ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 20 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians ) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಶೈಲಿಯಲ್ಲೇ ಅತ್ಯುತ್ತಮ ಆರಂಭವನ್ನು ನೀಡಿದ್ದರು. ಆರಂಭಿಕ ಬ್ಯಾಟರ್ ಆರು ಬೌಂಡರಿಗಳು ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ 49 (27) ರನ್ ಗಳಿಸಿದ್ದರು. ಮೊದಲ ಆರು ಓವರ್ಗಳಲ್ಲಿ 75 ರನ್ ಗಳಿಸುವ ಮೂಲಕ ಪವರ್ಪ್ಲೇಯಲ್ಲಿ ತಂಡಕ್ಕೆ ನೆರವಾದರು.
A 𝐑𝐨 special at Wankhede. A 𝐑𝐨 special in the dressing room. 🎖️💙#MumbaiMeriJaan #MumbaiIndians #MIvDC | @ImRo45 pic.twitter.com/b555HUvVdE
— Mumbai Indians (@mipaltan) April 8, 2024
ರೊಮಾರಿಯೊ ಶೆಫರ್ಡ್ (10 ಎಸೆತಗಳಲ್ಲಿ 39* ) ಮತ್ತು ಟಿಮ್ ಡೇವಿಡ್ (21 ಎಸೆತಗಳಲ್ಲಿ 45* ) ಅವರ ಅದ್ಭುತ ಆರಂಭದಿಂದಾಗಿ ಮುಂಬೈ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡಿಸಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲು ಕಂಡಿತು. ಮುಂಬೈನ ಮೊದಲ ಗೆಲುವಿನ ನಂತರ, ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಹೊಡೆತ ನೀಡಿದ್ದಕ್ಕಾಗಿ ರೋಹಿತ್ ಶರ್ಮಾ ಅವರಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ವಿಶೇಷ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ: IPL 2024 : ಗೆಲುವಿನ ಅಭಿಯಾನ ಮುಂದುವರಿಸುವುದೇ ಧವನ್ ನೇತೃತ್ವದ ಪಂಜಾಬ್
“ಇದು ಅದ್ಭುತ ಬ್ಯಾಟಿಂಗ್ ಪ್ರದರ್ಶನ ಎಂದು ನಾನು ಭಾವಿಸಿದೆ. ಇದು ನಾವೆಲ್ಲರೂ ಮೊದಲ ಪಂದ್ಯದಿಂದಲೂ ಪ್ರಯತ್ನಿಸುತ್ತಿರುವ ವಿಷಯ. ಇಡೀ ಬ್ಯಾಟಿಂಗ್ ವಿಭಾಘ ಎದ್ದು ನಿಂತು ಆಡಿದೆ. ತಂಡದ ಗೆಲುವಿಗೆ ವೈಯಕ್ತಿಕ ಪ್ರದರ್ಶನಗಳು ಮುಖ್ಯವಲ್ಲ ಎಂದು ನಿಮಗೆ ತಿಳಿದಿದೆ. ನಾವು ಆ ರೀತಿಯ ಮೊತ್ತವನ್ನು ಸಾಧಿಸಬಹುದು. ಇದು ನಾವು ಬಹಳ ಸಮಯದಿಂದ ಮಾತನಾಡುತ್ತಿರುವ ವಿಷಯ. ಇದು ಬ್ಯಾಟಿಂಗ್ ತರಬೇತುದಾರ, ಮಾರ್ಕ್ ಮತ್ತು ನಾಯಕ ಬಯಸುವ ವಿಷಯ ಇದೇ ಆಗಿದೆ. ಆದ್ದರಿಂದ ಈ ಆಟ ನೋಡಲು ಅದ್ಭುತವಾಗಿದೆ ಮತ್ತು ದೀರ್ಘಕಾಲ ಮುಂದುವರಿಯಲಿ” ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ರೋಹಿತ್ ಹೇಳಿದರು.
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ರೋಹಿತ್.
ವಿಶೇಷವೆಂದರೆ, ಆರಂಭಿಕ ಬ್ಯಾಟರ್ ಗುಜರಾತ್ ಟೈಟಾನ್ಸ್ ವಿರುದ್ಧ 43 (29) ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 12 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅವರು ಗೋಲ್ಡನ್ ಡಕ್ಗೆ ಔಟಾಗಿದ್ದರು. 36ರ ಹರೆಯದ ರೋಹಿತ್ ಕಳೆದ ಎರಡು ಋತುಗಳಲ್ಲಿ ಸ್ಮರಣೀಯ ಪ್ರದರ್ಶನ ಕಂಡಿಲ್ಲ, 30 ಪಂದ್ಯಗಳಲ್ಲಿ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.
ಮಾಜಿ ಎಂಐ ನಾಯಕ ಪ್ರಸಕ್ತ ಋತುವಿನಲ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಆರಂಭದಲ್ಲಿ ಸತತ ಮೂರು ಸೋಲಿನ ನಂತರ ತಮ್ಮ ತಂಡಕ್ಕೆ ಗಮನಾರ್ಹ ಪುನರಾಗಮನ ಮಾಡಲು ನೆರವಾಗುತ್ತಿದ್ದಾರೆ. ಬಲಗೈ ಬ್ಯಾಟರ್ ನಾಲ್ಕು ಇನ್ನಿಂಗ್ಸ್ಗಳಿಂದ 29.5 ಸರಾಸರಿ ಮತ್ತು 171.01 ಸ್ಟ್ರೈಕ್ ರೇಟ್ನೊಂದಿಗೆ 118 ರನ್ ಗಳಿಸಿದ್ದಾರೆ.