ನವದೆಹಲಿ: ಮುಂದಿನ 2-3 ವರ್ಷಗಳ ಕಾಲ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವ ಯೋಜನೆಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬಹಿರಂಗಪಡಿಸಿದ್ದಾರೆ. ನಾಯಕನಾಗಿ ವಿಶ್ವಕಪ್ (World Cup) ಗೆಲ್ಲುವುದು ಇನ್ನೂ ತಮ್ಮ ಏಕೈಕ ಗುರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ವಿಶ್ವ ಕಪ್ ಬಳಿಕ ರೋಹಿತ್ ನಿವೃತ್ತಿ ಪಡೆಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ವರ್ಷ ಜೂನ್ನಲ್ಇ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಮತ್ತು ನವೆಂಬರ್ನಲ್ಲಿ ತವರು ನೆಲದಲ್ಲಿ ನಡೆದ 50 ಓವರ್ಗಳ ವಿಶ್ವಕಪ್ ಎಂಬ ಎರಡು ಐಸಿಸಿ ಟ್ರೋಫಿಗಳಿಗೆ ರೋಹಿತ್ ಶರ್ಮಾ ಹತ್ತಿರವಾಗಿದ್ದರು. ಆದಾಗ್ಯೂ, ಎರಡೂ ಸಂದರ್ಭಗಳಲ್ಲಿ, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2013 ರ ಚಾಂಪಿಯನ್ಸ್ ಟ್ರೋಫಿಯ ನಂತರ ಸಿಗಬಹುದಾಗಿದ್ದ ಮೊದಲ ಐಸಿಸಿ ಟ್ರೋಫಿಯ ಅವಕಾಶವನ್ನು ತಪ್ಪಿಸಿತು.
Ed Sheeran singing a song for Rohit Sharma 's daughter Samiara. (BWC, Link in Description) pic.twitter.com/JWSSVTJDQi
— Selfless⁴⁵ (@SelflessCricket) April 12, 2024
ಪ್ರಸ್ತುತ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್ ಶರ್ಮಾ ಸಹ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರೊಂದಿಗೆ ತಮ್ಮ ತಂಡಕ್ಕೆ ಕೆಲವು ಸಕಾರಾತ್ಮಕ ಆರಂಭಗಳನ್ನು ನೀಡಿದ್ದಾರೆ. 2013ರಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಪ್ರಶಸ್ತಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿಲ್ಲ. ಸತತ ಮೂರು ಸೋಲುಗಳನ್ನು ಅನುಭವಿಸಿದ ನಂತರ ಗೆಲುವಿನ ಹಾದಿಗೆ ಮರಳಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬಯಿ ಇಂಡಿಯನ್ಸ್ ಆರನೇ ಪ್ರಶಸ್ತಿಯ ವಿಶ್ವಾಸದಲ್ಲಿದೆ.
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ನಾಯಕತ್ವ
ಈ ಋತುವಿನ ಎರಡು ಕೆಟ್ಟ ತಂಡಗಳಾದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಗೆಲುವು ಸಾಧಿಸಿದೆ. ವಾಂಖೆಡೆಯಲ್ಲಿ ಡಿಸಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿನ ಓಟ ಪ್ರಾರಂಭವಾಯಿತು. ಅಲ್ಲಿ ಅವರು ಈ ಋತುವಿನ 3 ನೇ ಗರಿಷ್ಠ ದೊಡ್ಡ ಮೊತ್ತವಾಗಿರುವ 235 ರನ್ ದಾಖಲಿಸಿದರು. ಇದನ್ನು ಎದುರಾಳಿ ತಂಡವು ಬೆನ್ನಟ್ಟಲು ವಿಫಲವಾಯಿತು ಮತ್ತು ಮುಂಬಯಿಗೆ 29 ರನ್ಗಳ ಗೆಲುವು ದೊರಕಿತು.
ಇದನ್ನೂ ಓದಿ: Glenn Maxwell : ಸರಿಯಾಗಿ ಆಡದ ಮ್ಯಾಕ್ಸ್ವೆಲ್ಗೆ ಮನೆ ದಾರಿ ತೋರಿಸಿದ ಆರ್ಸಿಬಿ!
