲ್ ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಐಪಿಎಲ್ 2024 ರಲ್ಲಿ ಪರಾಗ್ 14 ಇನ್ನಿಂಗ್ಸ್​​ನಲ್ಲಿ 52.09 ಸರಾಸರಿ ಮತ್ತು 149.21 ಸ್ಟ್ರೈಕ್ ರೇಟ್ನಲ್ಲಿ 573 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ಅದ್ಭುತ ಮೂಲಕ ಐಪಿಎಲ್ ಫಾರ್ಮ್ 16 ಇನ್ನಿಂಗ್ಸ್​ಗಳಲ್ಲಿ 32.26 ಸರಾಸರಿಯಲ್ಲಿ 484 ರನ್ ಗಳಿಸಿದ್ದರು.

Exit mobile version