Site icon Vistara News

Rohit Sharma : ಇಶಾನ್​ ಕಿಶನ್ ಜತೆ ಮಗುವಿನಂತೆ ಕ್ರಿಕೆಟ್​ ಆಡಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

Rohit Sharma

ಬೆಂಗಳೂರು: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals ) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಬಹುನಿರೀಕ್ಷಿತ ಐಪಿಎಲ್​ 2024ರ (IPL 2024) ಮುಖಾಮುಖಿಗೆ ಸಿದ್ಧತೆ ನಡೆಸುವ ವೇಳೆ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ನೆಟ್ಟಿಗರ ಗಮನ ಸೆಳೆದಿದೆ. ಅವರ ಇಶಾನ್ ಕಿಶನ್​ಗೆ ವಿಕೆಟ್​ಕೀಪಿಂಗ್​ ಅಭ್ಯಾಸ ಮಾಡಲು ಮಕ್ಕಳಂತೆ ಬ್ಯಾಟ್ ಹಿಡಿದು ಬೀಸಿದ ಪ್ರಸಂಗ ನಡೆಯಿತು. ಏಪ್ರಿಲ್ 22 ರ ಸೋಮವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಗೆ ಮುಂಚಿತವಾಗಿ ಇವರಿಬ್ಬರು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಅದು ಸಣ್ಣ ಮಕ್ಕಳು ಆಡುವಂತೆ ಕಂಡು ಬಂತು.

ಮುಂಬೈ ಇಂಡಿಯನ್ಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ಕೌಶಲವನ್ನು ಹೆಚ್ಚಿಸಲು ಬ್ಯಾಟ್​ನಿಂದ ಸಣ್ಣ ಸಣ್ಣ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನು ಇಶಾನ್​ ಹಿಡಿಯುತ್ತಿದ್ದರು. ಈ ಅಭ್ಯಾಸದಿಂದ ಇಬ್ಬರಿಗೂ ಸಾಕಷ್ಟು ಲಾಭವಾಗುತ್ತದೆ.

ಇಶಾನ್ ರೋಹಿತ್ ಕಡೆಗೆ ಚೆಂಡುಗಳನ್ನು ಎಸೆದಾಗ ಇಬ್ಬರು ಆಟಗಾರರ ನಡುವಿನ ಸ್ನೇಹವು ಸ್ಪಷ್ಟವಾಯಿತು. ರೋಹಿತ್ ಶರ್ಮಾ ಕಿಶನ್​​ಗೆ ಕಡಿಮೆ ಅಂತರ ಕ್ಯಾಚ್​ಗಳನ್ನು ನೀಡುವಲ್ಲಿ ಅತಿ ಹೆಚ್ಚು ಉತ್ಸಾ ಹ ತೋರಿದ್ದರು. ಹಿರಿಯ ಆಟಗಾರರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ನಿದರ್ಶನಗಳು ಮುಂಬೈ ಇಂಡಿಯನ್ಸ್ ನಂಥ ತಂಡಗಳಲ್ಲಿ ಮಾತ್ರ ಕಾಣಿಸುತ್ತದೆ. ಉಳಿದಂತೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿ ಇಂಥದ್ದಕ್ಕೆಲ್ಲ ನೆರವಾಗುತ್ತಾರೆ.

ಇದನ್ನೂ ಓದಿ: IPL 2024 : ಡೆಲ್ಲಿ ತಂಡಕ್ಕೆ ಆಘಾತ; ಸ್ಫೋಟಕ ಬ್ಯಾಟರ್​ ಟೂರ್ನಿಯಿಂದ ಔಟ್​

ರೋಹಿತ್ ಶರ್ಮಾ ಅವರ ಮಾರ್ಗದರ್ಶನವು ಇಶಾನ್ ಕಿಶನ್ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಕ್ರಿಕೆಟ್ ಮೈದಾನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಟೀಮ್ ವರ್ಕ್ ಹೆಚ್ಚು ಅವಶ್ಯಕ ಎಂಬುದನ್ನು ಸಾಬೀತುಪಡಿಸಿದೆ.

