Site icon Vistara News

Rohit Sharma : ಕೊಹ್ಲಿ ಹಾದಿ ತುಳಿದ ರೋಹಿತ್​, ಟಿ20 ಐ ಕ್ರಿಕೆಟ್​​ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ನಾಯಕ

Rohit Sharma

ಬೆಂಗಳೂರು: ಭಾರತ ತಂಡದ ನಾಯಕ ಹಾಗೂ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಅವರು ತಮ್ಮ ಸಹ ಆಟಗಾರ ವಿರಾಟ್ ಕೊಹ್ಲಿಯ ಹಾದಿಯನ್ನೇ ತುಳಿದಿದ್ದಾರೆ. ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ತಮ್ಮ ನಿವೃತ್ತಿಯ ವಿಷಯವನ್ನು ಘೋಷಿಸಿದರೆ ರೋಹಿತ್ ಶರ್ಮಾ ಗೆಲುವಿನ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅದು ನನ್ನ ಕೊನೆಯ ಪಂದ್ಯವೂ ಆಗಿತ್ತು. ಪ್ರಾಮಾಣಿಕವಾಗಿ, ನಾನು ಈ ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಸಿಕ್ಕಾಪಟ್ಟೆ ಖುಷಿಯಲ್ಲಿದ್ದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಈ ಮಾದರಿಯ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಈ ಸ್ವರೂಪದಲ್ಲಿ ಆಡುವ ಮೂಲಕ ನನ್ನ ಭಾರತ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು ಈಗ ಏನು ಮಾಡಿದ್ದೇನೋ ಅದನ್ನೇ ಮಾಡಲು ಬಯಸಿದ್ದೆ. ಕಪ್ ಗೆದ್ದು ವಿದಾಯ ಹೇಳಿದೆ ಎಂದು ಬಾರ್ಬಡೋಸ್​ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ: T20 World Cup 2024 : 13 ವರ್ಷಗಳ ಕಾಯುವಿಕೆ ಅಂತ್ಯ, ಕೊನೆಗೂ ವಿಶ್ವ ಕಪ್​ ಗೆದ್ದ ಭಾರತ

ಟೆಸ್ಟ್ ಮತ್ತು ಏಕದಿನ ಸ್ವರೂಪಗಳಲ್ಲಿ ಭಾರತಕ್ಕಾಗಿ ಮುಂದುವರಿಯುವುದಾಗಿ ರೋಹಿತ್ ಹೇಳಿದರು, ಆದರೆ ಅವರು ಕಡಿಮೆ ಫಾರ್ಮ್ನಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ಮೊದಲ ವಿದಾಯ ಹೇಳಿದ್ದರು

ಬೆಂಗಳೂರು: ಆಧುನಿಕ ಯುಗದ ಅತ್ಯಂತ ಪ್ರಭಾವಿ ಕ್ರಿಕೆಟಿಗ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat Kohli) ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ವಿಶ್ವ ಕಪ್​ನ ಫೈನಲ್​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಬಾರಿಸಿ ಗೆಲುವಿನ ಸೂತ್ರಧಾರ ಎನಿಸಿಕೊಳ್ಳುವ ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅವರು ಈ ಘೋಷಣೆಯನ್ನು ಮಾಡಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಅವರು ಇದು ನನ್ನ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕೊನೇ ಟಿ20 ವಿಶ್ವ ಕಪ್ ಎಂದು ಹೇಳಿದರು. ಈ ಮೂಲಕ ಅವರು ದೀರ್ಘ ಕಾಲದ ಟಿ20 ಅಂತಾರಾಷ್ಟ್ರೀಯ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ವಿರಾಟ್​ ಕೊಹ್ಲಿ ಕೇವಲ ಟಿ20 ಮಾತ್ರ ಎಂದು ಹೇಳಿರುವ ಕಾರಣ ಅವರು ಏಕ ದಿನ ಹಾಗೂ ಟೆಸ್ಟ್​ ಪಂದ್ಯಗಳಲ್ಲಿ ಆಡಲಿದ್ದಾರೆ. ಅದೇ ರೀತಿ ಅವರು ಅತಿ ಹೆಚ್ಚು ಆರಾಧಿಸಲ್ಪಡುವ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ತಮ್ಮ ಸೇವೆ ಮುಂದುವರಿಸಲಿದ್ದಾರೆ.

ಇದು ನನ್ನ ಕೊನೇ ಟಿ20 ಅಂತಾರಾಷ್ಟ್ರಿಯ ಪಂದ್ಯ. ಅದೇ ರೀತಿ ನನ್ನ ಟಿ20 ಅಂತಾರಾಷ್ಟ್ರೀಯ ಪಂದ್ಯ. ಇದು ಎಲ್ಲರಿಗೂ ಗೊತ್ತಿದ್ದ ಗುಟ್ಟಾಗಿತ್ತು. ನಾನು ಈ ಪಂದ್ಯದಲ್ಲಿ ಸೋತು ಟ್ರೋಫಿ ಗೆಲ್ಲದೇ ಹೋಗಿದ್ದರೂ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ ಈ ಗೆದ್ದಿದ್ದೇನೆ . ಈ ಸಂತೋಷಕ್ಕೆ ಪಾರವೇ ಇಲ್ಲ. ಹೊಸ ಪೀಳಿಗೆಯ ಆಟಗಾರರಿಗೆ ನಾನು ಸ್ಥಳಾವಕಾಶ ಮಾಡಿಕೊಡಲೇಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Exit mobile version