ವಿಶಾಖಪಟ್ಟಣಂ: ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ (Ind vs eng) ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 106 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಓಲಿ ಪೋಪ್ (Ollie Pope) ಕ್ಯಾಚ್ ಹಿಡಿದು ಕ್ರಿಕೆಟ್ ಕ್ಷೇತ್ರದ ಮೆಚ್ಚುಗೆ ಗಳಿಸಿದೆ.
WHAT A CATCH FROM ROHIT SHARMA …!!! 🤯pic.twitter.com/7rPNYMw6pe
— Mufaddal Vohra (@mufaddal_vohra) February 5, 2024
ಪಂದ್ಯದಲ್ಲಿ ಆರ್ ಅಶ್ವಿನ್ ಸ್ಟಂಪ್ಗೆ ಹತ್ತಿರವಾಗಿ ಬೌಲಿಂಗ್ ಮಾಡಿದರು. ಪೋಪ್ ಅದನ್ನು ಕಟ್ ಆಡಲು ಯತ್ನಿಸಿದರು. ಚೆಂಡು ಅಂಚಿಗೆ ತಾಗಿತು. ಚೆಂಡು ಮೊದಲ ಸ್ಲಿಪ್ನಲ್ಲಿದ್ದ ರೋಹಿತ್ ಅವರ ಎಡಕ್ಕೆ ಭುಜದ ಎತ್ತರದಲ್ಲಿ ವೇಗವಾಗಿ ಹಾರಿತು. ಗಮನಾರ್ಹ ವೇಗದಲ್ಲಿ ರೋಹಿತ್ ಚೆಂಡನ್ನು ಹಿಡಿದರು ಅಲ್ಲದೆ ಪೋಪ್ ಅವರನ್ನು ಯಶಸ್ವಿಯಾಗಿ ಪೆವಿಲಿಯನ್ಎ ಕಳುಹಿಸಿದರು.
ಇದನ್ನೂ ಓದಿ : IND Vs ENG: 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಮುಯ್ಯಿಗೆ ಮುಯ್ಯಿ, ಸರಣಿ ಸಮ
ಭಾರತೀಯ ಕ್ರಿಕೆಟಿಗ ಮತ್ತು ಪಂದ್ಯದ ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ಈ ಕ್ಯಾಚ್ ಅನ್ನು ಅದ್ಭುತ ಎಂದು ಬಣ್ಣಿಸಿದರು. ರೋಹಿತ್ಗೆ ಚೆಂಡನ್ನು ಸ್ವೀಕರಿಸಲು ಒಂದು ಸೆಕೆಂಡಿಗಿಂತ ಕಡಿಮೆ ಅವಧಿ ಸಾಕಾಯಿತು ಎಂಬುದನ್ನು ಲೆಕ್ಕಾಚಾರ ಸಮೇತ ತೋರಿಸಿದರು. ನಿಖರವಾಗಿ 0.45 ಸೆಕೆಂಡುಗಳಲ್ಲಿ ಚೆಂಡು ರೋಹಿತ್ ಬೊಗಸೆ ಸೇರಿತ್ತು. ಇದು ರೋಹಿತ್ ಅವರ ಅಸಾಧಾರಣ ಸ್ಲಿಪ್ ಫೀಲ್ಡಿಂಗ್ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಇಂಗ್ಲೆಂಡ್ ವಿರುದ್ಧ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಜಿಗಿತ ಕಂಡ ಭಾರತ
ವಿಶಾಖಪಟ್ಟಣಂ: ಇಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2 ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ಟೀಮ್ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ಪಾಯಿಂಟ್ಸ್ ಪಟ್ಟಿಯಲ್ಲಿ (WTC Point Table) ಶೇಕಡಾವಾರು ಪ್ರಗತಿ ಸಾಧಿಸಿದೆ. ಜತೆಗೆ ಮೂರು ಸ್ಥಾನಗಳ ಜಿಗಿತ ಕಂಡಿದೆ. 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಈಗ ಗೆಲುವಿನ ಶೇಕಡಾವಾರು 52.78 ಹೊಂದಿದ್ದು, ಅಂಕಪಟ್ಟಿಯಲ್ಲಿ 2 ನೇ ಸ್ಥಾನಕ್ಕೆ ಏರಿದೆ.
2023-25ರ ಐಸಿಸಿ ಡಬ್ಲ್ಯುಟಿಸಿಯಲ್ಲಿ ಭಾರತ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆಲುವು, 2ರಲ್ಲಿ ಸೋಲು ಹಾಗೂ 1ರಲ್ಲಿ ಡ್ರಾ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿತ್ತು. ಈ ವೇಳೆ ಭಾರತ ಐದನೇ ಸ್ಥಾನಕ್ಕೆ ಇಳಿದಿತ್ತು. ಅದಕ್ಕಿಂತ ಹಿಂದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಸಹ ಭಾರತ ಕಳೆದುಕೊಂಡಿತ್ತು.
ಮತ್ತೊಂದೆಡೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ರಲ್ಲಿ ಮತ್ತೊಂದು ಪಂದ್ಯ ಸೋತ ನಂತರ ಇಂಗ್ಲೆಂಡ್ ಗೆಲುವಿನ ಶೇಕಡಾವಾರು ಕಳೆದುಕೊಂಡಿದೆ. ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 3 ಗೆಲುವು, 3 ಸೋಲು ಹಾಗೂ 1 ಡ್ರಾ ಸಾಧಿಸಿದೆ. ಈ ಹಿಂದೆ ಅವರು ಗೆಲುವಿನ ಶೇಕಡಾವಾರು 29.16 ರಷ್ಟಿದ್ದರು. ಈಗ, ಅವರು 25.0 ಪಾಯಿಂಟ್ ಹೊಂದಿದೆ.
ಏತನ್ಮಧ್ಯೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ಪಾಯಿಂಟ್ಸ್ ಟೇಬಲ್ ಮೇಲೆ ಪರಿಣಾಮ ಬೀರಲಿದೆ. ಪಾಯಿಂಟ್ಸ್ ಟೇಬಲ್ನ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕ್ರಮವಾಗಿ 2 ಮತ್ತು 3 ನೇ ಸ್ಥಾನದಲ್ಲಿವೆ.