Site icon Vistara News

Rohit Sharma : ಕ್ರಿಸ್​​ ಗೇಲ್​ ದಾಖಲೆ ಮುರಿದ ರೋಹಿತ್​ ಶರ್ಮಾ; ಏನದು ದಾಖಲೆ?

Rohit Sharma

ಬೆಂಗಳೂರು: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್​ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅವರು ಟೆಸ್ಟ್ ಕ್ರಿಕೆಟ್​​ನಲ್ಲಿ 12ನೇ ಶತಕ ಬಾರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರಿಗೆ 48ನೇ ಶತಕವೂ ಹೌದು.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಣಾಹಣಿಯ ಎರಡನೇ ದಿನದ ಆರಂಭಿಕ ಸೆಷನ್​ನಲ್ಲಿ ಇಂಗ್ಲೆಂಡ್ ಬೌಲರ್​ಗಳು ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಬಹುತೇಕ ಮಂಕಾಗಿದ್ದರು. ಅಂತೆಯೇ ಭೋಜನ ವಿರಾಮದ ಮೊದಲು ಇವರಿಬ್ಬರು ತಮ್ಮ ಶತಕಗಳನ್ನು ಗಳಿಸಿದರು.

ಪ್ರವಾಸಿ ತಂಡದ ವಿರುದ್ಧ ಸ್ಪಿನ್ನರ್​ಗಳ ಪ್ರದರ್ಶನದಿಂದ ಕುಸಿತ ಕಂಡಿದ್ದ ಇಂಗ್ಲೆಂಡ್ ವಿರುದ್ಧ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರು. ಮೊದಲ ಸೆಷನ್ ನ ಅಂತ್ಯದ ವೇಳೆಗೆ ಅವರು ತಮ್ಮ ಶತಕ ತಲುಪಿದ್ದರು. ಬಲಗೈ ಬ್ಯಾಟರ್​ ಈ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ರೆಡ್-ಬಾಲ್ ಕ್ರಿಕೆಟ್​ನಲ್ಲಿ ತಮ್ಮ 12 ನೇ ಶತಕವನ್ನು ತಲುಪಿದರು.

ಶುಬ್ಮನ್ ಗಿಲ್ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ರೋಹಿತ್ ಶರ್ಮಾ ಅವರ ಜವಾಬ್ದಾರಿಯುತ ಇನಿಂಗ್ಸ್​​ಗೆ ಪೂರಕವಾಗಿ ಅವರು ಎರಡನೇ ವಿಕೆಟ್​ಗೆ 171 ರನ್​​ಗಳ ಜೊತೆಯಾಟವನ್ನು ನೀಡಿದರು. ರೋಹಿತ್ 162 ಎಸೆತಗಳಲ್ಲಿ 103 ರನ್ ಗಳಿಸಿದರು. ಅವರು ಬೆನ್ ಸ್ಟೋಕ್ಸ್ ಎಸೆತಕ್ಕೆ ಔಟಾದರು.

ಇದನ್ನೂ ಓದಿ : Ind vs Eng : ಗಿಲ್, ರೋಹಿತ್​ ಶತಕ, ಭಾರತಕ್ಕೆ 255 ರನ್​ ಮುನ್ನಡೆ

ಕ್ರಿಸ್​ಗೇಲ್​ ದಾಖಲೆಯೇನು?

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಓಪನಿಂಗ್​ ಬ್ಯಾಟರ್​ಗಳ ರ್ಯಾಂಕಿಂಗ್​ನಲ್ಲಿ ವೆಸ್ಟ್ ಇಂಡೀಸ್​ನ ಮಾಜಿ ಆರಂಭಿಕ ಬ್ಯಾಟರ್​​ ಕ್ರಿಸ್ ಗೇಲ್ ಅವರನ್ನು ರೋಹಿತ್ ಶರ್ಮಾ ಇದೇ ವೇಳೆ ಹಿಂದಿಕ್ಕಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಭಾರತದ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿ ಅವರಿದ್ದಾರೆ.

ಓಪನರ್ ಆಗಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳು

ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿ ರೋಹಿತ್

ಟೆಸ್ಟ್ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರರಲ್ಲಿ ರೋಹಿತ್ ದಂತಕತೆ ಸುನಿಲ್ ಗವಾಸ್ಕರ್ ಅವರ ಸಾಲಿಗೆ ಸೇರಿಕೊಂಡರು. ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಶತಕವನ್ನು ಗಳಿಸುವ ಮೂಲಕ ರೋಹಿತ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.

ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯ ಆರಂಭಿಕರು

2ನೇ ದಿನದ ಆಟ ಮುಗಿಯುವಾಗ ಭಾರತ 120 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿದ್ದು, ಕುಲ್ದೀಪ್ ಯಾದವ್ (27) ಮತ್ತು ಜಸ್ಪ್ರೀತ್ ಬುಮ್ರಾ (19) ಕ್ರೀಸ್​​ನಲ್ಲಿದ್ದಾರೆ. ಧರ್ಮಶಾಲಾದಲ್ಲಿ ಗೆಲುವಿನ ಅವಕಾಶಗಳನ್ನು ಹೆಚ್ಚಿಸಲು ತವರು ತಂಡವು ತಮ್ಮ ಮುನ್ನಡೆಯನ್ನು ಗಮನಾರ್ಹವಾಗಿ ವಿಸ್ತರಿಸುವ ಗುರಿಯನ್ನು ಹೊಂದಿದೆ.

Exit mobile version