ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೇಂಟ್ ಲೂಸಿಯಾದ ಗ್ರೋಸ್ ಐಸ್ಲೆಟ್ನಲ್ಲಿರುವ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಂಡಗಳ ನಡುವಿನ ಪಂದ್ಯಾವಳಿಯ ಸೂಪರ್ 8 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರೋಹಿತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 41 ಎಸೆತಕ್ಕೆ 92 ರನ್ ಬಾರಿಸಿ ಔಟಾದರು. ಈ ಮೂಲಕ ಅವರು ಮೊಟ್ಟ ಮೊದಲ ಟಿ2 ವಿಶ್ವ ಕಪ್ ಶತಕದ ಅವಕಾಶ ನಷ್ಟ ಮಾಡಿಕೊಂಡರು.
ಪಂದ್ಯಾವಳಿಯಲ್ಲಿ ಕಡಿಮೆ ಸ್ಕೋರ್ಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ, ಬ್ಯಾಟ್ ಮೂಲಕ ಅಬ್ಬರಿಸಿ ತಮ್ಮ ಟೀಕಾಕಾರರನ್ನು ಮೌನವಾಗಿಸಿದರು. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭದಿಂದಲೂ ಆಸ್ಟ್ರೇಲಿಯಾದ ಬೌಲರ್ಗಳನ್ನು ಹಿಮ್ಮೆಟ್ಟಿಸಿದರು.
ರೋಹಿತ್ ಶರ್ಮಾ ಮೂರನೇ ಓವರ್ ಎಸೆತ ಮಿಚೆಲ್ ಸ್ಟಾರ್ಕ್ ಅವರನ್ನು ಮೌನವಾಗಿಸಿದರು. ಒಂದೇ ಓವರ್ನಲ್ಲಿ 29 ರನ್ ಬಾರಿಸಿದರು. ಭಾರತದ ನಾಯಕ ಕವರ್ ಏರಿಯಾ ಮೇಲೆ ಬೃಹತ್ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ಕೂಡ ಇದೇ ರೀತಿಯ ಶಾಟ್ ಬಾರಿಸಿದರು. ಎರಡು ಸಿಕ್ಸರ್ಗಳ ನಂತರ ಒಂದು ಎಸೆತ ನಷ್ಟ ಮಾಡಿಕೊಂಡರು.
ರೋಹಿತ್ ಶರ್ಮಾ ಅಲ್ಲಿಗೆ ನಿಲ್ಲಲಿಲ್ಲ . ನಾಲ್ಕನೇ ಎಸೆತಕ್ಕೆ ಮತ್ತೊಂದು ಬೃಹತ್ ಸಿಕ್ಸರ್ ಬಾರಿಸಿದರು. ಅದು 96 ಮೀಟರ್ ಸಿಕ್ಸರ್. ಓವರ್ ನ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ಅವರು ಫುಲ್ ಟಾಸ್ ಎಸೆದರು. ರೋಹಿತ್ ಶರ್ಮಾ ಅವರು ಬೃಹತ್ ಸಿಕ್ಸರ್ ಗಾಗಿ ಥರ್ಡ್ ಮ್ಯಾನ್ ಕಡೆ ಹಾರಿಸಿದರು. ಅಲ್ಲಿಗೆ ಒಂದೇ ಓವರ್ನಲ್ಲಿ 29 ರನ್ ಬಾರಿಸಿದರು.
205 ರನ್ ಬಾರಿಸಿದ ಭಾರತ
ಇಲ್ಲಿನ ಡ್ಯಾರೆನ್ ಸಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಿತು. ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ಭಾರತ ತಂಡ ದೊಡ್ಡ ಮೊತ್ತ ಪೇರಿಸಿದೆ.
ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್ ಬ್ಯಾಟರ್!
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.
ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.