Site icon Vistara News

Sarfaraz Khan : ಸರ್ಫರಾಜ್​ ರನ್​ಔಟ್ ಮಾಡಿದ ಜಡೇಜಾ ವಿರುದ್ಧ ಸಿಟ್ಟಿಗೆದ್ದ ರೋಹಿತ್​; ವಿಡಿಯೊ ಇಲ್ಲಿದೆ

Rohit Sharma

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ (Sarfaraz Khan) ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಸರ್ಫರಾಜ್ ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ ಮತ್ತು ರವೀಂದ್ರ ಜಡೇಜಾ ಅವರ ತಪ್ಪಿನಿಂದಾಗಿ ಅವರು ರನ್ ಔಟ್ ಆಗಿದ್ದಾರೆ. ರವೀಂದ್ರ ಜಡೇಜಾ ರನ್​ಗಾಗಿ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿ ಬಳಿಕ ನಿರಾಕರಿಸಿದರು. ಆದಾಗ್ಯೂ, ಸರ್ಫರಾಜ್ ಪಿಚ್​ನಿಂದ ಅರ್ಧದಷ್ಟು ಮುಂದಿದ್ದರು. ಹೀಗಾಗಿ ರನ್​ಔಟ್​ಗೆ ಬಲಿಯಾಗಬೇಕಾಯಿತು.

ಅದಕ್ಕಿಂತ ಮೊದಲು ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಈ ಮೂಲಕ ಭಾರತ ತಂಡ ಉತ್ತಮ ರನ್​ಗಳಿಕೆಯತ್ತ ಸಾಗಿತ್ತು. ಹೀಗಾಗಿ ಭಾರತ ತಂಡದ ನಾಯಕ ಸರ್ಫರಾಜ್ ಔಟಾಗುತ್ತಿದ್ದಂತೆ ಸಿಟ್ಟಿಗೆದ್ದರು. ಡ್ರೆಸಿಂಗ್​ ರೂಮ್​ನಲ್ಲಿ ಕುಳಿತಿದ್ದ ಅವರು ಎದ್ದು ನಿಂತು ತಲೆ ಮೇಲಿಂದ ಕ್ಯಾಪ್ ತೆಗೆದು ನೆಲಕ್ಕೆ ಎಸೆಯುವ ಮೂಲಕ ತಮ್ಮ ಹತಾಶೆಯನ್ನು ಪ್ರದರ್ಶಿಸಿದರು.

ರೋಹಿತ್ ಕೋಪಗೊಂಡ ವಿಡಿಯೊ ಇಲ್ಲಿದೆ

ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್​​ನಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅವರು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿಯೇ ಮಿಂಚಿದರು. ಬೌಂಡರಿ ಮತ್ತು ಸಿಕ್ಸರ್​ಗಳನ್ನು ಬಾರಿಸಿದರು. ಇದು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ವೇಗದ ಅರ್ಧಶತಕವಾಗಿದೆ. 48 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 86 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ರವೀಂದ್ರ ಜಡೇಜಾ 110 ಹಾಗೂ ಕುಲದೀಪ್ ಯಾದವ್ 1 ರನ್ ಗಳಿಸಿ ಔಟಾಗದೆ ಉಳಿದರು.

33 ರನ್ ಗಳಿಗೆ ಮೊದಲ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದರಿಂದ ಆತಿಥೇಯರಿಗೆ ಮೊದಲ ದಿನದ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಟೆಸ್ಟ್ ಪಂದ್ಯದಲ್ಲಿ 209 ಮತ್ತು 104 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ 10 ಮತ್ತು 0 ರನ್​ಗಳಿಗೆ ಅಗ್ಗವಾಗಿ ಔಟಾದರು. ರಜತ್ ಪಾಟಿದಾರ್ ವಿಫಲರಾದರು.

ನಾಯಕ ರೋಹಿತ್ ಶರ್ಮಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ನಾಲ್ಕನೇ ವಿಕೆಟ್ ಗೆ 329 ಎಸೆತಗಳಲ್ಲಿ 204 ರನ್ ಸೇರಿಸಿದರು. ರೋಹಿತ್ 196 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್​ಗಳೊಂದಿಗೆ 131 ರನ್ ಗಳಿಸಿದರು. ಅವರ ಟೆಸ್ಟ್ ವೃತ್ತಿಜೀವನದ 12 ನೇ ಶತಕ ಬಾರಿಸಿದರು. ಮತ್ತೊಂದೆಡೆ, ಜಡೇಜಾ ಮೂರು ಅಂಕಿಯ ಗಡಿಯನ್ನು ತಲುಪಿ ತಮ್ಮ ಟೆಸ್ಟ್ ವೃತ್ತಿಜೀವನದ 4 ನೇ ಶತಕವನ್ನು ಬಾರಿಸಿದರು. ರಾಜ್ಕೋಟ್​​​ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಜಡೇಜಾ ಬಾರಿಸಿದ ಎರಡನೇ ಶತಕ ಇದಾಗಿದೆ.

ರವೀಂದ್ರ ಜಡೇಜಾ ಐದನೇ ವಿಕೆಟ್​ಗೆ 110 ಎಸೆತಗಳಲ್ಲಿ 77 ರನ್ ಸೇರಿಸಿ ತಂಡಕ್ಕೆ ಹೆಚ್ಚು ಅಗತ್ಯವಾದ ನೆರವು ನೀಡಿದರು. ಭಾರತ ಈಗ 2 ನೇ ದಿನದಂದು ತಮ್ಮ ಸ್ಕೋರ್​ಗೆ ಇನ್ನಷ್ಟು ಸೇರಿಸುವ ಉದ್ದೇಶ ಹೊಂದಿದೆ.

ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಮುಖೇಶ್ ಕುಮಾರ್ ಮತ್ತು ಅಕ್ಷರ್ ಪಟೇಲ್ ಬದಲಿಗೆ ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ದೇಶೀಯ ಕ್ರಿಕೆಟ್ ಪ್ರದರ್ಶನಕ್ಕಾಗಿ ಬಹುಮಾನವಾಗಿ ಸರ್ಫರಾಜ್ ಮತ್ತು ಜುರೆಲ್ ಅವರಿಗೆ ಟೆಸ್ಟ್ ಚೊಚ್ಚಲ ಪಂದ್ಯಗಳನ್ನು ನೀಡಲಾಯಿತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅನನುಭವಿ ಭಾರತೀಯ ಮಧ್ಯಮ ಕ್ರಮಾಂಕವು ಅತ್ಯುತ್ತಮವಾಗಿ ಆಡುತ್ತಿಲ್ಲ. ಭಾರತ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯು ಆತಿಥೇಯರಿಗೆ ಅಡೆ ತಡೆ ಉಂಟು ಮಾಡಿತ್ತು.

Exit mobile version