Site icon Vistara News

Rohit Sharma : ಸಿಕ್ಸರ್​ಗಳನ್ನು ಬಾರಿಸುವಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ

Rohit Sharma

ಬೆಂಗಳೂರು: ಭಾರತ ಏಕ ದಿನ ತಂಡದ ನಾಯಕ ರೋಹಿತ್​ ಶರ್ಮಾ ಏಕ ದಿನ ಕ್ರಿಕೆಟ್​​ನಲ್ಲಿ 300 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಹಾಗೂ ಒಟ್ಟಾರೆ ಎರಡನೇ ಆರಂಭಿಕ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಲಂಬೊದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ತಂಡ 32 ರನ್​​ಗಳ ಸೋಲನುಭವಿಸಿದ ಹೊರತಾಗಿಯೂ ರೋಹಿತ್ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. ಆರಂಭಿಕರಾಗಿ ಆಡಲು ಇಳಿದ ರೋಹಿತ್ ಕೇವಲ 44 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಸೊಗಸಾದ ಬೌಂಡರಿಗಳೊಂದಿಗೆ 64 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ 177 ಪಂದ್ಯಗಳಿಂದ 302 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 300 ಸಿಕ್ಸರ್​ಗಳ ಗಡಿ ದಾಟಿದ ಎರಡನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 280 ಪಂದ್ಯಗಳಲ್ಲಿ 328 ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ನಂತರದ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಹಾಲಿ ಕೋಚ್ ಹಾಗೂ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಸನತ್ ಜಯಸೂರ್ಯ 388 ಏಕದಿನ ಪಂದ್ಯಗಳಲ್ಲಿ 263 ಸಿಕ್ಸರ್ ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆರಂಭಿಕನಾಗಿ ರೋಹಿತ್ ಶರ್ಮಾ ಅವರ ವೃತ್ತಿಜೀವನವು ಅಸಾಧಾರಣವಾಗಿದೆ. 177 ಪಂದ್ಯಗಳಿಂದ 8,801 ರನ್ ಗಳಿಸಿರುವ ಅವರು 29 ಶತಕಗಳು ಮತ್ತು 55 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳು ಅಗ್ರ ಕ್ರಮಾಂಕದಲ್ಲಿ ಅವರ ಸ್ಥಿರತೆ ಮತ್ತು ಪ್ರಾಬಲ್ಯ ಎತ್ತಿ ತೋರಿಸುತ್ತವೆ.

ಏಕದಿನ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳ ಪಟ್ಟಿಯಲ್ಲಿ ರೋಹಿತ್ 264 ಪಂದ್ಯಗಳಲ್ಲಿ 330 ಸಿಕ್ಸರ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್​ಗಳೊಂದಿಗೆ ಅಗ್ರಸ್ಥಾನ ಹೊಂದಿದ್ದಾರೆ ಕ್ರಿಸ್ ಗೇಲ್ 301 ಪಂದ್ಯಗಳಲ್ಲಿ 331 ಸಿಕ್ಸರ್​ಗಳೊಂದಿಗೆ ರೋಹಿತ್​ಗಿಂತ ಕೇವಲ ಒಂದು ಸಿಕ್ಸರ್ ಮುಂದಿದ್ದಾರೆ. ಮಹೇಂದ್ರ ಸಿಂಗ್ ಧೋನಿ (297 ಪಂದ್ಯಗಳಲ್ಲಿ 229 ಸಿಕ್ಸರ್) ಮತ್ತು ಸಚಿನ್ ತೆಂಡೂಲ್ಕರ್ (463 ಪಂದ್ಯಗಳಿಂದ 195 ಸಿಕ್ಸರ್) ಅವರನ್ನು ಹಿಂದಿಕ್ಕಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯರ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ.

ಇದನ್ನೂ ಓದಿ: Graham Thorpe : ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ ನಿಧನ

ಟೆಸ್ಟ್, ಏಕದಿನ ಮತ್ತು ಟಿ20ಐನ ಎಲ್ಲಾ ಮೂರು ಸ್ವರೂಪಗಳಲ್ಲಿ ರೋಹಿತ್ ಶರ್ಮಾ 482 ಪಂದ್ಯಗಳಿಂದ 619 ಸಿಕ್ಸರ್​ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ನಂಬಲಾಗದ ದಾಖಲೆಯು ಸುಲಭವಾಗಿ ಬೌಂಡರಿಯನ್ನು ತೆರವುಗೊಳಿಸುವ ಅವರ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ ಮತ್ತು ಆಧುನಿಕ ಆಟದಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟರ್​ಗಳಲ್ಲಿ ಒಬ್ಬರೆಂಬ ಖ್ಯಾತಿ ಹೊಂದಿದ್ದಾರೆ.

Exit mobile version