Site icon Vistara News

IPL 2024 : ರೋಹಿತ್ ಪರ ಪೋಸ್ಟರ್​ಗೆ ವಾಂಖೆಡೆಯಲ್ಲಿ ತಡೆ; ಅಭಿಮಾನಿಗಳ ಆಕ್ರೋಶ

Rohit Sharma poster- IPL 2024

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬಯಿ ಇಂಡಿಯನ್ಸ್​ ನಡುವಿನ ಐಪಿಎಲ್​ 2024ರ (IPL 2024 ) ಪಂದ್ಯಕ್ಕೂ ಮುನ್ನ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪರ ಪೋಸ್ಟರ್​ ಹಿಡಿದುಕೊಂಡು ಬಂದ ಅಭಿಮಾನಿಗಳಿಗೆ ಸ್ಟೇಡಿಯಮ್​ ಹೊರಗೆಯೇ ತಡೆಯೊಡ್ಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಮುಂಬಯಿ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಗೊಂಡಿರುವ ನಡುವೆ ಈ ಪ್ರಸಂಗ ನಡೆದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಜೋರು ಚರ್ಚೆ ನಡೆದಿದೆ.

ರೋಹಿತ್ ಅವರನ್ನು ತಂಡದ ನಾಯಕತ್ವದಿಂದ ಕೆಳಕ್ಕೆ ಇಳಿಸಿರುವುದು ಅವರ ಅಭಿಮಾನಿಗಳನ್ನು ಕ್ರೋಧಗೊಳ್ಳುವಂತೆ ಮಾಡಿದೆ. ಅವರೆಲ್ಲರೂ ಪಾಂಡ್ಯ ವಿರುದ್ಧ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಮೈದಾನದಲ್ಲೂ ಅದು ಮುಂದುವರಿದಿದೆ. ಇದಕ್ಕೆ ತಡೆಯೊಡ್ಡಲು ಮುಂದಾಗಿರುವ ಕ್ರಿಕೆಟ್ ಸ್ಟೇಡಿಯಮ್​ ಅಧಿಕಾರಿಗಳು ರೋಹಿತ್​ ಪರ ಪೋಸ್ಟರ್​ಗಳನ್ನು ಒಳಕ್ಕೆ ತೆಗೆದುಕೊಂಡು ಹೋಗಲು ಬಿಟ್ಟಿಲ್ಲ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ ಅವರನ್ನು ನಿಂದನೆ ಮಾಡುವುದು ಕಂಡುಬಂದರೆ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ಯಲಾಗುವುದು ಎಂಬ ವರದಿಗಳು ಬಂದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ, ಅಹಮದಾಬಾದ್ ಮತ್ತು ಹೈದರಾಬಾದ್​​ನ ಕ್ರೀಡಾಂಗಣಗಳಲ್ಲಿ ಅವರಿಗೆ ಅಭಿಮಾನಿಗಳು ಕಿಚಾಯಿಸಿದ್ದರು.

‘ಶೂನ್ಯ’ದಲ್ಲಿ ಸಾಧನೆ ಮಾಡಿದ ರೋಹಿತ್ ಶರ್ಮಾ!

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indian’s ) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅನಗತ್ಯ ಸಾಧನೆ ಮಾಡಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡದ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್ ಅವರೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಸಾಲಿಗೆ ಸೇರಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Rajstan Royals) ನಡುವೆ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಕಳಪೆ ರೆಕಾರ್ಡ್​ ಮಾಡಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 14ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ.

ಇದನ್ನೂ ಓದಿ: R Ashwin : ಐಪಿಎಲ್​ನಲ್ಲಿ ವಿಶೇಷ ಸಾಧನೆ ಮಾಡಿದ ಆರ್​ ಅಶ್ವಿನ್​

ರೋಹಿತ್ ಶರ್ಮಾ ಮುಂಬೈನಲ್ಲಿ ತಮ್ಮ ತವರು ಪ್ರೇಕ್ಷಕರ ಮುಂದೆ ಫಲಪ್ರದ ಪ್ರದರ್ಶನ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಕೇಳಿಕೊಂಡಿತು. ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೌಲ್ಟ್ ತಮ್ಮ ರೋಚಕ ಸ್ವಿಂಗ್ ಬೌಲಿಂಗ್​ಗೆ ಆತಿಥೇಯರ ಬ್ಯಾಟಿಂಗ್ ಲೈನ್ಅಪ್​​ ಕುಸಿಯಿತು.

ಮೊದಲ ಓವರ್​ನಲ್ಲಿಯೇ ಔಟ್​

ಟ್ರೆಂಟ್ ಬೌಲ್ಟ್ ಮೊದಲ ಓವರ್​ನ 5 ನೇ ಎಸೆತದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ಹೊರಗೆ ಹೋಗುತ್ತಿದ್ದ ಚೆಂಡನ್ನು ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಕೆಣಕಿದರು. ಸಂಜು ಸ್ಯಾಮ್ಸನ್​ ಅದ್ಬುತ ಕ್ಯಾಚ್ ಹಿಡಿದು ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ರೋಹಿತ್ ಶರ್ಮಾ ಗೋಲ್ಡರ್​ ಡಕ್ ಸಾಧನೆ ಮಾಡಿದರು. ಟ್ರೆಂಟ್ ಬೌಲ್ಟ್ ಟಿ 20 ಯಲ್ಲಿ ಭಾರತೀಯ ನಾಯಕನನ್ನು ಔಟ್ ಮಾಡಿದ್ದು ಇದು ನಾಲ್ಕನೇ ಬಾರಿ. ಬಲಗೈ ಬ್ಯಾಟ್ಸ್ಮನ್ ಕಿವೀಸ್ ವೇಗದ ಬೌಲರ್ ವಿರುದ್ಧ ಸದಾ ಗೊಂದಲಕ್ಕೆ ಬೀಳುತ್ತಾರೆ. ಅವರ ವಿರುದ್ಧ ಕೇವಲ 18 ಸರಾಸರಿಯಲ್ಲಿ ಕೇವಲ 69 ರನ್ ಗಳಿಸಿದ್ದಾರೆ.

ಇದು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಇ ರೋಹಿತ್ ಶರ್ಮಾ ಅವರ 17 ನೇ ಡಕ್ ಔಟ್​ ಆಗಿದೆ. ಲೀಗ್​ನಲ್ಲಿ ಅತಿ ಹೆಚ್ಚು ಡಕ್​ಔಟ್​ ಪಟ್ಟಿಯಲ್ಲಿ ಭಾರತದ ನಾಯಕ ಅಗ್ರಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೂಡ 17 ಡಕ್​ಗಳನ್ನು ಹೊಂದಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ಪಿಯೂಷ್ ಚಾವ್ಲಾ, ಮನ್ದೀಪ್ ಸಿಂಗ್ ಮತ್ತು ಸುನಿಲ್ ನರೈನ್ 15 ಡಕ್ಔಟ್ ಮೂಲಕ ಈ ಪಟ್ಟಿಯಲ್ಲಿದ್ದಾರೆ.

Exit mobile version