ಹೈದರಾಬಾದ್: ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ (Ind vs Eng) 28 ರನ್ಗಳ ಸೋಲು ಅನುಭವಿಸಿ ಮುಖಭಂಗಕ್ಕೆ ಈಡಾಗಿದೆ. ಇದರ ಜತೆಗೆ ಭಾರತ 91 ವರ್ಷಗಳ ಬಳಿಕ ಕಳಪೆ ದಾಖಲೆಯೊಂದನ್ನು ಮಾಡಿದೆ. 100 ಅಥವಾ ಅದಕ್ಕಿಂತ ಹೆಚ್ಚು ರನ್ಗಳ ಮುನ್ನಡೆ ಸಾಧಿಸಿದ ನಂತರ ಭಾರತ ತಂಡವು ಟೆಸ್ಟ್ ಪಂದ್ಯದಲ್ಲಿ ಸೋಲುತ್ತಿರುವುದು 91 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ.
2ನೇ ದಿನದಾಟದ ಅಂತ್ಯದವರೆಗೂ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ನಂತರ ಆಘಾತಕಾರಿ ತಿರುವು ಭಾರತವನ್ನು ಹತಾಶೆಗೆ ದೂಡಿತು. ರೋಹಿತ್ ಆ್ಯಂಡ್ ಕಂಪನಿಯು ಮೊದಲ ಇನ್ನಿಂಗ್ಸ್ ರನ್ಗಳ ಪರ್ವತವನ್ನು ದಾಖಲಿಸುವ ಸೂಚನೆ ನೀಡಿದರೂ ಅಂತಿಮವಾಗಿ 190ಕ್ಕೆ ಅಂತರಕ್ಕೆ ಸೀಮಿತಗೊಂಡಿತು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್ ಒಲಿ ಪೋಪ್ ಅವರ ಅಮೋಘ 196 ರನ್ ಗಳಿಸುವ ಮೂಲಕ ಮೂರನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಅನ್ನು ದೊಡ್ಡ ಮೊತ್ತದೆಡೆಗೆ ಮುನ್ನಡೆಸಿದರು. ಅತೆಯೇ ಭಾರತಕ್ಕೆ 231 ರನ್ಗಳ ಚೇಸಿಂಗ್ ಅವಕಾಶ ದೊರೆಯಿತು. ಆದರೆ, 202 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಟೆಸ್ಟ್ ದಾಖಲೆ ಬರೆದ ಭಾರತ
ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1932ರಲ್ಲಿ ಆಡಿತು. ಕಳೆದ 10 ದಶಕಗಳಲ್ಲಿ ಅವರು 100 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳ ಮುನ್ನಡೆ ಸಾಧಿಸಿದ ನಂತರ ಸ್ಪರ್ಧೆಯಲ್ಲಿ ಸೋತಿರಲಿಲ್ಲ. ವಾಸ್ತವವಾಗಿ, ಮೊದಲ ಇನ್ನಿಂಗ್ಸ್ ಲಾಭವನ್ನು ದೊಡ್ಡ ಪ್ರಮಾಣದಲ್ಲಿ ಪಡೆದ ನಂತರ ತಂಡವೊಂದು ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ.
ಇದಕ್ಕೂ ಮುನ್ನ 2001ರಲ್ಲಿ ಕೋಲ್ಕತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 274 ರನ್ಗಳ ಕೊರತೆಯನ್ನು ನೀಗಿಸುವ ಮೂಲಕ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇದನ್ನೂ ಓದಿ : ಹಣ್ಣು ಎಸೆದು ಬೌಲಿಂಗ್ ಮಾಡುತ್ತಿದ್ದ ಜೋಸೆಫ್ ಈಗ ವಿಶ್ವದ ಡೆಡ್ಲಿ ಬೌಲರ್; ಇಲ್ಲಿದೆ ರೋಚಕ ಕಥೆ
ಈ ಸಂದರ್ಭದಲ್ಲಿ ಇಂಗ್ಲೆಂಡ್ ತನ್ನ 190 ರನ್ ಗಳ ಕೊರತೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಯಿತು. ಪೋಪ್ ಅವರ ಜೀವಮಾನದ ಶ್ರೇಷ್ಠ ಪ್ರದರ್ಶನ ನೀಡಿದರು. 1964ರಲ್ಲಿ ಭಾರತ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ 65 ರನ್ಗಳ ಹಿನ್ನಡೆಗೆ ಒಳಗಾಗಿತ್ತು ಆದರೆ, ಆದಾಗ್ಯೂ ಪಂದ್ಯವನ್ನು ಗೆದ್ದಿತ್ತು. ಇದು ಭಾರತ ಪ್ರವಾಸದಲ್ಲಿ ಮೊದಲ ಇನಿಂಗ್ಸ್ ಹಿನ್ನಡೆ ಹೊರತಾಗಿಯೂ ಗೆಲುವು ಪಡೆದ ಮೊದಲ ತಂಡ.