ಮೊದಲ ಆರು ಓವರ್ಗಳಲ್ಲಿ ಸಾಧ್ಯವಾದಷ್ಟು ರನ್ ಗಳಿಸುವ ಜವಾಬ್ದಾರಿಯನ್ನು ರೋಹಿತ್ ಶರ್ಮಾ ವಹಿಸಿಕೊಂಡರು. ರೋಹಿತ್ ಶರ್ಮಾ ಚೆಂಡನ್ನು ಹೊಡೆಯುತ್ತಿರುವ ರೀತಿಯನ್ನು ನೋಡಿದರೆ, ಹಿಟ್ಮ್ಯಾನ್ ದೊಡ್ಡ ಮೊತ್ತವನ್ನು ಪೇರಿಸುವ ಗುರಿಯನ್ನು ಹೊಂದಿರುವುದು ಸ್ಪಷ್ಟ.
ತಮ್ಮ ಭವಿಷ್ಯದ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
“ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್” ಪಾಡ್ಕಾಸ್ಟ್ನಲ್ಲಿ ಗೌರವ್ ಕಪೂರ್ ಅವರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ಇನ್ನೂ ಕೆಲವು ವರ್ಷಗಳ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ವಿಶ್ವಾಸವಿದೆ ಎಂದು ಬಹಿರಂಗಪಡಿಸಿದ್ದಾರೆ.
ಇನ್ನೂ ತಮ್ಮಲ್ಲಿ ಇನ್ನೂ 2-3 ವರ್ಷಗಳ ಕ್ರಿಕೆಟ್ ಉಳಿದಿದೆ. 36 ನೇ ವರ್ಷವಾಗಿದ್ದರೂ ಇನ್ನೂ ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ ಭಾರತದ ಉತ್ತಮ ಪಯಣಕ್ಕೆ ಆರಂಭಕ್ಕೆ ಅವರು ಏಕೈಕ ಕಾರಣರಾಗಿದ್ದರು. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದರು.
ಬೆನ್ ಸ್ಟೋಕ್ಸ್ ಪಡೆ ವಿರುದ್ಧದ ರೆಡ್-ಬಾಲ್ ಸರಣಿಯಲ್ಲಿ, ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಸೋತ ನಂತರ ಭಾರತಕ್ಕೆ ಹಿನ್ನಡೆ ಉಂಟಾಗಿತ್ತು. ಆದಾಗ್ಯೂ, ಅವರು ಮತ್ತು ಅವರ ತಂಡವು ಬಲವಾಗಿ ಉತ್ತರಿಸಿತ್ತು. ಉಳಿದ ಎಲ್ಲಾ 4 ಟೆಸ್ಟ್ಗಳನ್ನು ಗೆದ್ದು ಸರಣಿಯನ್ನು 4-1 ರಿಂದ ಗೆದ್ದುಕೊಂಡಿತು. ಆ ಸಂದರ್ಶನದಲ್ಲಿ, ರೋಹಿತ್ 2025 ರ ಡಬ್ಲ್ಯುಟಿಸಿ ಫೈನಲ್ ತನ್ನ ಮನದಲ್ಲಿದೆ. ಐಸಿಸಿ ಟ್ರೋಫಿ ಗೆಲ್ಲಲ್ಲು ಉತ್ಸುಕನಾಗಿದ್ದೇನೆ ಎಂಬುದನ್ನು ಒಪ್ಪಿಕೊಂಡರು.
“ಈ ಸಮಯದಲ್ಲಿ ನಾನು ಇನ್ನೂ ಉತ್ತಮವಾಗಿ ಆಡುತ್ತಿದ್ದೇನೆ. ಆದ್ದರಿಂದ ನಾನು ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಯಲಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ನಿಜವಾಗಿಯೂ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ, 2025 ರಲ್ಲಿ ಡಬ್ಲ್ಯುಟಿಸಿ ಫೈನಲ್ ಇದೆ. ಭಾರತವು ಅದನ್ನು ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.