ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ವಿರುದ್ಧ ಚೆಂಡು ವಿರೂಪ ಮಾಡಿದೆ ಎಂಬ ಆರೋಪಕ್ಕೆ ನಾಯಕ ರೋಹಿತ್ ಶರ್ಮಾ (Rohit Sharma) ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ 2024 ರ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪ್ರಭಾವಶಾಲಿ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ನಾಯಕ ವಿಲಕ್ಷಣ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ರೋಹಿತ್ ಶರ್ಮಾ ನಿಮ್ಮ ಮೆದುಳು ಬಳಸಿ ಎಂದು ಆರೋಪಿಸಿದ್ದಾರೆ.
Inzamam ul haq "Dimag ko kholo Bhikhari"
— Areeba Khan اریبہ خان🇮🇳 (@Areebakhan1325) June 26, 2024
ROHIT SHARMA 🇮🇳🐐
"IND vs ENG"#INDvENG pic.twitter.com/ZM2K1EVCVo
ಪಂದ್ಯಾವಳಿಯಲ್ಲಿ ಭಾರತೀಯ ವೇಗಿಗಳು ನಿರಂತರವಾಗಿ ಚೆಂಡನ್ನು ವಿರೂಪ ಮಾಡುತ್ತಿದ್ದರು ಎಂದು ಇಂಜಮಾಮ್ ಆರೋಪಿಸಿದ್ದರು. ರಿವರ್ಸ್ ಸ್ವಿಂಗ್ ಪಡೆಯಲು ಭಾರತೀಯ ಬೌಲರ್ಗಳು ಪಂದ್ಯದ ಚೆಂಡುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂಜಾಮಾಜ್ ಉಲ್ ಹಕ್ ಹೇಳಿದ್ದರು. ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾರತದ ವೇಗಿಗಳು ಪ್ರಭಾವಶಾಲಿಯಾಗಿದ್ದರು. ಇದು ಚೆಂಡು ವಿರೂಪದಿಂದ ಮಾತ್ರ ಸಾಧ್ಯ ಎಂದು ಇಂಜಮಾಮ್ ಉಲ್ ಹಕ್ ಆರೋಪಿಸಿದ್ದರು.
ಇಂಜಮಾಮ್ ಜತೆಗೆ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಸಲೀಮ್ ಮಲಿಕ್ ಆಸ್ಟ್ರೇಲಿಯಾ ವಿರುದ್ಧ ಅರ್ಶ್ದೀಪ್ ಸಿಂಗ್ 15ನೇ ಓವರ್ನಲ್ಲಿ ರಿವರ್ಸ್ ಸ್ವಿಂಗ್ ಮಾಡಿದ್ದಾರೆ. ಇದು ಚೆಂಡು ವಿರೂಪದಿಂದ ಕಾರಣ ಹೇಳಿದ್ದಾರೆ. ಇಲ್ಲದಿದ್ದರೆ ಪಂದ್ಯದ 14 ಅಥವಾ 15 ನೇ ಓವರ್ನಲ್ಲಿ ರಿವರ್ಸ್ ಸ್ವಿಂಗ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇನ್ನಿಂಗ್ಸ್ನ ಆರಂಭದಲ್ಲಿ ರಿವರ್ಸ್ ಸ್ವಿಂಗ್ ಮಾಡುವುದು ಅಸಾಧ್ಯ ಎಂದು ಹೇಳುವ ಮೊದಲು ಅಂಪೈರ್ಗಳು ಈ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಇಂಜಮಾಮ್ ಹೇಳಿದ್ದರು.
ರೋಹಿತ್ ಶರ್ಮಾ ನೀಡಿದ ಉತ್ತರ ಹೀಗಿದೆ
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೊಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರಿಗೆ ಈ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರವಾಗಿ, ಭಾರತೀಯ ನಾಯಕ ಮೊದಲು ನಕ್ಕರು. ಕೆರಿಬಿಯನ್ ದ್ವೀಪಗಳ ಕ್ರಿಕೆಟ್ ಪಿಚ್ನಲ್ಲಿ ಬೌಲರ್ಗಳು ರಿವರ್ಸ್ ಸ್ವಿಂಗ್ ಪಡೆಯುವುದು ಸಾಧ್ಯ ಎಂದರು. ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡ ಅವರು ತಲೆಯಲ್ಲಿರುವ ಬುದ್ಧಿ ಬಳಸಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Indo- Pak Cricket : ಭಾರತ-ಪಾಕ್ ಪಂದ್ಯದಲ್ಲಿ ಐಸಿಸಿಯೇ ಫಿಕ್ಸಿಂಗ್ ಮಾಡುತ್ತದೆ ಎಂದ ಆರೋಪಿಸಿದ ಇಂಗ್ಲೆಂಡ್ನ ಮಾಜಿ ಆಟಗಾರ
“ನಾನು ಇದಕ್ಕೆ ಏನು ಉತ್ತರ ಕೊಡಲಿ? ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್ ಒಣಗಿದ್ದರೆ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ. ಕೆಲವೊಮ್ಮೆ, ನಿಮ್ಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ. ನಾವು ಎಲ್ಲಿ ಆಡುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಆಡುತ್ತಿಲ್ಲ, “ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಫೈನಲ್ನ ಸ್ಥಾನಕ್ಕಾಗಿ ಭಾರತ ಗುರುವಾರ (ಜೂನ್ 27) ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಕಳೆದ ಟಿ 20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್ಗಳ ಸೋಲು ಅನುಭವಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.