Virat Kohli : ಯುವ ಆಟಗಾರರಿಗೆ ಕ್ರಿಕೆಟ್​ ಪಾಠ ಕಲಿಸಿದ ವಿರಾಟ್ ಕೊಹ್ಲಿ

ಬೆಂಗಳೂರು: ಐಪಿಎಲ್​ 2024ರ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​​ ವಿರುದ್ಧ ಆರ್​ಸಿಬಿ (RCB) ಸೋತ ಬಳಿಕ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ (Virat Kohli) ಕೆಕೆಆರ್​ ಯುವ ಆಟಗಾರರಿಗೆ ಕ್ರಿಕೆಟ್​ ಪಾಠ ಹೇಳಿದ ಕ್ಷಣ ವೈರಲ್ ಆಗಿದೆ. ಏಪ್ರಿಲ್ 21ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವಿವಾದಾತ್ಮಕವಾಗಿ ಔಟಾದರು. ಆದಾಗ್ಯೂ ಕೊಹ್ಲಿ ಯುವ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳುವಲ್ಲಿ ಹಿಂಜರಿದಿಲ್ಲ.

ಪಂದ್ಯಾವಳಿಯ 36 ನೇ ಪಂದ್ಯದಲ್ಲಿ ತಮ್ಮ ತಂಡದ ಪರವಾಗಿ ಇನ್ನಿಂಗ್ಸ್ ಪ್ರಾರಂಭಿಸಿದ ಕೊಹ್ಲಿ ಹರ್ಷಿತ್ ರಾಣಾ ಅವರ ಹೆಚ್ಚಿನ ಫುಲ್ ಟಾಸ್ ಎಸೆತಕ್ಕೆ ಕ್ಯಾಚ್​ ನೀದಿ ಔಟಾದರು. ಅದು ನೊಬಾಲ್ ಎಂದು ಕೊಹ್ಲಿ ಮನವಿ ಮಾಡಿದರು. ಆನ್-ಫೀಲ್ಡ್ ಅಂಪೈರ್​ನೊಂದಿಗೆ ಚರ್ಚೆ ನಡೆಸಿದರು. ಟೆಲಿವಿಷನ್ ರಿಪ್ಲೇಗಳು ಮತ್ತು ಹಾಕ್-ಐ ತಂತ್ರಜ್ಞಾನವು ಅಂತಿಮವಾಗಿ ಅದು ಸರಿಯಾದ ಎಸೆತ ಎಂಬುದಾಗಿ ಹೇಳಿತು. ಹೀಗಾಗಿ ಕೊಹ್ಲಿ ಔಟ್​ ಎಂಬುದು ಸಾಬೀತಾಯಿತು.
ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿ ತಂಡ ಕೆಕೆಆರ್ 222 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ಒಂದು ರನ್​ ಹಿಂದಕ್ಕೆ ಬಿತ್ತು. ಈ ಮೂಲಕ ಆರ್​ಸಿಬಿ ಋತುವಿನ 7 ನೇ ಸೋಲಿಗೆ ಮತ್ತು ಸತತ ಆರನೇ ಸೋಲಿಗೆ ಒಳಗಾಯಿತು. ಆದರೆ, ಪಂದ್ಯ ಮುಗಿದ ಬಳಿಕ ಕೊಹ್ಲಿ ತಮ್ಮ ಅನುಭವಗಳನ್ನು ಕಿರಿಯ ಆಟಗಾರರೊಂದಿಗೆ ಹಂಚಿಕೊಳ್ಳುವುದಕ್ಕೆ ಹಿಂಜರಿಯಲಿಲ್ಲ. ಹಲವಾರು ಪ್ರತಿಭಾವಂತ ಆಟಗಾರರಿಗೆಕೆಲವು ಅಮೂಲ್ಯವಾದ ಬ್ಯಾಟಿಂಗ್ ಸಲಹೆಗಳನ್ನು ನೀಡಿದರು.

Exit mobile version