ಪಂತ್ ಇದ್ದಿದ್ದರೆ ಭಾರತ ತಂಡ ಸೋಲುತ್ತಿರಲಿಲ್ಲ ಎಂದ ಅಭಿಮಾನಿಗಳು
ಬೆಂಗಳೂರು: ಇಂಗ್ಲೆಂಡ್(IND vs ENG) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತ ಬಳಿಕ ಅಭಿಮಾನಿಗಳು ರಿಷಭ್ ಪಂತ್(Rishabh Pant) ಅವರನ್ನು ನೆನೆಸಿಕೊಂಡಿದ್ದಾರೆ. ಪಂತ್ ಇದ್ದಿದ್ದರೆ ಪಂದ್ಯದ ಕತೆಯೇ ಬೇರೆ ಆಗುತ್ತಿತ್ತು. ಸೋಲುವ ಗತಿ ಟೀಮ್ ಇಂಡಿಯಾಕ್ಕೆ ಬರುತ್ತಿರಲಿಲ್ಲ ಎಂದು ಮರುಗಿದ್ದಾರೆ.
ರಿಷಭ್ ಪಂತ್ ಅವರು ಹಲವು ಟೆಸ್ಟ್ ಪಂದ್ಯಗಳಲ್ಲಿ ತಂಡ ಸಂಕಷ್ಟದಲ್ಲಿರುವಾಗ ಕೆಳ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿ ಅದೆಷ್ಟೋ ಬಾರಿ ಪಂದ್ಯ ಗೆಲ್ಲಿಸಿದ್ದು ಇದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಮೂರು ವರ್ಷಗಳ ಹಿಂದೆ ಗಬ್ಬಾ ಮೈದಾನದಲ್ಲಿ ಆಡಿದ್ದ ಇನಿಂಗ್ಸ್ ಯಾರೂ ಮರೆಯಲು ಸಾಧ್ಯವಿಲ್ಲ. ಇತ್ತೀಚೆಗೆ ಬಿಸಿಸಿಐ ಜೀವಮಾನದ ಸಾಧನೆಗಾಗಿ ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿಯಿಂದ ಗೌರವಿತರಾದ ರವಿಶಾಸ್ತ್ರಿ ಕೂಡ ಈ ಪ್ರಶಸ್ತಿ ಪಡೆದ ಬಳಿಕ ಮಾತನಾಡುವ ವೇಳೆ ತಮ್ಮ ಜೀವಮಾನದ ಅತ್ಯದ್ಭುತ ಪಂದ್ಯವೆಂದರೆ ಅದು ರಿಷಭ್ ಪಂತ್ ಆಡಿದ ಆಸೀಸ್ ವಿರುದ್ಧದ ಗಬ್ಬಾ ಟೆಸ್ಟ್ ಪಂದ್ಯ. ಪಂತ್ ನಾನು ಕಂಡ ಶ್ರೇಷ್ಠ ಕ್ರಿಕೆಟಿಗ ಎಂದು ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದರು.
2021ರಲ್ಲಿ ಗಬ್ಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ 100 ಓವರ್‌ಗಳಲ್ಲಿ ಭಾರತ ಗೆಲುವಿಗೆ 328 ರನ್ ಗಳಿಸ ಬೇಕಿತ್ತು. ಅಂತಿಮ ದಿನ ಪಂದ್ಯ ಹೇಗೂ ತಿರುವು ಪಡೆಯಬಹುದಿತ್ತು. ಗೆದ್ದರೆ ಆಸ್ಟ್ರೇಲಿಯ ಗೆದ್ದೀತು, ಇಲ್ಲವೇ ಪಂದ್ಯ ಡ್ರಾ ಆದೀತು, ಆದರೆ ಭಾರತಕ್ಕೆ ಗೆಲುವು ಒಲಿಯುವುದು ಕಷ್ಟ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಅಲ್ಲದೇ ಬ್ರಿಸ್ಬೇನ್ ಅಂಗಳದ ಅಷ್ಟೂ ದಾಖಲೆಗಳು ಆಸ್ಟ್ರೇಲಿಯದ ಪರವಾಗಿದ್ದವು.